ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡು: 200 ಕೆಜಿ ಕೊಳೆತ ಮೀನು ವಶ- ಮೀನು ಹಿಂತಿರುಗಿಸಲು ಮಾರಾಟಗಾರರ ಪಟ್ಟು

|
Google Oneindia Kannada News

ಕಾಸರಗೋಡು ಮೇ 7: ಕೇರಳದ ಕಾಸರಗೋಡು ಮೀನು ಮಾರುಕಟ್ಟೆಯಲ್ಲಿ ಭಯಾನಕ ಸತ್ಯವೊಂದು ಹೊರಬಿದ್ದಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಕೇಜಿಗಟ್ಟಲೆ ಕೊಳೆತ ಮೀನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮೇ 1 ರಂದು ಚೆರುವತ್ತೂರಿನಲ್ಲಿ ಶವರ್ಮಾ ತಿಂದು ಶಾಲಾ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟು 52 ಮಂದಿ ಅಸ್ವಸ್ಥರಾದ ಘಟನೆ ಕಣ್ಮರೆಯಾಗಿಲ್ಲ. ಅದಾಗಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಹೀಗಾಗಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅಂಗಡಿ ಹಾಗೂ ಮಾರುಕಟ್ಟೆಗಳ ಪರಿಶೀಲನೆ ಕಾರ್ಯವನ್ನು ಚುರುಗೊಳಿಸಿದ್ದಾರೆ.

ಮೀನು ಮಾರಾಟಗಾರರಿಂದ 200 ಕೆಜಿ ಕೊಳೆತ ಮೀನನ್ನು ಕೇರಳ ಆಹಾರ ಸುರಕ್ಷತಾ ಇಲಾಖೆ ವಶಪಡಿಸಿಕೊಂಡಿದೆ. ಕನ್ಯಾಕುಮಾರಿ ಜಿಲ್ಲೆಯಿಂದ ಆಗಮಿಸಿದ ಟ್ರಕ್‌ನಿಂದ 200 ಕೆಜಿ ಕೊಳೆತ ಸಾರ್ಡೀನ್ (sardine) ಅನ್ನು ಕಾಸರಗೋಡು ಮೀನು ಮಾರುಕಟ್ಟೆಯಲ್ಲಿ ಮುಂಜಾನೆ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಸಹಾಯಕ ಆಯುಕ್ತ ಜಾನ್ ವಿಜಯಕುಮಾರ್ ತಿಳಿಸಿದ್ದಾರೆ.

ಶವರ್ಮಾ ತಿಂದ ಬಾಲಕಿ ಸಾವು, ಬ್ಯಾಕ್ಟೀರಿಯಾಗೆ ಬಾಲಕಿ ಬಲಿಶವರ್ಮಾ ತಿಂದ ಬಾಲಕಿ ಸಾವು, ಬ್ಯಾಕ್ಟೀರಿಯಾಗೆ ಬಾಲಕಿ ಬಲಿ

ಆಹಾರ ಸುರಕ್ಷತಾ ಸಹಾಯಕ ಆಯುಕ್ತರು, ಮೀನುಗಾರಿಕೆ ಇಲಾಖೆಯ ವಿಸ್ತರಣಾಧಿಕಾರಿ ಮತ್ತು ಕಾಸರಗೋಡು ಪುರಸಭೆಯ ಆರೋಗ್ಯಾಧಿಕಾರಿ ಅವರನ್ನೊಳಗೊಂಡ ಸ್ಕ್ವಾಡ್ ಶನಿವಾರ ಮುಂಜಾನೆ 3.30 ಕ್ಕೆ ಮಾರುಕಟ್ಟೆಗೆ ಬರುವ ಟ್ರಕ್‌ಗಳನ್ನು ಪರಿಶೀಲಿಸಲು ಪ್ರಾರಂಭಿಸಿತು. ಈ ವೇಳೆ ಏಳು ಟ್ರಕ್‌ಗಳನ್ನು ಪರಿಶೀಲಿಸಿದೆ. ಒಂದು ಟ್ರಕ್‌ನಲ್ಲಿ ಪೆಟ್ಟಿಗೆಯಲ್ಲಿ ಕೊಳೆತ ಮೀನುಗಳನ್ನು ಕಂಡುಬಂದಿವೆ ಮತ್ತು ಎಲ್ಲಾ 50 ಬಾಕ್ಸ್‌ಗಳನ್ನು ಪರಿಶೀಲಿಸಿದಾಗ ಬರೋಬ್ಬೊರಿ 200 ಕೆಜಿ ಕೊಳೆತ ಸಾರ್ಡೀನ್ ಮೀನು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

Kasargodu: 200 kg of rotten fish seized - vendor fold to return fish

ಮಾನವ ಬಳಕೆಗೆ ಯೋಗ್ಯವಾಗಿಲ್ಲದ 25 ಕೆಜಿ ತೂಕದ ಎಂಟು ಬಾಕ್ಸ್ ಸಾರ್ಡೀನ್ ಮೀನನ್ನು ವಶಪಡಿಸಿಕೊಳ್ಳಲಾಗಿದೆ. ಬಾಕ್ಸ್ ಗಳನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ ಎಂದು ವಿಜಯಕುಮಾರ್ ತಿಳಿಸಿದರು. ಮೀನು ಏಜೆಂಟರು ಮತ್ತು ಮಾರಾಟಗಾರರು ಅಧಿಕಾರಿಗಳನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಉದ್ವಿಗ್ನತೆ ಉಂಟಾಗಿದೆ. ಹಾಗಾಗಿ ಪೊಲೀಸರನ್ನು ಕರೆಸಬೇಕಾಗಿದೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.

Kasargodu: 200 kg of rotten fish seized - vendor fold to return fish

ಮೇ 1 ರಂದು ಚೆರುವತ್ತೂರಿನ ಉಪಾಹಾರ ಗೃಹದಿಂದ ಶವರ್ಮಾ ತಿಂದು ಶಾಲಾ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟು 52 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಮೇ 2ರಿಂದ ಜಿಲ್ಲೆಯಾದ್ಯಂತ ದಾಳಿ ನಡೆಸಿದೆ. ಶುಕ್ರವಾರ ಕಾಸರಗೋಡಿನ ವಿದ್ಯಾನಗರದಲ್ಲಿರುವ ಸಣ್ಣ ತರಕಾರಿ ಅಂಗಡಿಯನ್ನು ಇಲಾಖೆಯಲ್ಲಿ ನೋಂದಾಯಿಸದ ಕಾರಣ ಇಲಾಖೆ ಮುಚ್ಚಿದೆ. ಆಹಾರ ಸುರಕ್ಷತಾ ಪರವಾನಗಿ ಇಲ್ಲ ಎಂಬ ಕಾರಣಕ್ಕೆ ಕೋಳಿ ಅಂಗಡಿಯನ್ನೂ ಮುಚ್ಚಿದೆ.

Kasargodu: 200 kg of rotten fish seized - vendor fold to return fish

Recommended Video

ಗ್ರೀನ್ ಜೆರ್ಸಿ ತೊಟ್ಟ RCB ಗೆ ಸಿಕ್ಕಿರೋದು ಬರೀ ಸೋಲು:ಈ ಮ್ಯಾಚ್ ನಲ್ಲಿ ಏನ್ ಕಥೆ? | Oneindia Kannada

ವಾರ್ಷಿಕ 12 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ಮಳಿಗೆಯನ್ನು ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ಇತರರು ಇಲಾಖೆಯಿಂದ ಆಹಾರ ಸುರಕ್ಷತೆ ಪರವಾನಗಿ ಪಡೆಯಬೇಕು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

English summary
Food safety department officials have seized 200kg of rotten fish at Kasargodu fish market in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X