ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸ್ಥಳೀಯ ಸಂಸ್ಥೆ ಉಪಚುನಾವಣೆ: 30ರಲ್ಲಿ 16 ಸ್ಥಾನ ಎಲ್ ಡಿಎಫ್ ಗೆ

|
Google Oneindia Kannada News

ತಿರುವನಂತಪುರ, ಫೆಬ್ರವರಿ 16: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿವಾದ ಹೊರತಾಗಿಯೂ ಕೇರಳ ರಾಜ್ಯದ ವಿವಿಧೆಡೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಉಪಚುನಾವಣೆಯಲ್ಲಿ 30 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್ ಡಿಎಫ್ ಗೆದ್ದುಕೊಂಡಿದೆ. ಶುಕ್ರವಾರದಂದು ಫಲಿತಾಂಶ ಬಂದಿದೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಹನ್ನೆರಡು ಸ್ಥಾನಗಳನ್ನು ಪಡೆದಿದೆ. ರೆವಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ ನ ಭಿನ್ನಮತೀಯರು ಎರಡು ಸ್ಥಾನಗಳನ್ನು ಪಡೆದಿದ್ದಾರೆ. ಶಬರಿಮಲೆ ವಿಚಾರದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಈ ಚುನಾವಣೆ ಬಗ್ಗೆ ದೊಡ್ಡ ನಿರೀಕ್ಷೆಯಲ್ಲಿತ್ತು. ಆದರೆ ಒಂದು ಸ್ಥಾನ ಕೂಡ ಗೆಲ್ಲಲು ಆಗಿಲ್ಲ.

ಮಾಸಿಕ ದರ್ಶನಕ್ಕೆ ಮಂಗಳವಾರ ತೆರೆಯಲಿದೆ ಅಯ್ಯಪ್ಪ ದೇಗುಲ, ಮತ್ತೆ ಆತಂಕಮಾಸಿಕ ದರ್ಶನಕ್ಕೆ ಮಂಗಳವಾರ ತೆರೆಯಲಿದೆ ಅಯ್ಯಪ್ಪ ದೇಗುಲ, ಮತ್ತೆ ಆತಂಕ

ಈ ಉಪಚುನಾವಣೆಯಲ್ಲಿ ಯುಡಿಎಫ್ ಐದು ಸ್ಥಾನಗಳನ್ನು ಕಳೆದುಕೊಂಡಿದೆ. ಆ ಪೈಕಿ ನಾಲ್ಕು ಸ್ಥಾನವನ್ನು ಎಲ್ ಡಿಎಫ್ ಗೆದ್ದುಕೊಂಡಿದೆ. ಒಂದನ್ನು ಕಾಂಗ್ರೆಸ್ ಭಿನ್ನಮತೀಯ ಗೆದ್ದಿದ್ದಾರೆ. ಇನ್ನು ಯುಡಿಎಫ್ ಗೆದ್ದಿರುವ ಸ್ಥಾನಗಳ ಪೈಕಿ ಐದು ಆಡಳಿತಾರೂಢ ಎಲ್ ಡಿಎಫ್ ನ ತೆಕ್ಕೆಯಲ್ಲಿ ಇದ್ದಂಥವು.

CPM

ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂವತ್ತೊಂಬತ್ತು ಸ್ಥಾನಗಳ ಪೈಕಿ ಎಲ್ ಡಿಎಫ್ ಇಪ್ಪತ್ತೊಂದು, ಯುಡಿಎಫ್ ಹನ್ನೆರಡು ಹಾಗೂ ಬಿಜೆಪಿ ಎರಡು ಸ್ಥಾನದಲ್ಲಿ ಜಯ ಗಳಿಸಿದ್ದವು.

ಶಬರಿಮಲೆ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನ ಮಾಡುವುದಕ್ಕೆ ಬದ್ಧವಾಗಿರುವುದಾಗಿ ಎಲ್ ಡಿಎಫ್ ಸರಕಾರ ತಿಳಿಸಿತ್ತು. ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಹಾಗೂ ಭಕ್ತರಿಂದ ಭಾರೀ ಪ್ರಮಾಣದಲ್ಲಿ ಹಿಂಸಾಚಾರ, ಪ್ರತಿಭಟನೆ ನಡೆಸಲಾಗಿತ್ತು.

English summary
Notwithstanding the row over the Sabarimala women entry issue, the ruling CPM-led LDF in Kerala on Friday bagged 16 out of the 30 seats in the bypolls conducted for various local bodies across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X