• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಚುನಾವಣೆ: ಗೆದ್ದ-ಬಿದ್ದ ಸಿನಿ ತಾರೆಯರು ಯಾರ್ಯಾರು?

|
Google Oneindia Kannada News

ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ನಿನ್ನೆಯಷ್ಟೆ ಬಂದಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆತಿದ್ದು, ಮತ್ತೊಮ್ಮೆ ಪಿಣರಾಯಿ ವಿಜಯನ್ ಸಿಎಂ ಆಗುವುದು ಖಾತ್ರಿಯಾಗಿದೆ.

ನೆರೆಯ ತಮಿಳುನಾಡು, ಆಂಧ್ರಪ್ರದೇಶಗಳಂತೆ ಸಿನಿಮಾ ನಟ-ನಟಿಯರು ಕೇರಳದಲ್ಲಿ ಸಕ್ರಿಯ ರಾಜಕೀಯದ ಭಾಗವಾಗಿರಲಿಲ್ಲ. ಬಹಳ ಇತ್ತೀಚೆಗೆ ಸಿನಿಮಾ ನಟರು ರಾಜಕೀಯದಲ್ಲಿ ಗುರುತಿಸಿಕೊಂಡರು, ಈಗಲೂ ಸಹ ಕಡಿಮೆ ಸಂಖ್ಯೆಯ ನಟರು ಸಕ್ರಿಯ ರಾಜಕೀಯದಲ್ಲಿ ತೊಡಗುತ್ತಾರೆ.

ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆಗೆ ಕೆಲವು ಸಿನಿಮಾ ನಟ-ನಟಿಯರು ಸ್ಪರ್ಧೆ ಮಾಡಿದ್ದರು. ಆದರೆ ಗೆದ್ದವರು ಯಾರು? ಸೋತವರು ಯಾರು? ಯಾವ ಪಕ್ಷದಿಂದ ಸ್ಪರ್ಧಿಸಿದ್ದರು? ಇಲ್ಲಿದೆ ಪಟ್ಟಿ.

ಪಶ್ಚಿಮ ಬಂಗಾಳ: ಕಣಕ್ಕಿಳಿದ ಸಿನಿ ತಾರೆಯರಲ್ಲಿ ಗೆದ್ದವರೆಷ್ಟು?ಪಶ್ಚಿಮ ಬಂಗಾಳ: ಕಣಕ್ಕಿಳಿದ ಸಿನಿ ತಾರೆಯರಲ್ಲಿ ಗೆದ್ದವರೆಷ್ಟು?

ಮಲಯಾಳಂ ಹಾಗೂ ಕೆಲವು ತಮಿಳು ಸಿನಿಮಾಗಳಲ್ಲಿ ಸಹ ನಟಿಸಿರುವ ನಟ ಮುಖೇಶ್ ಅವರು ಸಿಪಿಐ(ಎಂ) ಪಕ್ಷದಿಂದ ಕೇರಳದ ಕೊಲ್ಲಂ ವಿಧಾನಸಭೆ ಕ್ಷೇತ್ರಕ್ಕೆ ಉಮೇದುವಾರಿಕೆ ಹೂಡಿದ್ದರು. ಎದುರಾಳಿ ಕಾಂಗ್ರೆಸ್‌ ವಿರುದ್ಧ 1863 ಮತಗಳ ಅಂತರದ ಗೆಲುವನ್ನು ಮುಖೇಶ್ ಸಾಧಿಸಿದ್ದಾರೆ.

ನಿರೀಕ್ಷೆ ಹುಟ್ಟಿಸಿದ್ದ ಸುರೇಶ್ ಗೋಪಿಗೆ ಸೋಲು

ನಿರೀಕ್ಷೆ ಹುಟ್ಟಿಸಿದ್ದ ಸುರೇಶ್ ಗೋಪಿಗೆ ಸೋಲು

ಈ ಬಾರಿ ಕುತೂಹಲ ಕೆರಳಿಸಿದ್ದು ನಟ ಸುರೇಶ್ ಗೋಪಿ ಕ್ಷೇತ್ರ. ಹಲವು ವರ್ಷಗಳಿಂದ ಮಲಯಾಳಂ ಸಿನಿಮಾರಂಗದಲ್ಲಿರುವ ಸುರೇಶ್ ಗೋಪಿ ಎನ್‌ಡಿಎ ಅಭ್ಯರ್ಥಿಯಾಗಿ ತ್ರಿಶೂರ್‌ನಿಂದ ಸ್ಪರ್ಧಿಸಿದ್ದರು. ಕುತೂಹಲ ಕೆರಳಿಸಿದ್ದ ಈ ಕಣದಲ್ಲಿ ಸುರೇಶ್‌ ಗೋಪಿಗೆ ಮೂರನೇ ಸ್ಥಾನ.

ಕಾಮಿಡಿ ನಟ ಧರ್ಮಜನ್‌ ಬೋಲ್ಗಟ್ಟಿಗೆ ಸೋಲು

ಕಾಮಿಡಿ ನಟ ಧರ್ಮಜನ್‌ ಬೋಲ್ಗಟ್ಟಿಗೆ ಸೋಲು

ಮಲಯಾಳಂ ಸಿನಿಮಾ ಕಾಮಿಡಿ ನಟ ಧರ್ಮಜನ್ ಬೋಲ್ಗಟ್ಟಿ ಕೇರಳದ ಬಾಲುಸೇರಿ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿದ್ದರು ಆದರೆ ಯುವಕ ಸಚಿನ್ ದೇವ್ ಭಾರಿ ಅಂತರದಿಂದ ಧರ್ಮಜನ್ ಬೋಲ್ಗಟ್ಟಿ ಅನ್ನು ಸೋಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಜಿ.ಕೃಷ್ಣಕುಮಾರ್‌ಗೆ ಸೋಲು

ಬಿಜೆಪಿ ಅಭ್ಯರ್ಥಿ ಜಿ.ಕೃಷ್ಣಕುಮಾರ್‌ಗೆ ಸೋಲು

ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಟಿವಿ ಹಾಗೂ ಸಿನಿಮಾ ನಟ ಕೃಷ್ಣಕುಮಾರ್ ಜಿ ಸಹ ತೀವ್ರ ನಿರಾಸೆ ಅನುಭವಿಸಿದ್ದಾರೆ. ಮೂರನೇ ಸ್ಥಾನಕ್ಕೆ ಅವರು ತೃಪ್ತಿ ಪಟ್ಟುಕೊಂಡಿದ್ದಾರೆ.

ಡೆಮಾಕ್ರೆಟಿಕ್ ಸೋಷಿಯಲ್ ಜಸ್ಟಿಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಅನೂಪ್

ಡೆಮಾಕ್ರೆಟಿಕ್ ಸೋಷಿಯಲ್ ಜಸ್ಟಿಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಅನೂಪ್

ಟಿವಿ ಧಾರಾವಾಹಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟಿ ಪ್ರಿಯಾಂಕಾ ಅನೂಪ್ ಡೆಮಾಕ್ರೆಟಿಕ್ ಸೋಷಿಯಲ್ ಜಸ್ಟಿಸ್ ಪಕ್ಷದ ಅಭ್ಯರ್ಥಿಯಾಗಿ ಅರೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಇನ್ನು ಟಿವಿ ನಟ ವಿವೇಕ್ ಗೋಪನ್ ಅವರು ಚವಾರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ.

English summary
Kerala assembly election 2021: some movie stars contested in election some win some loose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X