ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವ ಜಯಂತಿಗೆ ಕನ್ನಡದಲ್ಲಿ ಶುಭಕೋರಿದ ಕೇರಳ ಮುಖ್ಯಮಂತ್ರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಮಹಾ ಶಿವಶರಣ, ಅನುಭವ ಮಂಟಪ ಸಂಸ್ಥಾಪಕ, ಕ್ರಾಂತಿಯೋಗಿ ಬಸವಣ್ಣ ಜಯಂತಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದ ದೇಶದ ಹಲವು ಪ್ರಮುಖರು ಶುಭಕೋರಿದ್ದಾರೆ.

ನೆರೆ ರಾಜ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಸವ ಜಯಂತಿಗೆ ಕನ್ನಡದಲ್ಲಿ ಶುಭಕೋರಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Kerala CM Wish To Basava Jayanthi In Kannada

ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ!ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ!

''ನಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ ಬೆಳೆಯಲು ಬಸವಣ್ಣ ನಮಗೆ ಮಾರ್ಗದರ್ಶಿಯಾಗಲಿ. ನಾವು ಕೊರೊನಾ ವಿರುದ್ಧ ಪ್ರತ್ಯೇಕವಾಗಿ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ. ಈ ಸಾಂಕ್ರಾಮಿಕ ರೋಗವನ್ನು ಗೆಲ್ಲಲು ನಾವೆಲ್ಲ ಒಂದಾಗಿ ಹೋರಾಡಬೇಕಿದೆ'' ಎಂದು ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್ ಬಸವಣ್ಣ ಅವರ ವಚನದ ಸಾಲುಗಳನ್ನು ಕೂಡ ಬಳಸಿದ್ದಾರೆ.

"ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ.

ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ." ಎಂಬ ಸಾಲು ಬಳಸುವ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ವಿಶ್ವಗುರುವನ್ನು ಸ್ಮರಿಸಿದ್ದಾರೆ.

ಬಸವ ಜಯಂತಿ; ಸಮಾಜ ಸುಧಾಕರಣೆಯ ಆಶಯ ಪಾಲಿಸೋಣಬಸವ ಜಯಂತಿ; ಸಮಾಜ ಸುಧಾಕರಣೆಯ ಆಶಯ ಪಾಲಿಸೋಣ

ಕೇರಳ ಮುಖ್ಯಮಂತ್ರಿ ಮಾತ್ರವಲ್ಲ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಬಸವಣ್ಣ ಅವರನ್ನು ಸ್ಮರಿಸಿದ್ದಾರೆ.

'ಮಹಾನ್ ಸಂತ, ಕವಿ ಮತ್ತು ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣ ಅವರ ಜಯಂತಿಯಂದು ನಾನು ಅವರಿಗೆ ಶಿರಬಾಗಿ ನಮಿಸುತ್ತೇನೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ದೃಢವಾಗಿ ಹೋರಾಡಿದ್ದ ಬಸವಣ್ಣನವರ ಬೋಧನೆಗಳು ಎಲ್ಲಾ ಗಡಿಗಳನ್ನೂ ಮೀರಿ 'ಮಾನವೀಯತೆ ಎಲ್ಲಕ್ಕಿಂತಲೂ ಮಿಗಿಲು' ಎಂಬ ಸಂದೇಶವನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ' ಎಂದು ಶುಭಾಶಯ ತಿಳಿಸಿದ್ದಾರೆ.

English summary
Kerala Chief minister Pinarayi Vijayan And central home minister has wish to Basava jayanthi in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X