ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಪ್ರಕರಣ ವರದಿ ಮಾಡಿದ್ದಕ್ಕೆ ಮಾಧ್ಯಮಗಳಿಗೆ ಚರ್ಚ್ ಬಹಿಷ್ಕಾರ

|
Google Oneindia Kannada News

ಕೊಚ್ಚಿ, ಡಿಸೆಂಬರ್ 13: ಕ್ರೈಸ್ತ ಸನ್ಯಾಸಿನಿಯರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಿಂದ ಸದ್ದು ಮಾಡಿದ್ದ ಕೇರಳದ ಸೈರೊ ಮಲಾಬಾರ್ ಕ್ಯಾಥೋಲಿಕ್ ಚರ್ಚ್ ಮತ್ತೊಂದು ವಿವಾದ ಸೃಷ್ಟಿಸಿದೆ.

ಚರ್ಚ್‌ನ ವಿರುದ್ಧ ಮಾಧ್ಯಮಗಳು ಸುಳ್ಳು ಕಥೆ ಬರೆಯುತ್ತಿವೆ ಎಂದು ಆರೋಪಿಸಿ ಅವುಗಳನ್ನು ಬಹಿಷ್ಕರಿಸುವುದಾಗಿ ಚರ್ಚ್ ಹೇಳಿದೆ.

ಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನ

ಚರ್ಚ್‌ನ ಮುಖವಾಣಿ ಪತ್ರಿಕೆ 'ಕ್ಯಾಥೋಲಿಕಸಭಾ'ದಲ್ಲಿ ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ಲೇಖನದಲ್ಲಿ, ಎರಡು ಮಾಧ್ಯಮ ಸಂಸ್ಥೆಗಳ ಹೆಸರನ್ನು ಸಹ ಉಲ್ಲೇಖಿಸಲಾಗಿದೆ.

Kerala Catholic Church attacked media reporting rape accused bishop franco mulakkal

'ಚರ್ಚ್ ವಿರುದ್ಧದ ಸಂಚು: ಭಕ್ತರು ಮಾಧ್ಯಮವನ್ನು ಬಹಿಷ್ಕರಿಸುತ್ತಾರೆ' ಎಂಬ ಶೀರ್ಷಿಕೆಯ ಲೇಖನದಲ್ಲಿ, ಬಿಷಪ್ ಫ್ರಾಂಕೊ ಮುಲಕ್ಕಲ್ ಮತ್ತು ಕಾರ್ಡಿನಲ್ ಜಾರ್ಜ್ ಮಾರ್ ಅಲೆಂಚೆರ್ರಿ ಅವರ ವಿರುದ್ಧ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಸಂಚು ರೂಪಿಸಿವೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಗೆ ಜಾಮೀನುಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಗೆ ಜಾಮೀನು

'ರಾತ್ರಿ ವೇಳೆ ಚರ್ಚೆಗಳನ್ನು ನಡೆಸುವ ಮತ್ತು ವರದಿಗಳನ್ನು ಬಿತ್ತರಿಸುವ ಎಲ್ಲ ಮಾಧ್ಯಮ ಸಂಸ್ಥೆಗಳು ತಮ್ಮ ಮಾಲೀಕರ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಉದ್ದೇಶಗಳನ್ನು ಮನದಲ್ಲಿಟ್ಟುಕೊಂಡಿವೆ. ಬಹುಸಂಖ್ಯಾತ ಸಮುದಾಯದವರನ್ನು ಓಲೈಸಲು ಇತರರ ಭಾವನೆಗಳಿಗೆ ಧಕ್ಕೆ ತರುವ ವ್ಯವಹಾರವನ್ನು ಮಾಧ್ಯಮಗಳು ಮಾಡುತ್ತಿವೆ. ನಂಬಿಕೆಗಳನ್ನು ಆಚರಣೆಗಳನ್ನು ಅಣಕಿಸುವ ಮೂಲಕ ಮಾಧ್ಯಮಗಳು ತಮ್ಮ ಮೂಲ ಗುರಿಯಾದ ಚರ್ಚ್‌ಗಳನ್ನು ಮತ್ತು ಅದರ ನಾಯಕತ್ವವನ್ನು ಅವಮಾನಿಸುವ ಕೆಲಸ ಮಾಡುತ್ತಿವೆ ಎಂದು ಚರ್ಚ್‌ನ ಆನ್‌ಲೈನ್ ಪತ್ರಿಕೆ ಹೇಳಿದೆ.

English summary
Kerala Syro Malabar Catholic Church bashed media for reporting the rape case issues against Bishop Franco Mulakkal, saying that devotees have decided to boycott the Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X