ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಪ್ಪ ಭಕ್ತರಿಗೆ ಸಡ್ಡುಹೊಡೆಯಲು ಕೇರಳ ಸರಕಾರದ ಭಾರೀ ಪ್ಲಾನ್?

|
Google Oneindia Kannada News

ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ, ತುಲಾ ಮಾಸದ ಪೂಜೆಗಾಗಿ ಅಕ್ಟೋಬರ್ 17ರಂದು ಸಂಜೆ ತೆರೆಯಲಾಗಿದ್ದ ಪುರಾಣಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಯನ್ನು, ಶಾಸ್ತ್ರೋಕ್ತವಾಗಿ ಅಕ್ಟೋಬರ್ 22ರಂದು ಮುಚ್ಚಲಾಗಿತ್ತು. ಎಲ್ಲಾ ಅಡೆತಡೆಗಳನ್ನು ಮೀರಿ, ಮಹಿಳೆಯರು ದೇವಾಲಯ ಪ್ರವೇಶಿಸುವುದಕ್ಕೆ ಅಯ್ಯಪ್ಪ ಭಕ್ತರು ಮತ್ತು ದೇವಾಲಯದ ಅರ್ಚಕರು ಯಶಸ್ವಿಯಾಗಿದ್ದರು.

ಮಂಡಲಪೂಜೆ, ಮಕರ ಸಂಕ್ರಾಂತಿ, ಮಕರವಿಳಕ್ಕು (ಜ್ಯೋತಿ) ಪೂಜೆಗಾಗಿ ಮುಂದಿನ ತಿಂಗಳಲ್ಲಿ (ನವೆಂಬರ್) ದೇವಾಲಯವನ್ನು ಮತ್ತೆ ತೆರೆಯಲಾಗುತ್ತದೆ. ನವೆಂಬರ್ ತಿಂಗಳಿನಿಂದ ಮುಂದಿನ ಜನವರಿ ತಿಂಗಳ ಅವಧಿಯಲ್ಲಿ, ದೇವಾಲಯ ಸುಮಾರು 36ದಿನ ತೆರೆದಿರುತ್ತದೆ.

ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್ ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್

ತುಲಾಮಾಸದ ಪೂಜೆಗೆ ಎಷ್ಟು ಭಕ್ತರು ಆಗಮಿಸುತ್ತಾರೋ, ಅದಕ್ಕಿಂತ ಕನಿಷ್ಠ ನಾಲ್ಕು ಪಟ್ಟು ಹೆಚ್ಚು ಅಯ್ಯಪ್ಪ ಭಕ್ತರು ಈ ಅವಧಿಯಲ್ಲಿ ಬರುವುದರಿಂದ, ಕೇರಳ ಪೊಲೀಸರಿಗೆ ಮತ್ತು ಸರಕಾರಕ್ಕೆ ಇದೊಂದು ಸವಾಲಿನ ಸಂಗತಿಯಾಗಿದೆ. ಈ ನಡುವೆ, ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನವೆಂಬರ್ 13ರಂದು ಬರಲಿದೆ.

ಅಯ್ಯಪ್ಪ ಭಕ್ತರನ್ನು ಬಂಧಿಸಿರುವುದಕ್ಕೆ ಕೇರಳ ಹೈಕೋರ್ಟ್ ಕೂಡಾ ಪಿಣರಾಯಿ ಸರಕಾರ ವಿರುದ್ದ ಅಸಮಾಧಾನ ಹೊರಹಾಕಿದೆ. ಕಾನೂನುಬಾಹಿರವಾಗಿ ಬಂಧಿಸಿರುವುದು ರುಜುವಾತಾದರೆ ತೀವ್ರತರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿ ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿ

ಮುಂದಿನ ಮೂರು ತಿಂಗಳು ಶಬರಿಮಲೆ ದೇವಾಲಯದ ಎಲ್ಲಾ ವಿಷಯಗಳ ಮೇಲೆ ನಿಯಂತ್ರಣ ಸಾಧಿಸಲು, ಪಿಣರಾಯಿ ಸರಕಾರ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದು, ಅಯ್ಯಪ್ಪ ಭಕ್ತರ ಮತ್ತು ಹಿಂದೂಗಳ ಭಾವನೆಯನ್ನು ಕೆರಳಿಸುವ ಸಾಧ್ಯತೆಯಿದೆ. ಸಿಪಿಐ(ಎಂ) ಕಾರ್ಯಕರ್ತರು ಶಬರಿಮಲೆ ದೇವಾಲಯಕ್ಕೆ ನೇಮಕ?, ಮುಂದೆ ಓದಿ

ಪಥನಂತಿಟ್ಟ, ತಿರುವನಂತಪುರಂ, ಕೋಳಿಕ್ಕೋಡ್, ಎರ್ನಾಕುಲಂ ಜಿಲ್ಲೆ

ಪಥನಂತಿಟ್ಟ, ತಿರುವನಂತಪುರಂ, ಕೋಳಿಕ್ಕೋಡ್, ಎರ್ನಾಕುಲಂ ಜಿಲ್ಲೆ

ಮಹಿಳಾ ಪ್ರವೇಶಕ್ಕೆ ನಿರ್ಬಂಧ ಹೇರಿದ ಆರೋಪದ ಮೇಲೆ, ಇದುವರೆಗೆ ಪಥನಂತಿಟ್ಟ, ತಿರುವನಂತಪುರಂ, ಕೋಳಿಕ್ಕೋಡ್ ಮತ್ತು ಎರ್ನಾಕುಲಂ ಜಿಲ್ಲೆಯಲ್ಲಿ ಒಟ್ಟು 2,053 ಜನರನ್ನು ಬಂಧಿಸಲಾಗಿದೆ. ಇದರ ಜೊತೆಗೆ, 450 ವಿವಿಧ ಪ್ರಕರಣಗಳು ದಾಖಲಾಗಿದೆ. ಕಾನೂನು ಬಾಹಿರವಾಗಿ ಬಂಧಿಸಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿದೆ, ಎಚ್ಚರ ಎಂದು ಕೇರಳ ಹೈಕೋರ್ಟ್ ಇದೇ ಕಾರಣಕ್ಕೆ ಪಿಣರಾಯಿ ಸರಕಾರಕ್ಕೆ ಚಾಟಿ ಬೀಸಿದ್ದು.

ಶಬರಿಮಲೆ ದೇವಾಲಯದ ದಾರಿಯ ನಿಯಂತ್ರಣ ಪೊಲೀಸ್ ಇಲಾಖೆಗೆ

ಶಬರಿಮಲೆ ದೇವಾಲಯದ ದಾರಿಯ ನಿಯಂತ್ರಣ ಪೊಲೀಸ್ ಇಲಾಖೆಗೆ

ಶಬರಿಮಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂಪಾದಿಂದ ಶಬರಿಮಲೆ ದೇವಾಲಯದ ವರೆಗಿನ ದಾರಿಯನ್ನು ಪೊಲೀಸರಿಗೆ ವಹಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಈ ಪ್ರದೇಶದ ಎರಡೂ ಬದಿಯನ್ನು ಪೊಲೀಸ್ ಸುರಕ್ಷಾ ವಲಯವನ್ನಾಗಿ ಪರಿವರ್ತಿಸಲು ಪಿಣರಾಯಿ ಸರಕಾರ ತೀರ್ಮಾನಿಸಿದೆ. ಸರಕಾರದ ಈ ಕ್ರಮದ ಬಗ್ಗೆ ನಮಗೂ ಮಾಹಿತಿಯಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಿದೆ.

ಶಬರಿಮಲೆ ದೇಗುಲ ಹಿಂಸಾಚಾರ; 1400ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆಶಬರಿಮಲೆ ದೇಗುಲ ಹಿಂಸಾಚಾರ; 1400ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ

ಮಂಡಲಪೂಜೆ, ಮಕರವಿಳಕ್ಕು ಪೂಜೆ

ಮಂಡಲಪೂಜೆ, ಮಕರವಿಳಕ್ಕು ಪೂಜೆ

ಶಬರಿಮಲೆ ದೇವಾಲಯ ನವೆಂಬರ್ ನಿಂದ ಜನವರಿ ತಿಂಗಳವರೆಗೆ ಈ ಕೆಳಗಿನ ದಿನಾಂಕಗಳಲ್ಲಿ ಭಕ್ತರಿಗೆ ತೆರೆದಿರುತ್ತದೆ.
ನವೆಂಬರ್ 5 ರಿಂದ 6 - ತಿರುನಾಲ್ ಅಟ್ಟ ವಿಶೇಷಂ ಪೂಜೆ
ನವೆಂಬರ್ 16 ರಿಂದ ಡಿಸೆಂಬರ್ 27 - ಮಂಡಲಪೂಜೆ
ಡಿಸೆಂಬರ್ 30 ರಿಂದ ಜನವರಿ 20 - ಮಕರವಿಳಕ್ಕು ಪೂಜೆ

1,700 ಸಿಪಿಐ(ಎಂ) ಕಾರ್ಯಕರ್ತರ ನೇಮಕ

1,700 ಸಿಪಿಐ(ಎಂ) ಕಾರ್ಯಕರ್ತರ ನೇಮಕ

ಮುಂದಿನ ಮೂರು ತಿಂಗಳಲ್ಲಿ ಶಬರಿಮಲೆ ದೇವಾಲಯದಲ್ಲಿ ನಡೆಯುವ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿವಿದಾನಗಳ ಮೇಲೆ ಕೇರಳ ಸರಕಾರ ನಿಯಂತ್ರಿಸಲು ಹೊರಟಿದ್ದು, 1,700 ಸಿಪಿಐ(ಎಂ) ಕಾರ್ಯಕರ್ತರನ್ನು ದೇವಾಲಯಕ್ಕೆ ಪಾರ್ಟ್ ಟೈಂ ಕೆಲಸಗಾರರನ್ನಾಗಿ ನೇಮಿಸಲು ನಿರ್ಧರಿಸಿದೆ ಎನ್ನುವ ಬಲವಾದ ಮಾಹಿತಿ ಹರಿದಾಡುತ್ತಿದೆ.

ಕೇರಳದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಬಿಜೆಪಿ ಪ್ರಭಾವ: ಪಿಣರಾಯಿಗೆ ಅದೇ ಚಿಂತೆ?ಕೇರಳದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಬಿಜೆಪಿ ಪ್ರಭಾವ: ಪಿಣರಾಯಿಗೆ ಅದೇ ಚಿಂತೆ?

ಟ್ರಾವಂಕೂರು ದೇವಸ್ವಮ್ ಬೋರ್ಡ್

ಟ್ರಾವಂಕೂರು ದೇವಸ್ವಮ್ ಬೋರ್ಡ್

ಶಬರಿಮಲೆ ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಟ್ರಾವಂಕೂರು ದೇವಸ್ವಮ್ ಬೋರ್ಡ್ ಅಧಿಕಾರಿಗಳಿಗೂ, ಕೇರಳ ಸರಕಾರ ಸೂಚನೆಯನ್ನು ನೀಡಿದೆ ಎನ್ನಲಾಗುತ್ತಿದೆ. ಸಿಪಿಐಎಂ ಮೂಲದವರನ್ನೇ, ದೇವಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಸೂಚಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

English summary
Is Kerala government decided to employ1,700 CPI(M) workers (part-time job) at Sabarimala during the pilgrimage season from November, in the aftermath of the SC verdict allowing women of all ages to enter the Sabarimala temple?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X