ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಬಿಜೆಪಿ ನಾಯಕ ಬಾಲಶಂಕರ್‌ಗೆ ಕ್ರಿಶ್ಚಿಯನ್ನರ ಬೆಂಬಲ

|
Google Oneindia Kannada News

ತಿರುವನಂತಪುರಂ, ಮಾರ್ಚ್ 05: ಕೇರಳದಲ್ಲಿ ಬಿಜೆಪಿ ನಾಯಕ ಆರ್ ಬಾಲಶಂಕರ್‌ಗೆ ಬೆಂಬಲ ನೀಡುವುದಾಗಿ ಕ್ರಿಶ್ಚಿಯನ್ನರು ಘೋಷಿಸಿದ್ದಾರೆ.

ಚಪ್ಪಾಡ್‌ನಲ್ಲಿರುವ ಮಾಲಂಕಾರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ವಕ್ತಾರ ಫಾದರ್ ಜಾನ್ಸ್ ಅಬ್ರಹಂ ಕೋನಟ್ ಆರ್ ಬಾಲಶಂಕರ್ ಅವರಿಗೆ ಮತ ಹಾಕುವಂತೆ ಒತ್ತಾಯಿಸಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ

ಬಾಲಶಂಕರ್ ಅವರು ಕೇರಳ ಆಲಪ್ಪುಳ ಜಿಲ್ಲೆಯಲ್ಲಿರುವ 1 ಸಾವಿರ ವರ್ಷ ಹಳೆಯ ಚರ್ಚ್‌ನ್ನು ಉಳಿಸಿಕೊಟ್ಟಿದ್ದಾರೆ, ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಚರ್ಚ್‌ ನೆಲಸಮವಾಗಿಬಿಡುತ್ತಿತ್ತು ಎಂದು ಹಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

In Kerala Orthodox Syrian Church Urged Its Followers To Vote For BJP Leader R Balashankar

ಬಾಲಶಂಕರ್ ಇಲ್ಲದಿದ್ದರೆ ಚರ್ಚ್ ಕೂಡ ಇರುತ್ತಿರಲಿಲ್ಲ, ಬಾಲಶಂಕರ್ ಅವರಿಗೆ ಮತ ಹಾಕದಿದ್ದರೆ ಅದು ಕೃತಜ್ಞತೆ ಎನಿಸಿಕೊಳ್ಳುವುದಿಲ್ಲ. ಅವರಿಗೆ ಮತ ಹಾಕೋಣ ಗೆಲುವು ಸೋಲು ದೇವರಿಗೆ ಬಿಡೋಣ ಎಂದು ಚರ್ಚ್‌ನ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.

ಚಪ್ಪಾಡ್ ಚರ್ಚ್ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ, ಪುರಾತತ್ವ ಇಲಾಖೆಗೆ ಚರ್ಚ್ ಹಸ್ತಾಂತರಿಸಲಾಯಿತು, ಬಳಿಕ ನೆಲಸಮ ಮಾಡುವ ವಿಚಾರವನ್ನು ಕೈಬಿಡಲಾಗಿತ್ತು ಎಂದರು.

ಬಾಲಶಂಕರ್ ಅವರು ಚೆಂಗನೂರಿನ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಚರ್ಚ್‌ಗೆ ಯಾವುದೇ ಸಹಾಯ ಮಾಡದೆ ಎಲ್‌ಡಿಎಫ್ ಹಾಗೂ ಯುಡಿಎಫ್ ಹಿಂದೆ ಸರಿದಿದ್ದರು. ಆಗ ಬಾಲಶಂಕರ್ ಅವರೇ ಮುಂದೆ ನಿಂತು ಚರ್ಚ್ ಉಳಿಸಿಕೊಟ್ಟಿದ್ದರು.

ಕೇರಳದ 14 ಜಿಲ್ಲೆಗಳಲ್ಲಿನ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಚುನಾವಣೆ ನಡೆಯಲಿದೆ. ಮಾರ್ಚ್ 12ರಂದು ಅಧಿಸೂಚನೆ ಪ್ರಕಟ ಮಾರ್ಚ್ 20ರಂದು ನಾಮಪತ್ರ ಪರಿಶೀಲನೆ ಮಾರ್ಚ್ 22ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಏಪ್ರಿಲ್ 6 ರಂದು ಮತದಾನ ಮೇ 2 ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು, ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು.

ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು.

English summary
The MALANKARA Orthodox Syrian Church on Thursday urged its followers to vote for BJP leader R Balashankar, whose intervention saved a 1,000-year-old church in Kerala’s Alappuzha district from demolition to widen a national highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X