ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯ ಚುನಾವಣಾಧಿಕಾರಿಯ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆ!

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 8: ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಂಗಳವಾರ ಆರಂಭವಾಗಿದೆ. ಐದು ಜಿಲ್ಲೆಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ. ಆದರೆ ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿ ಕೇರಳ ಮುಖ್ಯ ಚುನಾವಣಾಧಿಕಾರಿ (ಸಿಇಒ) ತೀಕಾ ರಾಮ್ ಮೀನಾ ಅವರ ಹೆಸರೇ ನಾಪತ್ತೆಯಾಗಿದ್ದು, ಅವರಿಗೆ ಮತ ಚಲಾಯಿಸುವ ಅವಕಾಶ ಸಿಕ್ಕಿಲ್ಲ.

ರಾಜಸ್ಥಾನದ ಸವಾಯ್ ಮಾದೋಪುರ್‌ ಮೂಲದವರಾದ ಕೇರಳ ಕೇಡರ್‌ನ ಅಧಿಕಾರಿಯಾಗಿರುವ ತೀಕಾ ರಾಮ್ ಮೀನಾ ಅವರು ತಿರುವನಂತಪುರಂ ನಗರದ ಜಗತಿಯಲ್ಲಿ ಮಿಲ್ಲೇನಿಯಂ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಇನ್ನೂ ಅನೇಕ ಅಧಿಕಾರಿಗಳು ವಾಸಿಸುತ್ತಿದ್ದಾರೆ. ಅವರಲ್ಲಿ ಕೆಲವರ ಹೆಸರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿದೆ ಎಂದು ಮೀನಾ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವು ಬದಲಾವಣೆ: ಕೆಲವೆಡೆ ಚುನಾವಣೆ ಇಲ್ಲಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವು ಬದಲಾವಣೆ: ಕೆಲವೆಡೆ ಚುನಾವಣೆ ಇಲ್ಲ

'ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಯಾರಿಸಿದ ಮತದಾರರ ಪಟ್ಟಿಯಲ್ಲಿ ನಮ್ಮ ಕೆಲವರ ಹೆಸರು ಇಲ್ಲ' ಎಂದು ಮೀನಾ ತಿಳಿಸಿದ್ದಾರೆ. ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ಸೋಮವಾರವಷ್ಟೇ ಗಮನಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ. 2016ರ ವಿಧಾನಸಭೆ ಚುನಾವಣೆ ಬಳಿಕ ಪರಿಷ್ಕರಿಸಲಾಗಿದ್ದ ಮತದಾರರ ಪಟ್ಟಿಯಲ್ಲಿ ಮೀನಾ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು.

Kerala Chief Electoral Officer Teeka Ram Meena Name Missing From Voters List

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವುದು ಸುಲಭ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವುದು ಸುಲಭ

'ಮಿಲ್ಲೇನಿಯಂ ಅಪಾರ್ಟ್‌ಮೆಂಟ್ ತೈಕಾಡ್, ಪೂಜಾಪುರ ಮತ್ತು ಜಗತಿ ಮೂರು ವಾರ್ಡ್‌ಗಳ ವ್ಯಾಪ್ತಿಗೆ ಬರುವ ಸಂಭವ ಇರುವುದರಿಂದ ನನ್ನ ಮತಗಟ್ಟೆ ಯಾವುದು ಎಂದು ತಿಳಿಯಲು ಜಿಲ್ಲಾಧಿಕಾರಿಗೆ ಕರೆ ಮಾಡಿದ್ದೆ. ಲೋಕಸಭೆ ಚುನಾವಣೆಯಲ್ಲಿ ನಾನು ಪೂಜಾಪುರ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದೆ. ಪರಿಶೀಲಿಸಿದ ಅವರು ನನ್ನ ಹೆಸರು ಈ ಯಾವ ವಾರ್ಡ್‌ಗಳಲ್ಲಿಯೂ ಇಲ್ಲ ಎಂದು ತಿಳಿಸಿದರು. ನಾನು ಬೇರೆ ಅಧಿಕಾರಿಗಳೊಂದಿಗೆ ಕೇಳಿದಾಗ, ಅವರಲ್ಲಿಯೂ ಕೆಲವರ ಹೆಸರು ಇಲ್ಲದಿರುವುದು ಗೊತ್ತಾಯಿತು' ಎಂದು ಅವರು ತಿಳಿಸಿದ್ದಾರೆ.

English summary
Kerala Chief Electoral Officer Teeka Ram Meena on Tuesday could not vote in local body polls as his name was missing from voter's list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X