ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರದ ಮೇಲೆ ಮತ್ತೆ ಕೇರಳ ಕಣ್ಣು: ರಸ್ತೆಗೆ 500 ಕೋಟಿ ರೂ ಮೀಸಲು

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 4: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ತಗಾದೆ ಎತ್ತಿದ್ದ ಕೇರಳ ಸರ್ಕಾರ ಮತ್ತೆ ರಗಳೆ ಮಾಡುವ ಸೂಚನೆ ಕಂಡುಬಂದಿದೆ.

ಫೆ. 1ರಂದು ರಾಜ್ಯ ಬಜೆಟ್ ಮಂಡನೆ ಮಾಡಿರುವ ಕೇರಳ ಸರ್ಕಾರ ಬಂಡೀಪುರ ಅಭಯಾರಣ್ಯದ ನಡುವೆ ಹಾದು ಹೋಗುವ ಪ್ರಸ್ತಾವಿತ ಎತ್ತರಿಸಿದ ಹೆದ್ದಾರಿಗೆ (ಎಲಿವೇಟೆಡ್ ಹೈವೇ) 500 ಕೋಟಿ ರೂ. ಮೀಸಲಿರಿಸಿದೆ.

ಪರಿಸರ ಪ್ರೇಮಿಗಳಿಗೆ ಜಯ : ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ಇಲ್ಲ ಪರಿಸರ ಪ್ರೇಮಿಗಳಿಗೆ ಜಯ : ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ಇಲ್ಲ

2019-20ನೇ ಸಾಲಿನ ಬಜೆಟ್‌ಅನ್ನು ಹಣಕಾಸು ಸಚಿವ ಟಿಎಂ ಥಾಮಸ್ ಮಂಡಿಸಿದ್ದರು. ಪ್ರವಾಹದಿಂದ ತತ್ತರಿಸಿದ್ದ ರಾಜ್ಯವನ್ನು ಪುನರ್ ಅಭಿವೃದ್ಧಿ ಮಾಡಲು 1,000 ರೂ. ಕೋಟಿ ಪ್ಯಾಕೇಜ್‌ಅನ್ನು ಘೋಷಿಸಿದೆ.

kerala budget allocation for bandipur elevated highway

ಅದರ ಜತೆ ವಯನಾಡು ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ನಡುವೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಮೀಸಲಿಟ್ಟಿದೆ.

ರಾತ್ರಿ ವೇಳೆ ಪ್ರಾಣಿಗಳು ಹೆಚ್ಚು ಓಡಾಟ ನಡೆಸುವುದರಿಂದ ವಾಹನಗಳಿಗೆ ಸಿಲುಕಿ ಸಾಯುವ ಅಪಾಯ ಹೆಚ್ಚಿದೆ. ಅಲ್ಲದೆ ಅಕ್ರಮ ಚಟುವಟಿಕೆಗಳು ಕೂಡ ನಡೆಯಲಿವೆ ಎಂದು ಕರ್ನಾಟಕ, ರಾತ್ರಿ ಸಂಚಾರಕ್ಕೆ ಅವಕಾಶ ನಿರಾಕರಿಸಿದೆ.

ಬಂಡೀಪುರ ಅರಣ್ಯದಲ್ಲಿ ಫ್ಲೈ ಓವರ್ : 50ರಷ್ಟು ವೆಚ್ಚ ಕೊಡಲು ಸಿದ್ಧ ಎಂದ ಕೇರಳ ಬಂಡೀಪುರ ಅರಣ್ಯದಲ್ಲಿ ಫ್ಲೈ ಓವರ್ : 50ರಷ್ಟು ವೆಚ್ಚ ಕೊಡಲು ಸಿದ್ಧ ಎಂದ ಕೇರಳ

ಎಲಿವೇಟೆಡ್ ಹೆದ್ದಾರಿಯಿಂದ ವಾಹನಗಳು ಸುಗಮ ಸಂಚಾರ ಮಾಡಬಹುದು. ಇಲ್ಲಿ ಪ್ರಾಣಿಗಳು ರಸ್ತೆಗೆ ಬರುವ ಅವಕಾಶ ಇರುವುದಿಲ್ಲ. ಇದರಿಂದ ಕರ್ನಾಟಕ ಕೂಡ ರಾತ್ರಿ ಸಂಚಾರಕ್ಕೆ ಅನುಮತಿ ನೀಡಬಹುದು ಎಂದು ಕೇರಳ ಲೆಕ್ಕಾಚಾರ ಹಾಕಿದೆ.

 'ಬಂಡೀಪುರ ಅರಣ್ಯದಲ್ಲಿ ಫ್ಲೈ ಓವರ್ ನಿರ್ಮಿಸಲ್ಲ, ರಾತ್ರಿ ಸಂಚಾರವೂ ಇಲ್ಲ' 'ಬಂಡೀಪುರ ಅರಣ್ಯದಲ್ಲಿ ಫ್ಲೈ ಓವರ್ ನಿರ್ಮಿಸಲ್ಲ, ರಾತ್ರಿ ಸಂಚಾರವೂ ಇಲ್ಲ'

ಇದಕ್ಕೆ ರಾಜ್ಯದ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗೊಂದಲ ಮೂಡಿಸುವ ಸಲುವಾಗಿ ಕೇರಳ ಸರ್ಕಾರ ಎಲಿವೇಟೆಡ್ ರಸ್ತೆಯ ನಾಟಕವಾಡುತ್ತಿದೆ ಎಂದು ಆರೋಪಿಸಿದ್ದಾರೆ.

English summary
Kerala government alloted Rs 500 crore for elevated highway at Bandipur in its state budget. Karnataka wildlife activists opposed against Kerala decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X