ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾ ಮೇಲೆ ಅತ್ತೆಯಿಂದ ಹಲ್ಲೆ

|
Google Oneindia Kannada News

ತಿರುವನಂತಪುರಂ, ಜನವರಿ 15: ಇತ್ತೀಚೆಗಷ್ಟೇ ಶಬರಿಮಲೆ ದೇವಾಲಯ ಪ್ರವೇಶ ಮಾಡಿದ್ದ ಕನಕದುರ್ಗ ಅವರ ಮೇಲೆ ಅತ್ತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

50 ವರ್ಷದೊಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಕನಕ ದುರ್ಗಾ ಅವರು 40 ವರ್ಷದ ಬಿಂದು ಅಮ್ಮಿನಿ ಎಂಬ ಮಹಿಳೆ ಜತೆ ಶಬರಿಮಲೆ ದೇಗುಲ ಪ್ರವೇಶಿಸಿದ್ದರು.ಜ.2ರ ತಡರಾತ್ರಿ ಕನಕದುರ್ಗಾ ಮತ್ತು ಬಿಂದು ಪೊಲೀಸ್​ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದರು.

ಶಬರಿಮಲೆಗೆ ತೆರಳಿದ್ದ ಇಬ್ಬರು ಮಹಿಳೆಯರ ಕತೆ ಮುಂದೇನಾಯ್ತು? ಶಬರಿಮಲೆಗೆ ತೆರಳಿದ್ದ ಇಬ್ಬರು ಮಹಿಳೆಯರ ಕತೆ ಮುಂದೇನಾಯ್ತು?

ಬಳಿಕ ಅವರಿಗೆ ಪೊಲೀಸರು ಭದ್ರತೆ ನೀಡಿದ್ದರು. ಆದರೆ ಅವರ ಅತ್ತೆಯೇ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಪ್ರತಿಭಟನಾಕಾರರು ಒಡ್ಡಿದ್ದ ಜೀವ ಬೆದರಿಕೆಯಿಂದ ತಲೆ ಮರೆಸಿಕೊಂಡಿದ್ದ 39 ವರ್ಷದ ಕನಕದುರ್ಗ ಎರಡು ವಾರಗಳ ನಂತರ ಮಂಗಳವಾರ ಬೆಳಗ್ಗೆ ಮನೆಗೆ ತೆರಳಿದ್ದಾರೆ.

Kanakadurga, woman who entered Sabarimala temple, attacked by mother-in-law

ಈ ವೇಳೆ ಆಕೆಯ ಅತ್ತೆ ಕನಕದುರ್ಗ ಅವರ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಜೀವಕ್ಕೆ ಯಾವುದೇ ಅಪಾಯವಿಲ್ಲ ಎನ್ನಲಾಗಿದೆ.

ಡಿಸೆಂಬರ್ 18 ರಂದೇ ದೇವಾಲಯ ಪ್ರವೇಶಕ್ಕೆ ಈ ಇಬ್ಬರು ಮಹಿಳೆಯರು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಪೊಲೀಸ್ ಭದ್ರತೆಯೊಂದಿಗೆ ಅವರು ದೇವಾಲಯ ಪ್ರವೇಶಿಸಿದ್ದರು.

English summary
One of two women who entered Kerala's Sabarimala temple before daybreak on January 2 has allegedly been attacked by her mother-in-law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X