ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿನ ಮೂಲಕ ಉಗ್ರರ ಪ್ರವೇಶ: ಶಬರಿಮಲೆಯಲ್ಲಿ ಗುಪ್ತಚರ ಹೈಅಲರ್ಟ್

|
Google Oneindia Kannada News

ತಿರುವನಂತಪುರಂ ನ 12: ವಿಶ್ವವಿಖ್ಯಾತ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಅರಣ್ಯದ ಮೂಲಕ ಸಾಗಬೇಕಾಗಿರುವುದರಿಂದ, ಆ ಮೂಲಕವೇ ಉಗ್ರರು ನುಸುಳುವ ಸಾಧ್ಯತೆಯಿದೆ ಎಂದು ಕೇರಳ ಮತ್ತು ಕೇಂದ್ರ ಸರಕಾರಕ್ಕೆ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ.

ನವೆಂಬರ್ ಹದಿನಾರರಿಂದ ಜನವರಿ ಇಪ್ಪತ್ತರವರೆಗೆ ಶಬರಿಮಲೆ ದೇವಾಲಯ ಮಂಡಲಪೂಜೆ ಮತ್ತು ಮಕರ ಸಂಕ್ರಾತಿಗಾಗಿ, 66 ದಿನ ಬಾಗಿಲು ತೆರೆದಿರುತ್ತದೆ. ಈ ಅವಧಿಯಲ್ಲಿ ಅತೀವ ಭದ್ರತೆಯನ್ನು ನೀಡುವಂತೆ, ಗುಪ್ತಚರ ಇಲಾಖೆ ಸೂಚಿಸಿದೆ.

ನ.16ರಂದು ಬಾಗಿಲು ತೆರೆಯಲಿದೆ ಶಬರಿಮಲೆ ದೇವಾಲಯ ನ.16ರಂದು ಬಾಗಿಲು ತೆರೆಯಲಿದೆ ಶಬರಿಮಲೆ ದೇವಾಲಯ

ಅರಣ್ಯ ಪ್ರದೇಶದಲ್ಲಿ ಭಕ್ತರು ಬರುವಾಗ ಅವರ ರೂಪದಲ್ಲೇ ಉಗ್ರರು ನುಸುಳುವ ಸಾಧ್ಯತೆಯಿದೆ. ದೇವಾಲಯಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರ ಬಳಿಯೂ ಮಾಹಿತಿಯನ್ನು ಸಂಗ್ರಹಿಸಿ, ದೇವಾಲಯದೊಳಗೆ ಬಿಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Intelligence Issued High Alert To Sabarimala Temple: Possible Terror Entry Through Forest

ಈ ಬಾರಿ, ಶಬರಿಮಲೆ ದೇವಾಲಯದ ಮೇಲೆ, ವಾಯುಸೇನೆ ಮತ್ತು ನೌಕಾಪಡೆಯ ರಕ್ಷಣೆಯೂ ಇರಲಿದೆ. ಜೊತೆಗೆ, ದೇವಾಲಯಕ್ಕೆ ಸಾಮಗ್ರಿಗಳನ್ನು ತೆಗೆದುಕೊಂಡು ಬರುವ ವಾಹನವೂ ವಿಶೇಷ ತಪಾಸಣೆಗೆ ಒಳಪಡಲಿದೆ.

ನವೆಂಬರ್ 16 ರಿಂದ ಡಿಸೆಂಬರ್ 27ರವರೆಗೆ ದೇವಾಲಯ ಮಂಡಲಪೂಜೆಗೆ ತೆರೆಯಲಿದೆ. ಡಿಸೆಂಬರ್ 28, 29ರಂದು ದೇವಾಲಯವನ್ನು ಮುಚ್ಚಲಾಗುವುದು. ನಂತರ, ಡಿಸೆಂಬರ್ 30ರಿಂದ ಜನವರಿ 21ರವರೆಗೆ, ಮಕರ ವಿಳಕ್ಕುಗಾಗಿ ದೇವಾಲಯ ಮತ್ತೆ ತೆರೆಯಲಿದೆ.

ಸುಪ್ರೀಂ ನಲ್ಲಿ ಅಯೋಧ್ಯೆ ಆಯ್ತು... ಮುಂದಿನದು ಶಬರಿಮಲೆ!ಸುಪ್ರೀಂ ನಲ್ಲಿ ಅಯೋಧ್ಯೆ ಆಯ್ತು... ಮುಂದಿನದು ಶಬರಿಮಲೆ!

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಹೇರಿದ್ದ ನಿಷೇಧ ತೆರವುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಈ ವಾರದಲ್ಲಿ (ನ 12-16) ನೀಡುವ ಸಾಧ್ಯತೆಯಿದೆ.

English summary
Intelligence Issued High Alert To Sabarimala Ayyappa SwamyTemple: Possible Terror Entry Through Forest During November 16 - January 20, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X