ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆ

|
Google Oneindia Kannada News

Recommended Video

Corona Virus in Kerala!, First case in India | Oneindia kannada

ತಿರುವನಂತಪುರ, ಜನವರಿ 30: ಅಪಾಯಕಾರಿ ಕೊರೊನಾ ವೈರಸ್ ಭಾರತಕ್ಕೆ ಲಗ್ಗೆ ಇಟ್ಟಿದೆ. ಕೊರೊನಾ ವೈರಸ್ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.

ಕೇರಳದ ಆರೋಗ್ಯ ಇಲಾಖೆಯು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು, ಚೀನಾದ ವುಹಾನ್ ಪ್ರಾಂಥ್ಯದಲ್ಲಿ ಕಲಿಯುತ್ತಿದ್ದು, ಭಾರತಕ್ಕೆ ವಾಪಸ್ಸಾಗಿರುವ ವಿದ್ಯಾರ್ಥಿನಿ ಕೊರೊನಾ ವೈರಸ್ ಬಾಧಿತರಾಗಿರುವುದು ಪತ್ತೆ ಆಗಿದೆ.

ಕೊರೊನಾ ವೈರಸ್: ಭಾರತದ N-95 ಮಾಸ್ಕ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!ಕೊರೊನಾ ವೈರಸ್: ಭಾರತದ N-95 ಮಾಸ್ಕ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

'ವಿದ್ಯಾರ್ಥಿನಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದ್ದು, ಆಕೆಯನ್ನು ಆಸ್ಪತ್ರೆಯಲ್ಲಿ ನಿಘಾ ಘಟಕದಲ್ಲಿ ಇಡಲಾಗಿದೆ. ಆಕೆಯ ಆರೋಗ್ಯವನ್ನು ಪರಿವೀಕ್ಷಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ಇಲಾಖೆ ಹೇಳಿದೆ. ವಿದ್ಯಾರ್ಥಿನಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Indias First Coronavirus Case Found In Kerala

ಕೇರಳದಲ್ಲಿ ಇನ್ನೂ ಹತ್ತು ಮಂದಿ ಕೊರೊನಾ ವೈರಸ್ ಶಂಕಿತರನ್ನು ನಿಗಾ ಘಟಕದಲ್ಲಿ ಇಟ್ಟು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆದರೆ ಈ ಹತ್ತು ಮಂದಿಯು ಕೊರೊನಾ ವೈರಸ್ ಬಾಧಿತರಾಗಿದ್ದಾರೆಯೇ ಇಲ್ಲವೇ ಎಂಬುದು ಖಾತ್ರಿಯಾಗಿಲ್ಲ.

ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!

ಚೀನಾದಿಂದ ಭಾರತದ ವಿವಿಧ ರಾಜ್ಯ ವಾಪಸ್ಸಾಗಿರುವ 800 ಕ್ಕೂ ಹೆಚ್ಚು ಮಂದಿಯನ್ನು ನಿಗಾ ಘಟಕದಲ್ಲಿ ಇಟ್ಟು ತಪಾಸಣೆ ನಡೆಸಲಾಗುತ್ತಿದೆ.

'ಕೊರೊನಾ ವೈರಸ್ ಅನ್ನು ಎದುರಿಸಲು ಸಜ್ಜಾಗಿದ್ದೇವೆ, ಆತಂಕದ ಅಗತ್ಯವಿಲ್ಲ' ಎಂದು ಕೆಲ ದಿನಗಳ ಹಿಂದಷ್ಟೆ ಭಾರತ ಸರ್ಕಾರ ಹೇಳಿತ್ತು. ವೈರಸ್ ಅನ್ನು ಶೀಘ್ರವಾಗಿ ಗುರುತಿಸುವ 'ಥರ್ಮಸ್ ಸ್ಕ್ರೀನಿಂಗ್ ಸೆನ್ಸರ್‌'ಗಳನ್ನು ಖರೀದಿಸಲಾಗಿದ್ದು, ಇನ್ನಷ್ಟು ಸೆನ್ಸರ್‌ಗಳಿಗೆ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಕೊರೊನಾ ವೈರಸ್‌ನ ಮೂಲವಾದ ಚೀನಾದಲ್ಲಿ ವೈರಸ್‌ನಿಂದಾಗಿ ಈವರೆಗೆ 170 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ವೈರಸ್‌ನಿಂದ ಬಾಧಿತರಾಗಿದ್ದಾರೆ.

English summary
India's first coronavirus case found in Kerala. A student who came back from China's Wuhan university has been diagnosed positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X