ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಫೇಸ್ ಬುಕ್ ಪುಟದಲ್ಲಿ ಕನ್ನಡ ಸಾಲು ನೋಡೋಕೇ ಚೆಂದ

|
Google Oneindia Kannada News

ತಿರುವನಂತಪುರಂ, ಜೂನ್ 14: ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಕನ್ನಡ ಪೋಸ್ಟ್ ಗಳು ರಾರಾಜಿಸುತ್ತಿದ್ದು, ಇದನ್ನು ಕನ್ನಡಿಗರು ಸ್ವಾಗತಿಸಿದ್ದಾರೆ.

ಕಳೆದ ವರ್ಷ ಕೇರಳದಲ್ಲಿ ಉಂಟಾದ ಪ್ರವಾಹದಿಂದಾಗಿ ಕೇರಳದಲ್ಲಿ ಪ್ರವಾಸೋದ್ಯಮ ಕುಂಠಿತವಾಗಿದ್ದು, ಜನರು ಕೇರಳದತ್ತ ಮುಖ ಮಾಡುವುದಕ್ಕೇ ಭಯ ಪಡುತ್ತಿದ್ದಾರೆ. ಅದರೊಟ್ಟಿಗೆ ಇದೀಗ ನಿಪಾಹ್ ವೈರಸ್ ಭೀತಿಯೂ ಆವರಿಸಿರುವದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕುತ್ತಿಲ್ಲ. ಇದರಿಂದಾಗಿ ಪ್ರವಾಸೋದ್ಯಮ ಇಲಾಖೆ ನಷ್ಟದಲ್ಲಿದ್ದು, ಅದನ್ನು ಮೇಲೆತ್ತುವ ಎಲ್ಲಾ ಪ್ರಯತ್ನವನ್ನೂ ಇಲ್ಲಿಸ ಸರ್ಕಾರ ಮಾಡುತ್ತಿದೆ.

ಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನಹಿಂದಿ ಹೇರಿಕೆ ವಿರೋಧಿಸಿ ಟ್ವಿಟ್ಟರ್ ನಲ್ಲಿ ಭಾರಿ ಅಭಿಯಾನ

ಸಮೃದ್ಧ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಕೇರಳ ದೇವರ ಸ್ವಂತ ನಾಡು ಎಂಬ ಖ್ಯಾತಿ ಗಳಿಸಿದ್ದೇ ಅದರ ಸುಂದರ ತಾಣಗಳ ಮೂಲಕ. ಕೇರಳ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲವಾಗಿದ್ದೇ ಪ್ರವಾಸೋದ್ಯಮ. ಆದರೆ ಇದೀಗ ಪ್ರವಾಸೋದ್ಯಮಕ್ಕೇ ಕುತ್ತು ಉಂಟಾಗುತ್ತಿದ್ದು, ಇದು ಸರ್ಕಾರಕ್ಕೆ ಆತಂಕವನ್ನುಂಟು ಮಾಡಿದೆ.

Kannada posts in Kerala government tourism departments official facebook page

ದೇಶದಾದ್ಯಂತ ಹಲವೆಡೆ ಇರುವ ಮತ್ತು ಕರ್ನಾಟಕದಾದ್ಯಂತ ಇರುವ ಕನ್ನಡಿಗರನ್ನು ಸೆಳೆಯುವ ಉದ್ದೇಶದಿಂದ ಕೇರಳ ಪ್ರವಾಸೋದ್ಯಮ ಇಲಾಖೆ ಈ ಉಪಾಯ ಮಾಡಿದೆ.

Kannada posts in Kerala government tourism departments official facebook page

'ಹಿಂದಿ ಹೇರಿಕೆ'ಗೆ ಕರ್ನಾಟಕದಲ್ಲಿ ಕಂಡಾಪಟ್ಟೆ ಸಿಟ್ಟು; ಟೀಕೆಯಲ್ಲಿ ನಾಯಕರ ಒಗ್ಗಟ್ಟು'ಹಿಂದಿ ಹೇರಿಕೆ'ಗೆ ಕರ್ನಾಟಕದಲ್ಲಿ ಕಂಡಾಪಟ್ಟೆ ಸಿಟ್ಟು; ಟೀಕೆಯಲ್ಲಿ ನಾಯಕರ ಒಗ್ಗಟ್ಟು

ಕೇರಳದ ಪ್ರಸಿದ್ಧ ಪ್ರವಾಸೋದ್ಯಮ ತಾಣವಾದ ವರ್ಕಾಲ, ಮುನ್ನಾರ್, ಕೊಚ್ಚಿ ಸೇರಿದಂತೆ ಹಲವು ಸ್ಥಳಗಳ ಬಗ್ಗೆ ಕನ್ನಡದಲ್ಲೇ ಪೋಸ್ಟ್ ಮಾಡಲಾಗಿದೆ.

English summary
Kannadigas welcome Kannada posts in Kerala government tourism department's official facebook page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X