ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲೂ ನೈಟ್ ಕರ್ಫ್ಯೂ; ಹೊಸ ವರ್ಷಾಚರಣೆಗೆ ತಡೆ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 27; ನೈಟ್ ಜಾರಿಗೊಳಿಸಿದ ವಿವಿಧ ರಾಜ್ಯಗಳ ಸಾಲಿಗೆ ಕೇರಳ ಸಹ ಸೇರಿದೆ. ಡಿಸೆಂಬರ್ 30 ರಿಂದ ಜನವರಿ 2ರ ತನಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಸೋಮವಾರ ರಾಜ್ಯದ ಕೋವಿಡ್ ಪರಿಸ್ಥಿತಿ ಕುರಿತು ನಡೆದ ಉನ್ನತ ಮಟ್ಟದ ಸಭೆಯ ಬಳಿಕ ನೈಟ್ ಕರ್ಫ್ಯೂ ಜಾರಿಗೊಳಿಸುವ ಆದೇಶ ಹೊರಡಿಸಲಾಗಿದೆ. ಮಾರ್ಗಸೂಚಿ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ನೈಟ್ ಕರ್ಫ್ಯೂ; ನಮ್ಮ ಮೆಟ್ರೋ ಸಂಚಾರದ ಮಾಹಿತಿನೈಟ್ ಕರ್ಫ್ಯೂ; ನಮ್ಮ ಮೆಟ್ರೋ ಸಂಚಾರದ ಮಾಹಿತಿ

ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ. ಕರ್ನಾಟಕ, ಗುಜರಾತ್, ಮಧ್ಯ ಪ್ರದೇಶ, ಉತ್ತರಾಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿವೆ.

ಗೋವಾ; ಪ್ರವಾಸಿಗರಲ್ಲಿ ಆತಂಕ, ಮೊದಲ ಓಮಿಕ್ರಾನ್ ಪ್ರಕರಣ ದಾಖಲುಗೋವಾ; ಪ್ರವಾಸಿಗರಲ್ಲಿ ಆತಂಕ, ಮೊದಲ ಓಮಿಕ್ರಾನ್ ಪ್ರಕರಣ ದಾಖಲು

Kerala

ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ ಜೊತೆಗೆ ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ನೈಟ್ ಕರ್ಫ್ಯೂ ಮತ್ತು ಹೊಸ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದೆ.

Breaking; ಡಿ.28ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ, ಮಾರ್ಗಸೂಚಿBreaking; ಡಿ.28ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ, ಮಾರ್ಗಸೂಚಿ

ರಾಜ್ಯದಲ್ಲಿ ಸೋಮವಾರ 1636 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 52,24,929 ಆಗಿದೆ. ಇದುವರೆಗೂ ರಾಜ್ಯದಲ್ಲಿ 46,822 ಜನರು ಮೃತಪಟ್ಟಿದ್ದಾರೆ.

ಹೊಸ ಮಾರ್ಗಸೂಚಿ ಪ್ರಕಾರ ರಾಜ್ಯದ ಬೀಚ್, ಶಾಪಿಂಗ್ ಮಾಲ್, ಉದ್ಯಾನಗಳು ಮುಂತಾದ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ. ಪೊಲೀಸ್ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ನಿಗಾವಹಿಸಲಿದ್ದಾರೆ.

ಡಿಸೆಂಬರ್ 31ರಂದು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಸೇರದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ರಾತ್ರಿ 10 ಗಂಟೆಯ ಬಳಿಕ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಬಾರ್, ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಜನರು ಸೇರಲು ಸರ್ಕಾರ ಅವಕಾಶ ನೀಡಿದೆ. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಕೇರಳದಲ್ಲಿ ಶೇ 98ರಷ್ಟು ಜನರು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಶೇ 77ರಷ್ಟು ಜನರು 2ನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.

ನೈಟ್ ಕರ್ಫ್ಯೂ ಜಾರಿಗೊಳಿಸಿದ ರಾಜ್ಯಗಳು

* ಕರ್ನಾಟಕ ಡಿಸೆಂಬರ್ 28 ರಿಂದ 10 ದಿನಗಳು (ರಾತ್ರಿ 10 ರಿಂದ ಬೆಳಗ್ಗೆ 5)

* ಉತ್ತರಾಖಂಡ ಡಿಸೆಂಬರ್ 27ರಿಂದ ಮುಂದಿನ ಆದೇಶದ ತನಕ (ರಾತ್ರಿ 11 ರಿಂದ ಬೆಳಗ್ಗೆ 5)

* ನವದೆಹಲಿ ಡಿಸೆಂಬರ್‌ 27ರಿಂದ (ರಾತ್ರಿ 11 ರಿಂದ ಬೆಳಗ್ಗೆ 5)

* ಹರ್ಯಾಣ ಡಿಸೆಂಬರ್ 25ರಿಂದ ಜನವರಿ 5 ( ರಾತ್ರಿ 11 ರಿಂದ ಬೆಳಗ್ಗೆ 5)

* ಗುಜರಾತ್ ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ (ರಾತ್ರಿ 11 ರಿಂದ ಬೆಳಗ್ಗೆ 5)

* ಉತ್ತರ ಪ್ರದೇಶ ಡಿಸೆಂಬರ್ 25 ರಿಂದ ಜಾರಿ (ರಾತ್ರಿ 11 ರಿಂದ ಬೆಳಗ್ಗೆ 5)

* ಮಧ್ಯ ಪ್ರದೇಶ ಡಿಸೆಂಬರ್ 23ರಿಂದ ಜಾರಿ (ರಾತ್ರಿ 11 ರಿಂದ ಬೆಳಗ್ಗೆ 5)

* ಮಹಾರಾಷ್ಟ್ರ ಡಿಸೆಂಬರ್ 25 ರಿಂದ ಜಾರಿ (ರಾತ್ರಿ 11 ರಿಂದ ಬೆಳಗ್ಗೆ 5)

Recommended Video

Ashes : Australia ಮೂರನೇ ಪಂದ್ಯವನ್ನು ಗೆದ್ದಿದ್ದು ಹೀಗೆ | Oneindia Kannada

ನೈಟ್ ಕರ್ಫ್ಯೂ ಜಾರಿಗೊಳಿಸಿದ ಎಲ್ಲಾ ರಾಜ್ಯಗಳು ತುರ್ತು ಸೇವೆಗಳು ಮತ್ತು ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಬಸ್, ರೈಲು, ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ವಿಮಾನ ನಿಲ್ದಾಣಕ್ಕೂ ಪ್ರಯಾಣಿಕರು ಸಂಚಾರ ನಡೆಸಬಹುದಾಗಿದೆ.

English summary
Kerala government announced night curfew from 10 pm to 5 am between December 30 and January 2 and No celebrations will be allowed after 10 pm on December 31 according to guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X