ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ ಎಂದ ಕೇರಳ ಕಾಂಗ್ರೆಸ್ ಮಾಜಿ ಶಾಸಕ

|
Google Oneindia Kannada News

ತಿರುವನಂತಪುರಂ, ಜೂನ್ 25: ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿ ಸೇರುತ್ತೇನೆಂದು ಕಾಂಗ್ರೆಸ್ ನ ಮಾಜಿ ಶಾಸಕ ಎಪಿ ಅಬ್ದುಲ್ಲಾಕುಟ್ಟಿ ಘೋಷಿಸಿದ್ದಾರೆ.

ಕೇರಳದ ಕನ್ನೂರು ಕ್ಷೇತ್ರದ ಶಾಸಕ ಅಬ್ದುಲ್ಲಾ ಕುಟ್ಟಿ ಅವರು ಇತ್ತೀಚೆಗೆ ಪ್ರಕಟವಾದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅಭೂತಪೂರ್ವ ಜಯ ಸಾಧಿಸಿದ್ದನ್ನು ಕೊಂಡಾಡಿದ್ದರು.

ಇದರಿಂದ ಮುಜುಗರಕ್ಕೀಡಾದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಪ್ರಧಾನಿ ಮೋದಿಯನ್ನು ಹೊಗಳಿದ್ದ ನಾಯಕನಿಗೆ ಕಾಂಗ್ರೆಸ್‌ ಗೇಟ್‌ಪಾಸ್ ಪ್ರಧಾನಿ ಮೋದಿಯನ್ನು ಹೊಗಳಿದ್ದ ನಾಯಕನಿಗೆ ಕಾಂಗ್ರೆಸ್‌ ಗೇಟ್‌ಪಾಸ್

ಈ ಬೆಳವಣಿಗೆಯ ನಂತರ ಬಿಜೆಪಿ ಸೇರಲು ನಿರ್ಧರಿಸಿರುವ ಅಬ್ದುಲ್ಲಾ ಕುಟ್ಟಿ, ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಓದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.

Kerala Congress Ex MLA to join BJP soon

"ನಮ್ಮ ಭೇಟಿ ಫಲಪ್ರದವಾಗಿದೆ. ನಾವು ಹಲವು ವಿಷಯಗಲ ಬಗ್ಗೆ ಚರ್ಚಿಸಿದೆವು. ನನ್ನನ್ನು ಪಕ್ಷಕ್ಕೆ ಅವರು ಸ್ವಾಗತಿಸಿದ್ದಾರೆ. ನಾನು ಸದ್ಯದಲ್ಲೇ ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದರು.

ಗಾಂಧಿ ಮೌಲ್ಯ ಪಾಲಿಸುವ ಮೋದಿ: ಮುಸ್ಲಿಂ ಮುಖಂಡನ ಶ್ಲಾಘನೆಯಿಂದ 'ಕೈ'ಗೆ ಮುಜುಗರಗಾಂಧಿ ಮೌಲ್ಯ ಪಾಲಿಸುವ ಮೋದಿ: ಮುಸ್ಲಿಂ ಮುಖಂಡನ ಶ್ಲಾಘನೆಯಿಂದ 'ಕೈ'ಗೆ ಮುಜುಗರ

ಲೋಕಸಭೆ ಚುನಾವಣೆಯ ನಂತರ ಮಾತನಾಡಿದ್ದ ಕುಟ್ಟಿ, "ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾವನ್ನು ಒಪ್ಪಿಕೊಂಡ ಜನರು ಅವರಿಗೆ ಈ ಭರ್ಜರಿ ಗೆಲುವು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದೇ ಅವರ ಯಶಸ್ಸಿನ ರಹಸ್ಯ. ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಯೋಜನೆ ಮನೆಮನೆಗಳಲ್ಲಿ ಹಾಗೂ ಸಮುದಾಯಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದೆ" ಎಂದಿದ್ದರು.

English summary
Former Congress lawmaker from Kerala’s Kannur AP Abdullakutty said that he would formally join the BJP soon. Congress MLA Abdullakutty to join BJP officially.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X