ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರಕ್ಕೆ ಬಂದ ತರೂರ್, ಕೊಂಡಾಡಿದ ರಾಹುಲ್

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 17: ದೇವಾಲಯವೊಂದರಲ್ಲಿ ಅಚಾನಕ್ಕಾಗಿ ಬಿದ್ದು ಗಾಯಮಾಡಿಕೊಂಡಿದ್ದ ಕಾಂಗ್ರೆಸ್ ಮುಖಂಡ ಶಶಿ ತರೂರ್, ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರ ಮಾಡುತ್ತಿರುವುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊಂಡಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಅವರ ಉತ್ಸಾಹ ಮತ್ತು ಕಾರ್ಯತತ್ಪರತೆಗೆ ಜೈ ಎಂದಿದ್ದಾರೆ. "ಶಶಿ ತರೂರ್ ಅವರು ಬಿದ್ದು, ಏಟು ಮಾಡಿಕೊಂಡಾಗ ನಾನು ಹೆದರಿದ್ದೆ. ಆದರೆ ಇದೀಗ ಅವರು ಕೆಲಸಕ್ಕೆ ಮರಳಿದ್ದಾರೆ. ಅವರ ಉತ್ಸಾಹ ಮತ್ತು ಕೆಲಸದ ಬಗೆಗಿನ ಶ್ರದ್ಧೆ ಏನು ಎಂಬುದಕ್ಕೆ ಇದೇ ಸಾಕ್ಷಿ. ನಾನು ಕಾಂಗ್ರೆಸ್ ಅಧ್ಯಕ್ಷನಾಗಿ ಹೇಳುತ್ತೇನೆ. ಶಶಿ ತರೂರ್ ಅವರು ಸಂಸತ್ತಿನಲ್ಲಿ ನಿಮ್ಮನ್ನೆಲ್ಲ ಸಮರ್ಥವಾಗಿ ಪ್ರತಿನಿಧಿಸುತ್ತಾರೆ. ಅವರು ಕೇರಳಕ್ಕೆ ಒಂದು ಆಸ್ತಿ" ಎಂದು ರಾಹುಲ್ ಗಾಂಧಿ ಹಾಡಿ ಹೊಗಳಿದ್ದಾರೆ.

ಆಸ್ಪತ್ರೆಗೆ ಬಂದ ನಿರ್ಮಲಾ ಸೀತಾರಾಮನ್ ಸೌಜನ್ಯಕ್ಕೆ ಕರಗಿಹೋದ ಶಶಿ ತರೂರ್ ಆಸ್ಪತ್ರೆಗೆ ಬಂದ ನಿರ್ಮಲಾ ಸೀತಾರಾಮನ್ ಸೌಜನ್ಯಕ್ಕೆ ಕರಗಿಹೋದ ಶಶಿ ತರೂರ್

ಕೇರಳದ ಗಾಂಧಾರಿ ಅಮನ್ ಕೋವಿಲ್ ದೇವಸ್ಥಾನದಲ್ಲಿ ಅಚಾನಕ್ಕಾಗಿ ಬಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ತಲೆಗೆ ತೀವ್ರವಾಗಿ ಗಾಯವಾಗಿತ್ತು.ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತೆ ನೀಡಲಾಗುತ್ತಿತ್ತು. ತಲೆಗೆ ತೀವ್ರ ಗಾಯವಾಗಿದ್ದು, ವೈದ್ಯರು ಹನ್ನೊಂದು ಹೊಲಿಗೆ ಹಾಕಿದ್ದರು.

Injured Shashi Taroor attends a rally in kerala, Rahul praises him

ಈ ಎಲ್ಲವುಗಳ ನಡುವೆಯೂ ಪ್ರಚಾರಕ್ಕೆ ಆಗಮಿಸಿ ಅವರು ಜನರ ಗಮನ ಸೆಳೆದರು.

ಮಂಗಳವಾರವಷ್ಟೇ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಶಿ ತರೂರ್ ಅವರನ್ನು ಆಸ್ಪತ್ರೆಯಲ್ಲಿ ಅನಿರೀಕ್ಷಿತವಾಗಿ ಭೇಟಿ ಮಾಡಿದ್ದರು. ಅವರ ಸೌಜನ್ಯಕ್ಕೆ ಕರಗಿದ ಶಶಿ ತರೂರ್, ಭಾರತೀಯ ರಾಜಕಾರಣದಲ್ಲಿ ಇಂಥ ಪ್ರಬುದ್ಧ ನಡೆ ಅಪರೂಪ ಎಂದು ಶ್ಲಾಘಿಸಿದ್ದರು.

ಶಶಿ ತರೂರ್‌ ತಲೆಗೆ ತೀವ್ರ ಪೆಟ್ಟು, 6 ಹೊಲಿಗೆ ಹಾಕಿದ ವೈದ್ಯರುಶಶಿ ತರೂರ್‌ ತಲೆಗೆ ತೀವ್ರ ಪೆಟ್ಟು, 6 ಹೊಲಿಗೆ ಹಾಕಿದ ವೈದ್ಯರು

ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್, ಏಪ್ರಿಲ್ 23 ರಂದು ಚುನಾವಣೆ ಎದುರಿಸಲಿದ್ದಾರೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

English summary
Congress leader Shashi Taroor who was injured in an incident in a temple in Kerala attended a campaign rally in Thiruvanatapuram. Congress president praises his spirit and dedication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X