• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎದುರಾಳಿಗೆ ಸೊನ್ನೆ ಮತ, ಪಕ್ಷೇತರ ಅಭ್ಯರ್ಥಿ ಫೈಸಲ್‌ಗೆ ಜಯ!

|

ಕೋಯಿಕ್ಕೋಡ್, ಡಿ. 16: ವಿವಾದಿತ ಪಕ್ಷೇತರ ಅಭ್ಯರ್ಥಿ ಕರಟ್ ಫೈಸಲ್ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಕೊಡುವಳ್ಳಿ ಮುನ್ಸಿಪಾಲಿಟಿ 15ನೇ ವಾರ್ಡಿನಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಫೈಸಲ್ ಅವರ ಎದುರಾಳಿಯಾಗಿದ್ದ ಪ್ರಮುಖ ಪಕ್ಷಗಳ ಅಭ್ಯರ್ಥಿ ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ.

ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವು ಬುಧವಾರದಂದು ಪ್ರಕಟವಾಗಲಿದೆ. ಹಲವು ಯುಡಿಎಫ್, ಎಲ್ ಡಿಎಫ್ ನಡುವಿನ ನೇರ ಸ್ಪರ್ಧೆಯ ನಡುವೆ ಬಿಜೆಪಿ ನೇತೃತ್ವದ ಎನ್ಡಿಎ ಹಲವು ಪಾಲಿಕೆ, ನಗರಸಭೆ, ಪಂಚಾಯಿತಿಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ.

LDF ವಶದಲ್ಲಿದ್ದ ಐತಿಹಾಸಿಕ ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆLDF ವಶದಲ್ಲಿದ್ದ ಐತಿಹಾಸಿಕ ಪಂಡಾಲಂ ಮುನ್ಸಿಪಾಲಿಟಿ ಬಿಜೆಪಿ ವಶಕ್ಕೆ

ಫೈಸಲ್ ಅಮೋಘ ಜಯ: ಫೈಸಲ್ ಅವರು 568 ಮತಗಳನ್ನು ಗಳಿಸಿ ಜಯ ದಾಖಲಿಸಿದ್ದರೆ, ಎಲ್ ಡಿ ಎಫ್ ಹಾಗೂ ಐಎನ್ಎಲ್ ಮುಖಂಡ ಅಬ್ದುಲ್ ರಷೀದ್ ಅವರು ಒಂದೇ ಒಂದು ಮತ ಪಡೆದುಕೊಂಡಿಲ್ಲ.

ಫೈಸಲ್ ಸ್ಪರ್ಧೆ ವಿವಾದ

ಫೈಸಲ್ ಸ್ಪರ್ಧೆ ವಿವಾದ

ಸಿಪಿಎಂ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಮೊದಲಿಗೆ ಕರಟ್ ಫೈಸಲ್ ಕಣಕ್ಕಿಳಿದಿದ್ದರು. ಆದರೆ, ಸ್ವಪ್ನ ಸುರೇಶ್ ಆರೋಪಿಯಾಗಿರುವ ಕೇರಳದ ಚಿನ್ನದ ಸ್ಮಗಲಿಂಗ್ ಕೇಸಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕರಟ್ ಫೈಸಲ್ ವಿಚಾರಣೆ ನಡೆಸಿದ ಬಳಿಕ ಎಲ್ ಡಿಎಫ್ ತನ್ನ ಬೆಂಬಲವನ್ನು ಹಿಂಪಡೆದುಕೊಂಡಿತ್ತು. ಎಲ್ ಡಿ ಎಫ್ ನಿಂದ ಅಬ್ದುಲ್ ರಷೀದ್ ಅಭ್ಯರ್ಥಿಯಾಗಿದ್ದರು.

ಫೈಸಲ್ ಅವರು 568 ಮತ ಗಳಿಸಿ ಜಯ

ಫೈಸಲ್ ಅವರು 568 ಮತ ಗಳಿಸಿ ಜಯ

ಫೈಸಲ್ ಅವರು 568 ಮತಗಳನ್ನು ಗಳಿಸಿ ಜಯ ದಾಖಲಿಸಿದ್ದಾರೆ. ಮಿಕ್ಕಂತೆ, ಮುಸ್ಲಿಂ ಲೀಗ್ ಅಭ್ಯರ್ಥಿ ಕೆಕೆ ಖಾದರ್ 495 ಮತ ಗಳಿಸಿದ್ದರೆ, ಎನ್ಡಿಎ ಅಭ್ಯರ್ಥಿ ಪಿ.ಟಿ ಸದಾಶಿವನ್ 50 ಮತ ಗಳಿಸಿದ್ದಾರೆ. ಕೊಡುವಳ್ಳಿ ಮುನ್ಸಿಪಾಲಿಟಿಯಲ್ಲಿ 36 ಸ್ಥಾನಗಳ ಪೈಕಿ ಯುಡಿಎಫ್ 13 ಸ್ಥಾನಗಳಿಸಿದ್ದು, 15ರಲ್ಲಿ ಮುನ್ನಡೆ ಗಳಿಸಿದೆ, ಎಲ್ ಡಿಎಫ್ 4 ಸ್ಥಾನ ಗೆದ್ದಿದೆ. ಫೈಸಲ್ ಗೆಲುವು ಸಾಧಿಸಿದ ಏಕೈಕ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.

ತಿರುವನಂತಪುರಂ ಮೇಯರ್ ಸೋಲಿಸಿದ ಬಿಜೆಪಿ ಅಭ್ಯರ್ಥಿತಿರುವನಂತಪುರಂ ಮೇಯರ್ ಸೋಲಿಸಿದ ಬಿಜೆಪಿ ಅಭ್ಯರ್ಥಿ

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

ಸ್ಥಳೀಯ ಸಂಸ್ಥೆ ಚುನಾವಣೆ: 941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿದ್ದು, ಒಟ್ಟಾರೆ, 76% ಮತದಾನ ದಾಖಲಾಗಿದೆ. ಡಿಸೆಂಬರ್ 16ರಂದು ಫಲಿತಾಂಶ ಹೊರ ಬರಲಿದೆ.

ಕೊಚ್ಚಿ: ಒಂದು ಮತದ ಅಂತರದಲ್ಲಿ ಬಿಜೆಪಿಗೆ ಅಚ್ಚರಿ ಜಯಕೊಚ್ಚಿ: ಒಂದು ಮತದ ಅಂತರದಲ್ಲಿ ಬಿಜೆಪಿಗೆ ಅಚ್ಚರಿ ಜಯ

ಕೋಯಿಕ್ಕೋಡ್ ಮುನ್ಸಿಪಾಲಿಟಿ ಕಾರ್ಪೊರೇಷನ್

ಕೋಯಿಕ್ಕೋಡ್ ಮುನ್ಸಿಪಾಲಿಟಿ ಕಾರ್ಪೊರೇಷನ್

ಕೋಯಿಕ್ಕೋಡ್ ಮುನ್ಸಿಪಾಲಿಟಿ ಕಾರ್ಪೊರೇಷನ್ ಅಡಿಯಲ್ಲಿ ವಡಕ್ಕಾರ (47 ಸ್ಥಾನ), ಕೊಯಿಲಾಂಡಿ(44), ಪಯೋಲಿ(36), ಕೊಡುವಳ್ಳಿ(36), ಮುಕ್ಕಂ(33), ರಾಮನಟ್ಟುಕ್ಕರ(31) ಹಾಗೂ ಫೆರೋಕೆ (38) ಒಟ್ಟು 7 ಮುನ್ಸಿಪಾಲಿಟಿ ಹಾಗೂ 265 ಸದಸ್ಯ ಸ್ಥಾನಕ್ಕಾಗಿ ಚುನಾವಣೆ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿತದೃಷ್ಟಿಯಿಂದ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಲ್ಲದೆ ಬಿಜೆಪಿ ನೇತೃತ್ವದ ಎನ್ಡಿಎ ಸೆಣಸಾಡುತ್ತಿವೆ.

'ತ್ರಿಶ್ಶೂರಿನ ಗುಜರಾತ್‌'ನಲ್ಲಿ ಬಿಜೆಪಿಗೆ ಆಘಾತ'ತ್ರಿಶ್ಶೂರಿನ ಗುಜರಾತ್‌'ನಲ್ಲಿ ಬಿಜೆಪಿಗೆ ಆಘಾತ

English summary
Kerala Civic Polls results: Independent candidate Karat Faisal wins Koduvally muncipality in Kozhikode against LDF candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X