ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಚುನಾವಣೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ತಿ ಘೋಷಣೆ

|
Google Oneindia Kannada News

ತಿರುವನಂತಪುರಂ, ಮಾರ್ಚ್ 17: ಕೇರಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿವೆ.

ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಣ್ಣೂರು ಜಿಲ್ಲೆಯ ಧರ್ಮದಂ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ತಮ್ಮ ಒಟ್ಟಾರೇ ಆಸ್ತಿ ಮೌಲ್ಯ 54 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ

2020-21ರಲ್ಲಿ ತಮ್ಮ ಒಟ್ಟಾರೇ ಆದಾಯವನ್ನು 2.87,860 ರೂ. ಎಂದು ಅಫಿಡವಿಟ್ ನಲ್ಲಿ ತೋರಿಸಿದ್ದಾರೆ. ಆಕೆಯ ಪತ್ನಿ ಕಮಲಾ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 5, 47, 803,21 ರೂ ನಗದು ಹೊಂದಿದ್ದು, ಒಟ್ಟಾರೆಯಾಗಿ 35 ಲಕ್ಷ ಮೊತ್ತದ ಆಸ್ತಿ ಹೊಂದಿದ್ದಾರೆ. ತಮ್ಮ ವಿರುದ್ಧದ ಎರಡು ಕೇಸ್ ಗಳ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವುದಾಗಿ ಪಿಣರಾಯ್ ವಿಜಯನ್ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ.

Kerala CM Pinarayi Vijayan Has Total Assets Worth Rs 54 Lakh

ಸೋಮವಾರ ನಾಮಪತ್ರ ಸಲ್ಲಿಸಿದ್ದ ವಿಜಯನ್, ಮನೆ, ಎರಡು ಫ್ಲಾಟ್ ಸೇರಿದಂತೆ 51.95 ಲಕ್ಷ ಮೊತ್ತದ ಸ್ಥಿರಾಸ್ತಿ ಹಾಗೂ ಥಲಾಸೆರಿ ಶಾಖೆಯ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 78,048, 51 ನಗದು, ಮಲಯಾಳಂ ಕಮ್ಯೂನಿಕೇಷನ್ ಲಿಮಿಟೆಡ್ ನಲ್ಲಿ 10 ಸಾವಿರ ಮೊತ್ತದ 1 ಸಾವಿರ ಷೇರುಗಳು, ಕೆಐಎಎಲ್ ನಲ್ಲಿ 1 ಲಕ್ಷ ರೂ. ಮೊತ್ತದ ಷೇರು ಸೇರಿದಂತೆ 2.04 ಲಕ್ಷ ಮೊತ್ತದ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಕೇರಳದ 14 ಜಿಲ್ಲೆಗಳಲ್ಲಿನ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಚುನಾವಣೆ ನಡೆಯಲಿದೆ. ಮಾರ್ಚ್ 12ರಂದು ಅಧಿಸೂಚನೆ ಪ್ರಕಟ ಮಾರ್ಚ್ 20ರಂದು ನಾಮಪತ್ರ ಪರಿಶೀಲನೆ ಮಾರ್ಚ್ 22ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ.

ಏಪ್ರಿಲ್ 6 ರಂದು ಮತದಾನ ಮೇ 2 ರಂದು ಮತ ಎಣಿಕೆ, ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. 2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು.

Recommended Video

Modi's best 3 advise to avoid covid 19 | Oneindia Kannada

ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು. ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

English summary
Kerala Chief Minister Pinarayi Vijayan has declared assets worth Rs 54 lakh while submitting his nomination for the April 6 assembly polls from the Dharmadam constituency in Kannur district. Vijayan, who filed his nomination on Monday, submitted he has immovable assets worth Rs 51.95 lakh, including two plots with a house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X