• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಏರಿಕೆ; ಕೇರಳದಲ್ಲಿ ಕೊರೊನಾ ನಿಯಂತ್ರಣ ಕಾರ್ಯತಂತ್ರವನ್ನೇ ಬದಲಿಸಲು ಸಲಹೆ

|
Google Oneindia Kannada News

ತಿರುವನಂತಪುರಂ, ಆಗಸ್ಟ್‌ 03: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದ್ದರೂ ಕೇರಳದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿಲ್ಲ. ಸದ್ಯಕ್ಕೆ ದೇಶದ ಅರ್ಧದಷ್ಟು ಹೊಸ ಕೊರೊನಾ ಪ್ರಕರಣಗಳು ಕೇರಳ ರಾಜ್ಯವೊಂದರಿಂದಲೇ ದಾಖಲಾಗುತ್ತಿದ್ದು, ಕೊರೊನಾ ಹಾಟ್‌ಸ್ಪಾಟ್ ರಾಜ್ಯವೆನಿಸಿಕೊಳ್ಳುತ್ತಿದೆ. ಕೊರೊನಾ ಮೂರನೇ ಅಲೆ ಆತಂಕವೂ ಎದುರಾಗಿರುವುದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣದ ಕುರಿತು ವೈದ್ಯಕೀಯ ತಜ್ಞರ ಸಮಿತಿಯೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಈ ಸಭೆಗೂ ಮುನ್ನ ಭಾರತೀಯ ವೈದ್ಯಕೀಯ ಸಂಘ (IMA) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಕೊರೊನಾ ನಿಯಂತ್ರಣಕ್ಕೆ ಈಗಿರುವ ಕಾರ್ಯತಂತ್ರಗಳನ್ನು ಕೈಬಿಟ್ಟು ಹೊಸ ಕಾರ್ಯತಂತ್ರಗಳನ್ನು ರೂಪಿಸುವಂತೆ ಸೂಚಿಸಿದೆ. ಜೊತೆಗೆ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಆದ್ಯತೆ ಮೇರೆಗೆ ವಿತರಣೆ ಮಾಡುವಂತೆ ಸಲಹೆ ನೀಡಿದೆ. ಆದಷ್ಟು ಶೀಘ್ರವೇ ಖಾಸಗಿ ಕ್ಲಿನಿಕ್‌ಗಳಲ್ಲಿ ಕೂಡ ಕೈಗೆಟುಕುವ ದರದಲ್ಲಿ ಲಸಿಕೆಗಳನ್ನು ನೀಡುವಂತೆ ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದು ತಿಳಿಸಿದೆ. ಮುಂದೆ ಓದಿ...

 ಆಗಸ್ಟ್‌ನಲ್ಲೇ ಮೂರನೇ ಅಲೆ, ಅಕ್ಟೋಬರ್‌ನಲ್ಲಿ ಮತ್ತೆ ಉತ್ತುಂಗಕ್ಕೇರಲಿದೆ ಕೊರೊನಾ ಆಗಸ್ಟ್‌ನಲ್ಲೇ ಮೂರನೇ ಅಲೆ, ಅಕ್ಟೋಬರ್‌ನಲ್ಲಿ ಮತ್ತೆ ಉತ್ತುಂಗಕ್ಕೇರಲಿದೆ ಕೊರೊನಾ

"ವಾರಾಂತ್ಯ ಲಾಕ್‌ಡೌನ್ ಜನದಟ್ಟಣೆಗೆ ಕಾರಣವಾಗಿದೆ"

"ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಪ್ರಸ್ತುತ ಕಾರ್ಯಸೂಚಿಯನ್ನು ಕೈಬಿಟ್ಟು ಹೊಸ ಕಾರ್ಯತಂತ್ರ ರೂಪಿಸಬೇಕು ಹಾಗೂ ಕೊರೊನಾ ರೋಗಿಗಳ ಪತ್ತೆಗೆ ಮುಂದಾಗಬೇಕು. ಪರ್ಯಾಯ ದಿನದ ಅಥವಾ ವಾರಾಂತ್ಯ ಲಾಕ್‌ಡೌನ್ ಜನದಟ್ಟಣೆಗೆ ಕಾರಣವಾಗಿದೆ. ಹೀಗಾಗಿ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಸೋಮವಾರ ಹಾಗೂ ಶುಕ್ರವಾರ ಅತಿ ಹೆಚ್ಚಿನ ಜನರು ಒಂದೆಡೆ ಸೇರುತ್ತಿದ್ದಾರೆ. ಕೊರೊನಾ ರೋಗಿಗಳ ಸಂಪರ್ಕ ಪತ್ತೆ ಹಚ್ಚುವ ಕಾರ್ಯತಂತ್ರವನ್ನು ಬಲಗೊಳಿಸಬೇಕೆಂದು ಸರ್ಕಾರಕ್ಕೆ ಕೇಳಿದ್ದೇವೆ" ಎಂದು ಐಎಂಎ ಸದಸ್ಯ ಡಾ. ಸಿದ್ಧಾರ್ಥ ಹೇಳಿದರು.

 ಅಂಗಡಿಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಸಮಯ ನೀಡಲು ಸಲಹೆ

ಅಂಗಡಿಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಸಮಯ ನೀಡಲು ಸಲಹೆ

ಕೊರೊನಾ ಸಾಂಕ್ರಾಮಿಕದಲ್ಲಿ ಜೀವನ ಹಾಗೂ ಜೀವನೋಪಾಯದ ನಡುವಿನ ಈ ಹಾದಿಯಲ್ಲಿ ಎಚ್ಚರಿಕೆಯಿಂದ ಸಾಗುವಂತೆ ಐಎಂಎ ಸರ್ಕಾರವನ್ನು ಯಾವಾಗಲೂ ಎಚ್ಚರಿಸಿದೆ ಹಾಗೂ ಜನಸಂದಣಿ ತಡೆಗಟ್ಟಲು ಹಾಗೂ ಅದರಿಂದ ರೋಗ ಹರಡುವಿಕೆ ನಿಯಂತ್ರಣಕ್ಕೆ ಅಂಗಡಿಗಳ ಹಾಗೂ ಸಂಸ್ಥೆಗಳ ಕಾರ್ಯನಿರ್ವಹಣೆ ಸಮಯವನ್ನು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

 ಕೇರಳದಲ್ಲಿ ಅತಿ ಕಡಿಮೆ ಸೆರೊಪ್ರಿವಲೆನ್ಸ್, ಅತಿ ಹೆಚ್ಚು ಪುನರುತ್ಪತ್ತಿ ದರ

ಕೇರಳದಲ್ಲಿ ಅತಿ ಕಡಿಮೆ ಸೆರೊಪ್ರಿವಲೆನ್ಸ್, ಅತಿ ಹೆಚ್ಚು ಪುನರುತ್ಪತ್ತಿ ದರ

ಕೇರಳದಲ್ಲಿ ಅತಿ ಕಡಿಮೆ ಸೆರೊಪ್ರಿವೆಲೆನ್ಸ್ ದರ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) ದಾಖಲಾಗಿದೆ. ಈ ದರ ಶೇ 44ರಷ್ಟು ಇದ್ದು, ರಾಜ್ಯದ ಜನಸಂಖ್ಯೆಯ ಕನಿಷ್ಠ ಶೇ 56 ಮಂದಿ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ ಎಂಬುದನ್ನು ಇದು ತೋರುತ್ತಿದೆ. ಇದಷ್ಟೇ ಅಲ್ಲ, ಸೋಂಕಿನ ಪ್ರಮಾಣವನ್ನು ಪತ್ತೆ ಹಚ್ಚುವ "R" ದರ, ಅಂದರೆ ಸೋಂಕಿನ ಪುನರುತ್ಪತ್ತಿ ದರ ಕೇರಳದಲ್ಲಿ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಯಲ್ಲಿ ಈ ದರ 0.97 ಇದ್ದರೆ, ಕೇರಳ ಒಂದರಲ್ಲೇ ಇದು 1.27 ಇದೆ ಎಂದು ಎಚ್ಚರಿಕೆ ರವಾನಿಸಲಾಗಿದೆ. ಆಗಸ್ಟ್‌ 2ರಂದು ಕೇರಳದಲ್ಲಿ 13,984 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದವು.

 ಟೀಕೆಗೆ ಒಳಗಾಗಿದ್ದ ಕೇರಳ ಕೊರೊನಾ ನಿಯಂತ್ರಣ ಮಾದರಿ

ಟೀಕೆಗೆ ಒಳಗಾಗಿದ್ದ ಕೇರಳ ಕೊರೊನಾ ನಿಯಂತ್ರಣ ಮಾದರಿ

ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಮಾದರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಕಳೆದ ತಿಂಗಳಷ್ಟೇ, ಬಕ್ರೀದ್ ಹಬ್ಬದ ಸಮಯ ಕೋವಿಡ್ -19 ನಿರ್ಬಂಧಗಳನ್ನು ಮೂರು ದಿನಗಳವರೆಗೆ ಸಡಿಲಗೊಳಿಸಬೇಕು ಎಂಬ ಕೇರಳ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಕನ್ವರ್ ಯಾತ್ರೆ ಪ್ರಕರಣದ ರೀತಿಯಲ್ಲೇ ಸಂವಿಧಾನದ 21 ಮತ್ತು 144ನೇ ಕಾಯ್ದೆ ಅಡಿಯಲ್ಲಿ ಅವಕಾಶ ನೀಡುವುದಕ್ಕೆ ನಿರ್ದೇಶನ ನೀಡಿತ್ತು. ಇದು ಕೊರೊನಾ ಏರಿಕೆಗೆ ಕಾರಣ ಎಂಬ ಟೀಕೆಗಳು ಕೇಳಿಬಂದಿದ್ದವು.

ಇದೀಗ ದೇಶದಲ್ಲಿ ಮತ್ತೆ ಪ್ರತಿನಿತ್ಯ 40,000ಕ್ಕಿಂತಲೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ನಾಲ್ಕು ದಿನಗಳಿಂದ ನಿರಂತರವಾಗಿ ಪ್ರತಿನಿತ್ಯ 40,000ಕ್ಕಿಂತಲೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ ಅರ್ಧದಷ್ಟು ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗುತ್ತಿವೆ. ಕೇರಳ ಕೊವಿಡ್-19 ಮೂರನೇ ಅಲೆಯಲ್ಲಿ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಳ್ಳುವ ಕುರಿತು ಆತಂಕ ವ್ಯಕ್ತಗೊಂಡಿದೆ.
English summary
Indian medical association advices kerala government to change its corona controlling strategy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X