ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಕ್ ಫ್ರಂ ಹೋಂಗೆ ಆದ್ಯತೆ, 20 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊತ್ತ ಕೇರಳ ಬಜೆಟ್

|
Google Oneindia Kannada News

ತಿರುವನಂತಪುರಂ, ಜನವರಿ 15: ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಒತ್ತು ಕೊಟ್ಟಿರುವ ಎಲ್ ಡಿಎಫ್ ಸರ್ಕಾರದ ವಾರ್ಷಿಕ ಬಜೆಟ್ ಅನ್ನು ಕೇರಳ ಹಣಕಾಸು ಸಚಿವ ಟಿಎಂ ಥಾಮಸ್ ಐಸಾಕ್ ಶುಕ್ರವಾರ ಮಂಡನೆ ಮಾಡಿದ್ದಾರೆ.

ಮುಂದಿನ ಐದು ವರ್ಷದ ಒಳಗೆ ಡಿಜಿಟಲ್ ವೇದಿಕೆಯಲ್ಲಿ ಸರ್ಕಾರವು ಇಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ವೃತ್ತಿ ವಿರಾಮ ತೆಗೆದುಕೊಂಡ ಮಹಿಳೆಯರು ಹಾಗೂ ಮನೆಯಿಂದ ಕೆಲಸ ಮಾಡಲು ಸಿದ್ಧವಾಗಿರುವ ಮಹಿಳೆಯರಿಗೆ ಆದ್ಯತೆಯಲ್ಲಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ...

ಹೊಗಳಿಕೆಗಿಂತ ನಮಗೆ ಹಣದ ಅವಶ್ಯಕತೆ ಇದೆ: ಕೇರಳಹೊಗಳಿಕೆಗಿಂತ ನಮಗೆ ಹಣದ ಅವಶ್ಯಕತೆ ಇದೆ: ಕೇರಳ

 ಮನೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ಆದ್ಯತೆ

ಮನೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ಆದ್ಯತೆ

ಈ ಬಜೆಟ್ ನಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ವೃತ್ತಿ ವಿರಾಮ ತೆಗೆದುಕೊಂಡ ಮಹಿಳೆಯರು ಹಾಗೂ ಮನೆಯಿಂದ ಕೆಲಸ ಮಾಡಲು ಸಿದ್ಧವಾಗಿರುವ ಮಹಿಳೆಯರಿಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವೃತ್ತಿ ನೋಂದಣಿ ಕಾರ್ಯವು ಫೆಬ್ರುವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

 ಕನಿಷ್ಠ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ ಗುರಿ

ಕನಿಷ್ಠ 20 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ ಗುರಿ

ಕೇರಳದಲ್ಲಿ ಸುಮಾರು ಐದು ಲಕ್ಷ ಮಹಿಳಾ ಉದ್ಯಮಿಗಳು ವೃತ್ತಿ ವಿರಾಮ ತೆಗೆದುಕೊಂಡಿದ್ದಾರೆ. ಸುಮಾರು 40 ಲಕ್ಷ ವಿದ್ಯಾವಂತ ಮಹಿಳೆಯರು ಮನೆಯಿಂದ ಕೆಲಸ ನಿರ್ವಹಿಸಲು ಸಿದ್ಧವಾಗಿದ್ದಾರೆ. ಸುಮಾರು 16 ಲಕ್ಷ ವಿದ್ಯಾವಂತ ಯುವಜನ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಒಟ್ಟಾರೆ 60 ಲಕ್ಷ ಜನರಿದ್ದು, ಇನ್ನು ಐದು ವರ್ಷದ ಒಳಗೆ ಕನಿಷ್ಠ 20 ಲಕ್ಷ ಜನರಿಗೆ ಉದ್ಯೋಗ ನೀಡಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಘೋಷಿಸಿದರು.

"ಮನೆಯಿಂದ ಕೆಲಸ ಮಾಡುವುದೂ ಉದ್ಯಮದ ಭಾಗವಾಗಲಿದೆ"

ಕೊರೊನಾ ಸೋಂಕು ಜಾಗತಿಕವಾಗಿ ಉದ್ಯಮದ ವ್ಯವಸ್ಥೆಯನ್ನೇ ಬದಲಿಸಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಈ ಹಿಂದೆ ಜಾಗತಿಕವಾಗಿ ಸುಮಾರು 50 ಲಕ್ಷ ಜನರು ಡಿಜಿಟಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಕೊರೊನಾ ಸೋಂಕಿನ ನಂತರ ಇದರ ಸಂಖ್ಯೆ ಮೂರು ಕೋಟಿಗೆ ಏರಿಕೆಯಾಗಿದೆ. ಈ ಸಂಖ್ಯೆ ಮುಂದಿನ ಐದು ವರ್ಷಗಳಲ್ಲಿ 18 ಕೋಟಿವರೆಗೂ ತಲುಪುತ್ತದೆ ಎನ್ನುವ ಅಂದಾಜಿದೆ. ಮನೆಯಿಂದ ಕೆಲಸ ನಿರ್ವಹಿಸುವುದು ಉದ್ಯಮದ ಒಂದು ಕ್ರಮವಾಗುತ್ತದೆ ಎಂದು ಹೇಳಿದರು.

 ಕೇರಳ ಸರ್ಕಾರದಿಂದ ನೆರವು

ಕೇರಳ ಸರ್ಕಾರದಿಂದ ನೆರವು

ಡಿಜಿಟಲ್ ವೇದಿಕೆ ಮೂಲಕ ಕಂಪನಿಗಳಿಂದ ಆಯ್ಕೆಯಾದ ಸದಸ್ಯರಿಗೆ ಸರ್ಕಾರ ನೆರವು ನೀಡಲಿದ್ದು, ಕಂಪ್ಯೂಟರ್ ಇನ್ನಿತರ ವಸ್ತುಗಳ ಖರೀದಿಗೆ ಸಾಲ ನೀಡುತ್ತದೆ. ಕೇರಳ ಫೈನಾನ್ಷಿಯಲ್ ಕಾರ್ಪೊರೇಷನ್, ಕೇರಳ ಸ್ಟೇಟ್ ಫೈನಾನ್ಷಿಯಲ್ ಎಂಟರ್ ಪ್ರೈಸ್ ಲಿಮಿಟೆಡ್ ಹಾಗೂ ಕೇರಳದ ಬ್ಯಾಂಕ್ ಮೂಲಕ ಸಾಲ ಸಿಗಲಿದೆ. ಎರಡು ವರ್ಷದವರೆಗೂ ಈ ಸಾಲವನ್ನು ಮಾಸಿಕ ಕಂತಿನಲ್ಲಿ ತೀರಿಸುವ ಅವಕಾಶವಿದ್ದು, ಕೆಲಸ ಕಳೆದುಕೊಂಡ ಪಕ್ಷದಲ್ಲಿ, ಮತ್ತೆ ಕೆಲಸ ಸಿಗುವವರೆಗೂ ಈ ಕಂತು ಕಟ್ಟದಿರುವ ಅವಕಾಶವನ್ನೂ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

English summary
Kerala government aims to provide 20 lakh jobs through digital platforms within five year. Finance minister TM Thomas Isaac unveiled the Left Democratic Front (LDF) government's annual Budget on Friday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X