• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ; ಕೋವಿಡ್ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ

|

ತಿರುವನಂತಪುರಂ, ಜುಲೈ 30 : ರೋಗ ಲಕ್ಷಣಗಳು ಇಲ್ಲದ ಕೋವಿಡ್ - 19 ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಕೇರಳ ಸರ್ಕಾರ ಒಪ್ಪಿಗೆ ನೀಡಿದೆ. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಹೋಂ ಐಸೊಲೇಷನ್‌ಗೆ ಒಪ್ಪಿಗೆ ನೀಡಿದೆ.

ಗುರುವಾರ ಕೇರಳ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ರಾಜ್ಯದ ರಾಜಧಾನಿ ತಿರುವನಂತಪುರಂನಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಮನೆಯಲ್ಲಿ ಪ್ರತ್ಯೇಕವಾದ ರೂಂ, ಶೌಚಾಲಯ ವ್ಯವಸ್ಥೆ ಇದ್ದರೆ ರೋಗಿ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಹೋಂ ಐಸೊಲೇಷನ್‌; ಸೋಂಕಿತರಿಗೆ ಉಚಿತ ಆರೋಗ್ಯ ಕಿಟ್

ರಾಜ್ಯ ಸರ್ಕಾರದ ಸೂಚನೆ ಬಳಿಕ ತಿರುವನಂತಪುರಂ ಜಿಲ್ಲಾಧಿಕಾರಿಗಳು ಹೋಂ ಐಸೊಲೇಷನ್ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ. ಕೇರಳ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 21,798. ತಿರುವನಂತಪುರಂನಲ್ಲಿ 4,102.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

ಕರ್ನಾಟಕದಲ್ಲಿ ಈಗಾಗಲೇ ಹೋಂ ಐಸೊಲೇಷನ್‌ಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ನಗರವೊಂದರಲ್ಲಿಯೇ 12 ಸಾವಿರ ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕಾಗಿಯೇ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಸಂಪೂರ್ಣ ಲಾಕ್‌ಡೌನ್‌ ಬೇಡ ಎಂದ ಕೇರಳ ಕ್ಯಾಬಿನೆಟ್

ಕೋವಿಡ್ ಸೋಂಕು ತಗುಲಿದ್ದು, ಯಾವುದೇ ರೋಗ ಲಕ್ಷಣ ಇಲ್ಲದಿದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶವಿದೆ. ಕೊರೊನಾ ವಾರ್ ರೂಂ ಸಿಬ್ಬಂದಿಗಳು ಮನೆಯಲ್ಲಿರುವ ರೋಗಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಪ್ರತಿದಿನ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

ಮನೆಯಲ್ಲಿರುವ ಸೋಂಕಿತರ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಸೋಂಕಿತರು ಮನೆಯಲ್ಲಿಯೂ ಮಾಸ್ಕ್ ಬಳಕೆ ಮಾಡಬೇಕು, ಇತರರಿಂದ ಸಾಮಾಜಿಕ ಅಂತರ ಕಾಪಾಡಬೇಕಾಗಿದೆ.

English summary
Kerala government allowed asymptomatic COVID-19 patients to undergo treatment at their home. Home isolation is first implementing in the state capital Thiruvananthapuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X