ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವಾರ ವಿಳಂಬ ನಂತರ ಅಂತೂ ಕೇರಳ ಪ್ರವೇಶಿಸಿದ ಮುಂಗಾರು

|
Google Oneindia Kannada News

ತಿರುವನಂತಪುರಂ, ಜೂನ್ 8: ಒಂದು ವಾರ ವಿಳಂಬದ ಬಳಿಕ ಮುಂಗಾರು ಕೊನೆಗೂ ಕೇರಳ ಪ್ರವೇಶಿಸಿದೆ.

ಕೇರಳದ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರಿನಿಂದ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ನಿಟ್ಟುಸಿರು ಬಿಡುವಂತಾಗಿದೆ. ಸಾಮಾನ್ಯವಾಗಿ ಎಲ್ಲಾ ಕೃಷಿಯು ಶೇ. 75ರಷ್ಟು ಮುಂಗಾರನ್ನೇ ಅವಲಂಬಿಸಿವೆ.

ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು, 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೆಲವೇ ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು, 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಉತ್ತಮ ಮುಂಗಾರು ನೇರವಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತವೆ. ಭಾರತದ ಪರ್ವತಗಳು, ಉತ್ತರ ಭಾರತ, ಮಧ್ಯಭಾರತದಲ್ಲಿ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.

IMD says Monsoon hits Kerala coast after a week delay

ದೆಹಲಿಗೆ ಮುಂಗಾರು ಜೂನ್ 29ರೊಳಗೆ ಪ್ರವೇಶಿಸಲಿದೆ. ಮೇ10ರ ನಂತರ ಕೇರಳದ ತಿರುವನಂತಪುರಂ, ತ್ರಿಶೂರ್, ಕೊಲ್ಲಂ, ಕೋಳಿಕ್ಕೋಡ್, ಕಣ್ಣೂರಿನಲ್ಲಿ ಒಟ್ಟು 2.5 ಮಿ.ಮೀನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ನಾಲ್ಕು ದಿನ ತ್ರಿಶೂರ್, ಎರ್ನಾಕುಲಮ್, ಮಲಪ್ಪುರಂ, ಕೋಳಿಕ್ಕೋಡ್ ನಲ್ಲಿ ರೆಡ್ಡ ಅಲರ್ಟ್ ಘೋಷಿಸಲಾಗಿದೆ.ಈಗಾಗಲೇ ಕೇರಳದ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದೆ. ಉತ್ತರ ಭಾರತ ಹಾಗೂ ಮಧ್ಯಭಾರತವನ್ನು ಮುಂಗಾರು ಜೂನ್ 29ರ ಬಳಿಕ ಪ್ರವೇಶಿಸಲಿದೆ.

English summary
IMD says Monsoon hits Kerala coast after a week delay, Several parts of Kerala have started receiving a good amount of rainfall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X