ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಕೇರಳದಲ್ಲಿ ಎರಡನೇ ಪ್ರಕರಣ ಪತ್ತೆ

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 2: ಕೇರಳದಲ್ಲಿ ಎರಡನೇ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಮೊದಲ ಪ್ರಕರಣ ಪತ್ತೆಯಾಗಿ ಮೂರು ದಿನಗಳ ಬಳಿಕ ಎರಡನೇ ಪ್ರಕರಣ ಪತ್ತೆಯಾಗಿದೆ.

ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಇವರು ಚೀನಾದಿಂದ ಭಾರತಕ್ಕೆ ಬಂದವರಾಗಿದ್ದಾರೆ. ರಾಷ್ಟ್ರದ ಮೊದಲ ಕೊರೊನಾ ವೈರಸ್​ ಕೇರಳದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿತ್ತು.

ಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರುಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರು

ಚೀನಾದಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಯಲ್ಲಿ ವೈರಸ್​ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ಪತ್ತೆಯಾಗಿದೆ. ಚೀನಾದ ವುವಾನ್​​ನಲ್ಲಿ ಈ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ. ವೈರಸ್​ ಹರಡದಂತೆ ಎಲ್ಲ ರೀತಿಯ ಎಚ್ಚರಿಕೆ ವಹಿಸುವಂತೆ ಕೇರಳಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ.

Indias Second Coronavirus Case Reported In Kerala

ಚೀನಾದಕ್ಕೆ ಕೇರಳಕ್ಕೆ ಆಗಮಿಸುವ ವ್ಯಕ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತಪಾಸಣೆ ನಡೆಸಲು ಪ್ರಯೋಗಾಲಯಗಳನ್ನು ತೆರೆಯಲಾಗಿದೆ.

ಕೊರೊನಾ ಮಾರಣಾಂತಿಕ ಸೋಂಕು ಇಡೀ ಚೀನಾವನ್ನೇ ಆವರಿಸಿದೆ. ಅಲ್ಲಿನ ವುಹಾನ್‌ನಲ್ಲಿರುವ 324 ಭಾರತೀಯರನ್ನು ವಿಶೇಷ ವಿಮಾನ ಮೂಲಕ ಕರೆತರಲಾಯಿತು. ಆದರೆ ಆರು ಮಂದಿ ಮಾತ್ರ ವಿಶೇಷ ವಿಮಾನವನ್ನು ಏರಲಿಲ್ಲ. ನಗರದಲ್ಲಿ ತೀವ್ರ ಜ್ವರದಿಂದಾಗಿ ಆರು ಭಾರತೀಯರನ್ನು ಮೊದಲ ವಿಶೇಷ ಏರ್ ಇಂಡಿಯಾ ವಿಮಾನ ಹತ್ತಲು ನಿರ್ಬಂಧ ಹೇರಲಾಗಿತ್ತು ಎಂದು ತಿಳಿದುಬಂದಿದೆ.

English summary
India's second case of coronavirus has been reported in Kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X