ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದ ಅತಿ ಕಿರಿಯ ಅಭ್ಯರ್ಥಿ ರೇಷ್ಮಾ

|
Google Oneindia Kannada News

ಪಥನಂತಿಟ್ಟ, ಡಿ. 16: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಪಂಚಾಯಿತಿಗೆ ಆಯ್ಕೆಯಾದ ಸಾಧನೆ ದಾಖಲಾಗಿದೆ. ಕೊನ್ನಿ ಪಂಚಾಯತಿಯಿಂದ ಆಯ್ಕೆಯಾಗಿರುವ ರೇಷ್ಮಾ ಮರಿಯಂ ರಾಯ್ ವಯಸ್ಸು 21 ವರ್ಷ ಮಾತ್ರ.

ಕೊನ್ನಿ ಆರುವಪುಳಂ ಪಂಚಾಯತಿಯ 11 ವಾರ್ಡ್ ನಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇಷ್ಮಾ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕುತೂಹಲ ಮೂಡಿತ್ತು. ನವೆಂಬರ್ 19ರಂದು ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕವಾಗಿತ್ತು.

ಎದುರಾಳಿಗೆ ಸೊನ್ನೆ ಮತ, ಪಕ್ಷೇತರ ಅಭ್ಯರ್ಥಿ ಫೈಸಲ್‌ಗೆ ಜಯ!ಎದುರಾಳಿಗೆ ಸೊನ್ನೆ ಮತ, ಪಕ್ಷೇತರ ಅಭ್ಯರ್ಥಿ ಫೈಸಲ್‌ಗೆ ಜಯ!

ಇದಕ್ಕೂ ಒಂದು ದಿನ ಮುನ್ನ ನಾಮಪತ್ರ ಸಲ್ಲಿಸಲು ಬೇಕಾದ ಕನಿಷ್ಠ ವಯಸ್ಸು 21ಕ್ಕೆ ರೇಷ್ಮಾ ಕಾಲಿರಿಸಿದರು. ಹೀಗಾಗಿ, 21 ವರ್ಷ ಒಂದು ದಿನ ವಯಸ್ಸಿನ ರೇಷ್ಮಾ ನಾಮಪತ್ರ ಸಲ್ಲಿಸಲು ಸಾಧ್ಯವಾಯಿತು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯ ಅತಿ ಕಿರಿಯ ಅಭ್ಯರ್ಥಿ ಎನಿಸಿಕೊಂಡರು.

ಕೊಚ್ಚಿ: ಒಂದು ಮತದ ಅಂತರದಲ್ಲಿ ಬಿಜೆಪಿಗೆ ಅಚ್ಚರಿ ಜಯಕೊಚ್ಚಿ: ಒಂದು ಮತದ ಅಂತರದಲ್ಲಿ ಬಿಜೆಪಿಗೆ ಅಚ್ಚರಿ ಜಯ

ಕಾಂಗ್ರೆಸ್ ಬೆಂಬಲಿತ ಕುಟುಂಬ

ಕಾಂಗ್ರೆಸ್ ಬೆಂಬಲಿತ ಕುಟುಂಬ

ರೇಷ್ಮಾ ಅವರ ಕುಟುಂಬ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿತ್ತು. ಆದರೆ, ಈ ಬಾರಿ ಸಿಪಿಐ ಅಭ್ಯರ್ಥಿಯಾಗಲು ಕರೆ ಬಂದಾಗ ಸಂತಸದಿಂದ ಸ್ವೀಕರಿಸಿದರು. ಬಿರುಸಿನ ಚುನಾವಣಾ ಪ್ರಚಾರ ನಡೆಸಿ, ಜನರ ಆಶೋತ್ತರಗಳನ್ನು ಆಲಿಸಿದರು. ಜನರಲ್ಲಿ ಹೊಸ ಭರವಸೆ ಮೂಡಿಸಿದರು.

ಎಸ್ಎಫ್ಐ ಸದಸ್ಯೆ

ಎಸ್ಎಫ್ಐ ಸದಸ್ಯೆ

ಕೊನ್ನಿ ವಿಎನ್ಎಸ್ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ರೇಷ್ಮಾ ಅವರು ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಸಕ್ರಿಯ ಸದಸ್ಯೆಯಾಗಿದ್ದಾರೆ. DYFI ಜಿಲ್ಲಾ ಘಟಕ ಸಮಿತಿಯ ಪ್ರಮುಖ ಸದಸ್ಯೆಯಾಗಿದ್ದಾರೆ. ಈ ಬಾರಿ ಪಂಚಾಯಿತಿ ಚುನಾವಣೆಯಲ್ಲಿ ಯುಡಿಎಫ್ ಹಾಗೂ ಎಲ್ ಡಿ ಎಫ್ ನಡುವೆ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿತ್ತು. ಯುವ ಅಭ್ಯರ್ಥಿಯನ್ನು ಸಿಪಿಐ ಆಯ್ಕೆ ಮಾಡಿ ಗೆದ್ದಿದೆ.

LDF ವಶದಲ್ಲಿದ್ದ ಐತಿಹಾಸಿಕ ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆLDF ವಶದಲ್ಲಿದ್ದ ಐತಿಹಾಸಿಕ ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆ

ಕೊನ್ನಿ ಆರುವಪುಳಂ ಪಂಚಾಯತಿ ಫಲಿತಾಂಶ

ಕೊನ್ನಿ ಆರುವಪುಳಂ ಪಂಚಾಯತಿ ಫಲಿತಾಂಶ

ಪಥನಂತಿಟ್ಟನಲ್ಲಿ 54 ಗ್ರಾಮ ಪಂಚಾಯಿತಿಗಳಿದ್ದು, ಕೊನ್ನಿ ಆರುವಪುಳಂ ಗ್ರಾಮ ಪಂಚಾಯಿತಿಯಲ್ಲಿ 15 ವಾರ್ಡ್ ಗಳಿವೆ.

ಕೊನ್ನಿ ಆರುವಪುಳಂ ಪಂಚಾಯತಿ ಫಲಿತಾಂಶ 2020: 11ನೇ ವಾರ್ಡಿನಿಂದ 21ವರ್ಷ ವಯಸ್ಸಿನ ರೇಷ್ಮಾಗೆ ಗೆಲುವು. ಎಲ್ ಡಿ ಎಫ್ ಅಭ್ಯರ್ಥಿ ರೇಷ್ಮಾಗೆ 450 ಮತಗಳು, ಪ್ರತಿಸ್ಪರ್ಧಿ ಯುಡಿಎಫ್ ಅಭ್ಯರ್ಥಿ ಸುಜಾತಾ ಮೋಹನ್ ಗೆ 380 ಮತಗಳು

ಸ್ಥಳೀಯ ಸಂಸ್ಥೆ ಚುನಾವಣೆ

ಸ್ಥಳೀಯ ಸಂಸ್ಥೆ ಚುನಾವಣೆ

941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.

ಕೋಟ್ಯಾಧಿಪತಿಯಾಗಲು ನಿಮಗೆ ಇಲ್ಲಿದೆ ಅವಕಾಶ!

English summary
Kerala Civic Polls results:Youngest candidate Reshma Mariam Roy wins from Konni Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X