ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ದರ್ಶನಕ್ಕೆ ವರ್ಚ್ಯುವಲ್ ಕ್ಯೂ: ಪೋರ್ಟಲ್‌ನಲ್ಲಿ ಬುಕ್ಕಿಂಗ್ ಮಾಡುವುದು ಹೇಗೆ?

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 23: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಡಿ. 26ರಂದು ಮಂಡಲ ಪೂಜೆ ನಡೆಯಲಿದೆ. ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಭಕ್ತರ ಸಂಖ್ಯೆಯನ್ನು ದಿನಕ್ಕೆ 5000ದಂತೆ ಸೀಮಿತಗೊಳಿಸಲಾಗಿದೆ. ಮಂಡಲಪೂಜೆಯಲ್ಲಿ ಪಾಲ್ಗೊಳ್ಳಲು ಬಯಸುವ ಭಕ್ತರಿಗೆ ಆನ್‌ಲೈನ್ ಸರದಿ ಬುಕಿಂಗ್ ವ್ಯವಸ್ಥೆಯನ್ನು ಬುಧವಾರ ಸಂಜೆ 6 ಗಂಟೆಯಿಂದ ಆರಂಭಿಸಲಾಗುತ್ತಿದೆ.

ಶಬರಿಮಲೆ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚದಂತೆ ತಡೆಯಲು ಅನೇಕ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಹೀಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದವರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತಿದೆ. ಅದೂ ಅವರು 48 ಗಂಟೆಗಳ ಒಳಗೆ ಆರ್‌ಟಿ-ಪಿಸಿಆರ್ ಮಾದರಿಯಲ್ಲಿ ಪರೀಕ್ಷೆ ನಡೆಸಿ ಕೋವಿಡ್ ನೆಗೆಟಿವ್ ವರದಿಯನ್ನು ತಂದಿದ್ದರೆ ಮಾತ್ರ.

ಶಬರಿಮಲೆ: ಪವಿತ್ರ ಚಿನ್ನದ ದಿರಿಸಿನ ಮೆರವಣಿಗೆ ಆರಂಭಶಬರಿಮಲೆ: ಪವಿತ್ರ ಚಿನ್ನದ ದಿರಿಸಿನ ಮೆರವಣಿಗೆ ಆರಂಭ

ಮೊದಲು ಕಾಯ್ದಿರಿಸಿದವರಿಗೆ ಮೊದಲು ಅವಕಾಶ ಎಂಬ ನೀತಿಯಡಿ ಭಕ್ತರಿಗೆ ಶಬರಿಮಲೆ ದರ್ಶನಕ್ಕೆ ಪ್ರವೇಶ ನೀಡಲಾಗುತ್ತಿದೆ. ಭಕ್ತರು ನೋಂದಣಿ ವೇಳೆ ತಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸಗಳನ್ನು ಆನ್‌ಲೈನ್ ಸೇವೆಯಲ್ಲಿ ನೀಡುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರ್ಚ್ಯುವಲ್ ಕ್ಯೂ (ದರ್ಶನ) ಮತ್ತು ಪ್ರಸಾದಂಗೆ ಸಂಬಂಧಿಸಿದ ಸೇವೆಗಳು ಲಭ್ಯವಾಗುತ್ತವೆ. ಮುಂದೆ ಓದಿ.

ವೈಯಕ್ತಿಕ ವಿವರಗಳ ಮೂಲಕ ನೋಂದಣಿ

ವೈಯಕ್ತಿಕ ವಿವರಗಳ ಮೂಲಕ ನೋಂದಣಿ

ಶಬರಿಮಲೆ ಆಲ್‌ನೈನ್ ಡಾಟ್ ಒಆರ್‌ಜಿ ವೆಬ್‌ಸೈಟ್‌ ತೆರೆದು ಅಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಫೋಟೊ, ಹೆಸರು, ಜನ್ಮದಿನಾಂಕ, ವಿಳಾಸ, ಗುರುತಿನ ಚೀಟಿ, ಫೋನ್ ನಂಬರ್‌ಗಳನ್ನು ನಮೂದಿಸಬೇಕು. ಇತ್ತೀಚಿನ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಮಾತ್ರವೇ ನೋಂದಣಿಗೆ ಬಳಸಲು ಅವಕಾಶವಿದೆ.

ಪಾಸ್‌ವರ್ಡ್ ಸೃಷ್ಟಿಸಬೇಕು

ಪಾಸ್‌ವರ್ಡ್ ಸೃಷ್ಟಿಸಬೇಕು

ನೋಂದಣಿ ಬಳಿಕ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಬಳಿಕ ಇ-ಮೇಲ್ ಮತ್ತು ಪಾಸ್‌ವರ್ಡ್ ದಾಖಲಿಸಿ, ಹೊಸ ಪಾಸ್‌ವರ್ಡ್ ಸೃಷ್ಟಿಸಬೇಕು. ಇದರ ಬಳಿಕ ಟ್ರ್ಯಾವಂಕೋರ್ ದೇವಸ್ವಂ ಮಂಡಳಿಯ ಅಧಿಕೃತ ಪೋರ್ಟಲ್‌ನಲ್ಲಿ ನೋಂದಣಿಯಾದಂತೆ ಆಗುತ್ತದೆ.

ಶಬರಿಮಲೆ ದೇವಸ್ಥಾನಕ್ಕೆ ಕೇರಳ ಸರ್ಕಾರದಿಂದ 20 ಕೋಟಿ ರೂ ಅನುದಾನಶಬರಿಮಲೆ ದೇವಸ್ಥಾನಕ್ಕೆ ಕೇರಳ ಸರ್ಕಾರದಿಂದ 20 ಕೋಟಿ ರೂ ಅನುದಾನ

ಬಳಿಕ ಸೃಷ್ಟಿಯಾದ ಐಡಿ ಬಳಸಿ ಲಾಗಿನ್ ಆಗಬೇಕು. ಪೋರ್ಟಲ್‌ನಲ್ಲಿರುವ ಕ್ಯೂ ಬುಕಿಂಗ್ ಅಥವಾ ದರ್ಶನ ಐಕಾನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಲಭ್ಯವಿರುವ ದಿನಾಂಕಗಳನ್ನು ಹುಡುಕಬೇಕು.

ಭಕ್ತರ ವಿವರ ದಾಖಲು

ಭಕ್ತರ ವಿವರ ದಾಖಲು

ಬಳಿಕ ಅದರಲ್ಲಿನ ಗ್ರೂಪ್ ಐಕಾನ್ ಮೇಲೆ ಕ್ಲಿಕ್ ಮಾಡಿ ಎಷ್ಟು ಮಂದಿ ಭಕ್ತರು ದರ್ಶನಕ್ಕೆ ಬರಲಿದ್ದಾರೆ ಎಂದು ನಮೂದಿಸಬೇಕು. ಆಡ್ ಪಿಲಿಗ್ರಿಮ್ ಐಕಾನ್ ಮೇಲೆ ಕ್ಲಿಕ್ ಮಾಡಿ ಉಳಿದ ಭಕ್ತರ ವಿವರಗಳನ್ನು ನಮೂದಿಸಬೇಕು.

ಬಳಿಕ ಕ್ಯಾಲೆಂಡರ್ ಐಕಾನ್‌ನಲ್ಲಿ ದಿನಾಂಕ ಮತ್ತು ಸಮಯವನ್ನು ಆಯ್ದುಕೊಳ್ಳಬೇಕು. ಆ ದಿನಾಂಕ ಮತ್ತು ಸಮಯ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಕ್ಯಾಲೆಂಡರ್ ತೋರಿಸುತ್ತದೆ.

ಹೆಚ್ಚುವರಿ ಸೇವೆಗಳು

ಹೆಚ್ಚುವರಿ ಸೇವೆಗಳು

ಬುಕಿಂಗ್ ಸಮಯದಲ್ಲಿ 'ವಿಶ್‌ಲಿಸ್ಟ್' ಐಕಾನ್ ಇರುತ್ತದೆ. ಅಂದರೆ ಅಪ್ಪಂ, ಅರವಣ, ಅಭಿಷೇಕ ತುಪ್ಪ,ವಿಭೂತಿ ಮುಂತಾದ ಹೆಚ್ಚುವರಿ ದೇವಸ್ವಂ ಸೇವೆಗಳಿಗೆ ಪಾವತಿ ಮಾಡಲು ಅವಕಾಶವಿದೆ. ನಂತರ ಬುಕ್ ನೌ ಕ್ಲಿಕ್ ಮಾಡಿದರೆ ಪ್ರತಿ ಭಕ್ತರ ಹೆಸರು ಮತ್ತು ವಿವರಗಳು ಅದರಲ್ಲಿ ದಾಖಲಾಗುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಖಾತರಿ ಸಂದೇಶ ಬರುತ್ತದೆ.

ಅಯ್ಯಪ್ಪ ಭಕ್ತರೇ ಗಮನಿಸಿ: ಶಬರಿಮಲೆ ಏರಲು ಈ ದಾಖಲೆ ಅತ್ಯಗತ್ಯಅಯ್ಯಪ್ಪ ಭಕ್ತರೇ ಗಮನಿಸಿ: ಶಬರಿಮಲೆ ಏರಲು ಈ ದಾಖಲೆ ಅತ್ಯಗತ್ಯ

ಸಹಾಯವಾಣಿ ಸಂಖ್ಯೆಗಳು

ಸಹಾಯವಾಣಿ ಸಂಖ್ಯೆಗಳು

ಮೈ ಪ್ರೊಫೈಲ್ ಮೆನುವಿನಿಂದ ಕೂಪನ್‌ಅನ್ನು ಪ್ರಿಂಟ್ ತೆಗೆಯಬಹುದು. ಅಲ್ಲಿ ವ್ಯವಹಾರದ ಇತಿಹಾಸ, ಭಕ್ತರ ಪಟ್ಟಿಯನ್ನು ವೀಕ್ಷಿಸಬಹುದು. ಯಾವುದೇ ಅನುಮಾನಗಳಿದ್ದರೆ ಸಹಾಯವಾಣಿ 702800100 ಸಂಖ್ಯೆಗೆ ಕರೆ ಮಾಡಬಹುದು. ಯಾತ್ರೆ ಸಮಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಅಡಚಣೆ ಉಂಟಾದರೆ ಕೇರಳ ಪೊಲೀಸರ 7025800100 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

English summary
Pilgrims can book slots in online for Sabarimala VirtualQ darshan. How To book in portal? Here is a guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X