ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ತಿಕ ಸೋಮವಾರ ದೀಪಾಚರಣೆಗೆ ಶಬರಿಮಲೆ ಸಜ್ಜು

|
Google Oneindia Kannada News

ತಿರುವನಂತಪುರಂ, ಡಿ.6: ಕೋವಿಡ್ 19 ಸೋಂಕಿನ ಮಾರ್ಗಸೂಚಿ ನಿರ್ಬಂಧಗಳನ್ನು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸಡಿಲಿಸಿದೆ. ಕಾರ್ತಿಕ ಹುಣ್ಣಿಮೆ ಆಚರಣೆ ಬಳಿಕ ಇದೀಗ ಕಾರ್ತಿಕ ಸೋಮವಾರದಂದು ದೀಪಾಚರಣೆ ಶಬರಿಮಲೆ ದೇಗುಲ ಸಜ್ಜಾಗಿದೆ.

ಶಬರಿಮಲೆ ಯಾತ್ರೆಗೆ ತೆರಳುವ ಭಕ್ತರ ಸಂಖ್ಯೆ ಮಿತಿಯನ್ನು ಹೆಚ್ಚಿಸಲಾಗಿದೆ. ದೈನಂದಿನ ಭಕ್ತರ ಸಂಖ್ಯೆಯನ್ನು ಗರಿಷ್ಠ ಮಿತಿಯನ್ನು 1,000 ದಿಂದ 2,000ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ವಾರಾಂತ್ಯಗಳು ಮತ್ತು ರಜೆ ದಿನಗಳಲ್ಲಿ 2,000ಕ್ಕೆ ನಿಗದಿಗೊಳಿಸಲಾಗಿರುವ ಭಕ್ತರ ಸಂಖ್ಯೆಯನ್ನು 3,000ಕ್ಕೆ ಹೆಚ್ಚಿಸಲಾಗಿದೆ.

ಶಬರಿಮಲೆಗೆ ತೆರಳಲು ಬರುವ ಭಕ್ತರು ನಿಳಕ್ಕಳ್ ಮತ್ತು ಪಂಬಾ ಶಿಬಿರಗಳಿಗೆ ಬರುವ 24 ಗಂಟೆ ಮುನ್ನ ಕೋವಿಡ್ ನೆಗೆಟಿವ್ ಪರೀಕ್ಷೆಯ ವರದಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅನೇಕ ಕಡೆ ಕೋವಿಡ್ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಉಳಿದುಕೊಳ್ಳಲು ಭಕ್ತರಿಗೆ ಅವಕಾಶ ನೀಡುತ್ತಿಲ್ಲ.

Karthika Deepam Celebrations At Sabarimala Temple

ತಮಿಳುನಾಡು ಹಾಗೂ ಕೇರಳದಲ್ಲಿ ವಿಶೇಷವಾಗಿ ಆಚರಿಸುವ ಕಾರ್ತಿಕ ದೀಪಂ ಆಚರಣೆಯ ಸಂಭ್ರಮವನ್ನು ನವೆಂಬರ್ 30ರಂದು ಕಾಣಲಾಯಿತು. ಡಿಸೆಂಬರ್ 7 ಹಾಗೂ 14ರಂದು ಕಾರ್ತಿಕ ಸೋಮವಾರದಂದು ವಿಶೇಷ ದೀಪಾರಾಧನೆ ನೆರವೇರಸಲಾಗುತ್ತದೆ.

ಶಬರಿಮಲೆಗೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪರ್ಯಾಯ ಆಯ್ಕೆಶಬರಿಮಲೆಗೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪರ್ಯಾಯ ಆಯ್ಕೆ

ಚಾತುರ್ಮಾಸ ಕೊನೆಗೊಂಡು ದೀಪಗಳಿಂದ ಅಲಂಕರಿಸಲಾದ ದೇಗುಲವು ವರ್ಣಮಯವಾಗಿತ್ತು. ಹರಿಹರ ಇಬ್ಬರನ್ನು ಒಮ್ಮೆಗೆ ಆರಾಧಿಸುವ ಕಾರ್ತಿಕ ಮಾಸದಲ್ಲಿ ಹರಿಹರ ಸುತ ಅಯ್ಯಪ್ಪನನ್ನು ಕಂಡ ಭಕ್ತ ಸಮೂಹ ಒಕ್ಕೊರಲಿನಿಂದ ''ಸ್ವಾಮಿಯೇ ಶರಣಂ ಅಯ್ಯಪ್ಪ'' ಎನ್ನುತ್ತಾ ಭಾವಪರವಶರಾಗಿದ್ದಾರೆ.

English summary
The famous Sabarimala Temple in Kerala will be again decorated on Monday. As part of the Karthika Deepam celebrations, diyas and lamps were lit at the Sabarimala Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X