ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಮೊದಲ ಕೊವಿಡ್ 19 ಆಸ್ಪತ್ರೆ ಉದ್ಘಾಟನೆ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 10: ಕೇರಳದಲ್ಲಿ ಮೊಟ್ಟ ಮೊದಲ ಕೊವಿಡ್ 19 ಆಸ್ಪತ್ರೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ್ದಾರೆ.

ಟಾಟಾ ಗ್ರೂಪ್ ಸಹಭಾಗಿತ್ವದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಕೊವಿಡ್ 19 ರೋಗಿಗಳಿಗೆಂದೇ ಈ ಆಸ್ಪತ್ರೆ ಮೀಸಲಿಡಲಾಗಿದೆ.ಆಸ್ಪತ್ರೆಯು ಕಾಸರಗೋಡಿನ ತೆಕ್ಕಿಲ್ ಗ್ರಾಮದ ಚಟ್ಟಂಚಾಲ್‌ನಲ್ಲಿ ನಿರ್ಮಿಸಲಾಗಿದ್ದು, ಉದ್ಘಾಟನೆಗೊಂಡಿದೆ.

ಭಾರತದಲ್ಲಿ 24 ಗಂಟೆಯಲ್ಲಿ 95,735 ಹೊಸ ಕೋವಿಡ್ ಪ್ರಕರಣಭಾರತದಲ್ಲಿ 24 ಗಂಟೆಯಲ್ಲಿ 95,735 ಹೊಸ ಕೋವಿಡ್ ಪ್ರಕರಣ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಟಾಟಾ ಕೊರೊನಾ ಆಸ್ಪತ್ರೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಕಾಸರಗೋಡಿನಲ್ಲಿ ಕೊರೊನಾ ಆರಂಭದ ಹಂತದಲ್ಲಿ ಅತಿ ಹೆಚ್ಚು ರೋಗಿಗಳು ಪತ್ತೆಯಾಗಿದ್ದರು.

In Kerala First Dedicated Covid 19 Hospital Inaugurated

ಹೀಗಾಗಿ ಅಲ್ಲಿಯೇ ಆಸ್ಪತ್ರೆಯನ್ನು ತೆರೆದಿದ್ದೇವೆ. ಜತೆಗೆ ನಾಲ್ಕು ದಿನಗಳಲ್ಲಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಡಳಿತ ಬ್ಲಾಧಿಕ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 200 ಮಂದಿಗೆ ದಾಖಲಾತಿ ಸೌಲಭ್ಯಗಳಿರುವ ಕೊವಿಡ್ ಆಸ್ಪತ್ರೆಯಾಗಿ ಸಿದ್ಧಗೊಂಡಿತ್ತು. ಈ ಆಸ್ಪತ್ರೆಗಾಗಿ 273 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯೂ ಆರಂಭಗೊಂಡಿದೆ.

ಆರೋಗ್ಯ ಸಚಿವೆ ಕೆ ಶೈಲಜಾ ಮಾತನಾಡಿ, ಸಮಾಜದಲ್ಲಿನ ಒಗ್ಗಟ್ಟಿನಿಂದಾಗಿ ರಾಜ್ಯದ ಆರೋಗ್ಯ ವಲಯದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಮುಂದಿನ ದಿನಗಳ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದರು.

In Kerala First Dedicated Covid 19 Hospital Inaugurated

ಸಚಿವ ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್‌ಎ ನೆಲ್ಲಿಕುನ್ನು ಪಾಲ್ಗೊಂಡಿದ್ದರು.

English summary
The first dedicated COVID-19 hospital in Kerala, built by the Tata Group, was inaugurated .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X