• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ 'ದೊಡ್ಡ ಶೂನ್ಯ' ಸುತ್ತಿದ ಬಿಜೆಪಿ: ಕೊಟ್ಟ ಮಾತು ಉಳಿಸಿಕೊಂಡ ಪಿಣರಾಯಿ

|
Google Oneindia Kannada News

ತಿರುವನಂತಪುರಂ, ಮೇ 3: ಕೇರಳ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಯ ಮತಎಣಿಕೆ, ಕೊರೊನಾ ಮಾರ್ಗಸೂಚಿಯಂತೆ ನಡೆದಿದೆ. ಬಹುತೇಕ, ಮತಗಟ್ಟೆ ಸಮೀಕ್ಷೆಯ ಪ್ರಕಾರವೇ ಹೆಚ್ಚಿನ ಫಲಿತಾಂಶಗಳು ಬಂದಿವೆ.

ದೇವರ ನಾಡು ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌, ಸರಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಾಮಾನ್ಯವಾಗಿ, ಪ್ರತಿ ಚುನಾವಣೆಗೂ ಅಧಿಕಾರ ನಡೆಸಿದ ಪಕ್ಷದ ಮೇಲೆ ನಿಯತ್ತು ತೋರಿಸದ ಅಲ್ಲಿನ ಮತದಾರ, ಈ ಬಾರಿ ಎಲ್‌ಡಿಎಫ್‌ ಮೇಲೆಯೇ ವಿಶ್ವಾಸವನ್ನು ಇಟ್ಟಿದ್ದಾನೆ.

ಚುನಾವಣಾ ಫಲಿತಾಂಶ: ಬಿಜೆಪಿ ಸೋಲಿನ ಬಗ್ಗೆ ಸಿಪಿಐ(ಎಂ) ಪ್ರತಿಕ್ರಿಯೆಚುನಾವಣಾ ಫಲಿತಾಂಶ: ಬಿಜೆಪಿ ಸೋಲಿನ ಬಗ್ಗೆ ಸಿಪಿಐ(ಎಂ) ಪ್ರತಿಕ್ರಿಯೆ

ಒಟ್ಟು 140 ಸ್ಥಾನದ ಫಲಿತಾಂಶ ಪ್ರಕಟವಾಗಿದ್ದು, ಎಲ್‌ಡಿಎಫ್‌ 99 ಸ್ಥಾನದಲ್ಲಿ ಗೆದ್ದರೆ, ಪ್ರಮುಖ ವಿರೋಧ ಪಕ್ಷವಾದ ಯುಡಿಎಫ್ 41ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿಗೆ ಹೋಲಿಸಿದರೆ ಪಿಣರಾಯಿ ಎಂಟು ಸ್ಥಾನವನ್ನು ಹೆಚ್ಚು ಗೆದ್ದರೆ, ಯುಡಿಎಫ್ ಆರು ಸ್ಥಾನವನ್ನು ಕಳೆದುಕೊಂಡಿದೆ.

ಬಂಗಾಳದಲ್ಲಿ ಕಾಂಗ್ರೆಸ್, ಕೇರಳದಲ್ಲಿ ಬಿಜೆಪಿ ಶೂನ್ಯ ಸಾಧನೆ ಬಂಗಾಳದಲ್ಲಿ ಕಾಂಗ್ರೆಸ್, ಕೇರಳದಲ್ಲಿ ಬಿಜೆಪಿ ಶೂನ್ಯ ಸಾಧನೆ

ಕಳೆದ ಅಂದರೆ 2016ರ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನದಲ್ಲಿ ಗೆದ್ದಿತ್ತು, ಇತರರು ಏಳು ಸ್ಥಾನದಲ್ಲಿ ಗೆದ್ದಿದ್ದರು. ಆದರೆ, ಈ ಬಾರಿ ಅಬ್ಬರದ ಪ್ರಚಾರದ ನಡುವೆಯೂ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಚುನಾವಣೆಗೆ ಮುನ್ನ ಕೊಟ್ಟ ಮಾತು ಉಳಿಸಿಕೊಂಡ ಪಿಣರಾಯಿ...

 ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಆದಿಯಾಗಿ ಬಿಜೆಪಿ ಕೇರಳದಲ್ಲಿ ಭಾರಿ ಪ್ರಚಾರ

ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಆದಿಯಾಗಿ ಬಿಜೆಪಿ ಕೇರಳದಲ್ಲಿ ಭಾರಿ ಪ್ರಚಾರ

ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಆದಿಯಾಗಿ ಬಿಜೆಪಿ, ಕೇರಳದಲ್ಲಿ ಭಾರಿ ಪ್ರಚಾರವನ್ನು ನಡೆಸಿತ್ತು. ರಾಜ್ಯವ್ಯಾಪಿ ಹಲವು ಜಾಥಾ, ರೋಡ್ ಶೋಗಳನ್ನು ನಡೆಸಿತ್ತು. ಕೆಲವು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವನ್ನೂ ಬಿಜೆಪಿ ಹಾಕಿಕೊಂಡಿತ್ತು. ಆದರೆ, ಕೇರಳದ ಮತದಾರ ಎಲ್‌ಡಿಎಫ್‌ ಮತ್ತು ಯುಡಿಎಫ್ ನಡುವೆ ಸೀಟನ್ನು ಹಂಚಿ ಬಿಟ್ಟಿದ್ದಾನೆ.

 ಬಿಜೆಪಿ ಕಳೆದ ಬಾರಿ ಒಂದು ಸೀಟ್ ಅನ್ನು ಗೆದ್ದಿತ್ತು, ಈ ಬಾರಿ ಅದನ್ನು ಝೀರೋ ಮಾಡುತ್ತೇವೆ

ಬಿಜೆಪಿ ಕಳೆದ ಬಾರಿ ಒಂದು ಸೀಟ್ ಅನ್ನು ಗೆದ್ದಿತ್ತು, ಈ ಬಾರಿ ಅದನ್ನು ಝೀರೋ ಮಾಡುತ್ತೇವೆ

ಯುಡಿಎಫ್ ಜೊತೆಗಿನ ಹಣಾಹಣಿ ಮತ್ತು ಬಿಜೆಪಿಯ ಅಬ್ಬರದ ಪ್ರಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಕೇರಳದ ಸಿಎಂ ಪಿಣರಾಯಿ ವಿಜಯನ್, "ನಮ್ಮ ಅಭಿವೃದ್ದಿ ಮಂತ್ರವೇ ನಮಗೆ ಶ್ರೀರಕ್ಷೆ. ಬಿಜೆಪಿ ಕಳೆದ ಬಾರಿ ಒಂದು ಸೀಟ್ ಅನ್ನು ಗೆದ್ದಿತ್ತು, ಈ ಬಾರಿ ಅದನ್ನು ಝೀರೋ ಮಾಡುತ್ತೇವೆ, ನೋಡುತ್ತಿರಿ"ಎನ್ನುವ ವಿಶ್ವಾಸದ ಮಾತನ್ನು ಪಿಣರಾಯಿ ಆಡಿದ್ದರು.

 ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್

ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್

ಪಿಣರಾಯಿ ಹೇಳಿದಂತೆ ಬಿಜೆಪಿ ಯಾವ ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮೆಟ್ರೋ ಮ್ಯಾನ್ ಶ್ರೀಧರನ್ ಕೂಡಾ ಸೋಲುಂಡಿದ್ದಾರೆ. ಕರ್ನಾಟಕ ಗಡಿ ಕ್ಷೇತ್ರವಾದ ಮಂಜೇಶ್ವರ, ಕಾಸರಗೋಡು ಮುಂತಾದ ಕಡೆಯೂ ಬಿಜೆಪಿ ಸೋಲುಂಡಿದೆ. ಆ ಮೂಲಕ, ಕೇರಳದಲ್ಲಿ ಪಕ್ಷದ ಬೇರನ್ನು ವೃದ್ದಿಸಬೇಕು ಎನ್ನುವ ಮಹತ್ವಾಕಾಂಕ್ಷೆಗೆ ಮತದಾರ ಕಿವಿಗೊಡಲಿಲ್ಲ.

 ಡಿಎಂಕೆ ಹೊಂದಾಣಿಕೆಯೊಂದಿಗೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ

ಡಿಎಂಕೆ ಹೊಂದಾಣಿಕೆಯೊಂದಿಗೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ

ಇತರ ಪಕ್ಷಗಳ ಸಹಯೋಗದೊಂದಿಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಏರಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು. ಅದರಲ್ಲಿ, ಡಿಎಂಕೆ ಹೊಂದಾಣಿಕೆಯೊಂದಿಗೆ ಕಾಂಗ್ರೆಸ್ ತಕ್ಕಮಟ್ಟಿಗಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬಹುದು ಎನ್ನುವ ಅಮಿತ್ ಶಾ/ಮೋದಿ ಲೆಕ್ಕಾಚಾರ, ಕೇರಳದಲ್ಲಿ ಮಾತ್ರ ಸಂಪೂರ್ಣ ಉಲ್ಟಾ ಹೊಡೆದಿದೆ.

   ಪಶ್ಚಿಮ‌ ಬಂಗಾಳ ಮತ್ತು ದೀದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಸ್ಪೆಂಡ್ ಮಾಡಿದ ಟ್ವಿಟ್ಟರ್ | Oneindia Kannada
   ಪಿಣರಾಯಿ ವಿಜಯನ್
   Know all about
   ಪಿಣರಾಯಿ ವಿಜಯನ್
   English summary
   Kerala Assembly Election 2021: BJP Zero Performance, CM Pinarayi Vijayan Earlier Statement
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X