ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಚುನಾವಣೆ: ಎರಡು ಕ್ಷೇತ್ರದಲ್ಲಿ ಜೆಡಿಎಸ್‌ ಮುನ್ನಡೆ

|
Google Oneindia Kannada News

ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಬಹುತೇಕ ಸ್ಪಷ್ಟವಾಗಿದ್ದು ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ.

ಎಲ್‌ಡಿಎಫ್ ಮೈತ್ರಿಕೂಟವು ಮಧ್ಯಾಹ್ನ 12 ಗಂಟೆ ವೇಳೆಗೆ 92 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

Assembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ

ಕೇರಳ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವು ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಗೆಲುವಿನ ಸನಿಹ ಸಾಗುತ್ತಿದೆ. ಆಡಳಿತಾರೂಢ ಎಲ್‌ಡಿಎಫ್‌ನ ಭಾಗವಾಗಿರುವ ಜೆಡಿಎಸ್‌ ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ ಸ್ಪರ್ಧಿಸಿತ್ತು.

 Kerala Assembly Election 2021: JDS Leading In Two Seats

ಅಂಕಮಾಲಿ, ಕೋವಳಂ, ತಿರಿವಲ್ಲಾ, ಚಿತ್ತೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಿದ್ದು ಈ ನಾಲ್ಕರಲ್ಲಿ ಅಂಕಮಾಲಿ ಹಾಗೂ ಚಿತ್ತೂರು ಕ್ಷೇತ್ರಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

ಎಲ್‌ಡಿಎಫ್‌ನ ಮೈತ್ರಿಕೂಟದ ಪಕ್ಷವಾಗಿರುವ ಜೆಡಿಎಸ್‌ ಕಳೆದ ಬಾರಿ ಮೂರು ಕ್ಷೇತ್ರದಲ್ಲಿ ಗೆದ್ದಿದ್ದಲ್ಲದೆ ಕೇರಳ ಜೆಡಿಎಸ್‌ನ ಜೋಸ್ ತೆಟ್ಟಾಯಿಲ್ ಅವರು ಮಂತ್ರಿ ಸಹ ಆಗಿದ್ದರು.

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶKarnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ

ಆದರೆ ಕಳೆದ ವರ್ಷವಷ್ಟೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡ ಅವರು, ಕೇರಳ ಜೆಡಿಎಸ್‌ ವಿಭಾಗವನ್ನು ರದ್ದು ಮಾಡಿದ್ದರು. ಕೇರಳ ಜೆಡಿಎಸ್‌ ವಿಭಾಗದ ಅಧ್ಯಕ್ಷ ಸಿಕೆ ನಾನು, ಕೇರಳದಲ್ಲಿ ಜೆಡಿಎಸ್‌ ಪ್ರಗತಿಗೆ ಅಗತ್ಯ ಕಾರ್ಯ ಮಾಡುತ್ತಿಲ್ಲ ಎಂದು ದೇವೆಗೌಡ ಆರೋಪಿಸಿದ್ದರು.

English summary
Kerala assembly election 2021: JDs party candidates leading in two seats in Kerala assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X