ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ಭೇಟಿ; ಆನ್‌ಲೈನ್ ಬುಕ್ಕಿಂಗ್ ಮಾಡುವುದು ಹೇಗೆ?

|
Google Oneindia Kannada News

ತಿರುವನಂತಪುರಂ, ನವೆಂಬರ್ 17 : ಕೋವಿಡ್ ಭೀತಿಯ ನಡುವೆಯೇ ಕೇರಳದ ಶಬರಿಮಲೆ ದೇವಾಲಯ ಎರಡು ತಿಂಗಳ ವಿಶೇಷ ಪೂಜೆಗಾಗಿ ಬಾಗಿಲು ತೆರೆದಿದೆ. ಭಕ್ತರಿಗೆ ಸಹ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಭಾನುವಾರವೇ ಶಬರಿಮಲೆ ದೇವಾಲಯದ ಬಾಗಿಲನ್ನು ವಾರ್ಷಿಕ ವಿಶೇಷ ಪೂಜೆಗಾಗಿ ತೆರೆಯಲಾಗಿದೆ. ಸೋಮವಾರದಿಂದ ಭಕ್ತರು ಭೇಟಿ ನೀಡಲು ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿದೆ.

ಶಬರಿಮಲೆ ದರ್ಶನಕ್ಕೆ ಹೊರಟ ಭಕ್ತರ ಗಮನಕ್ಕೆ ಶಬರಿಮಲೆ ದರ್ಶನಕ್ಕೆ ಹೊರಟ ಭಕ್ತರ ಗಮನಕ್ಕೆ

ದೇವರ ದರ್ಶನ ಪಡೆಯುವ ಭಕ್ತರು ಮುಂಜಾನೆ 3 ಗಂಟೆಗೆ ಕಾಲ್ನಡಿಗೆ ಆರಂಭಿಸಬೇಕಿದೆ. ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಇದ್ದ ಭಕ್ತರು ಮಾತ್ರ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಪೊಲೀಸರು, ದೇವಾಲಯದ ಸಿಬ್ಬಂದಿ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ನಿಗಾ ವಹಿಸಲಿದ್ದಾರೆ.

ಶಬರಿಮಲೆ ಯಾತ್ರೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಮಹತ್ವವೇನು?ಶಬರಿಮಲೆ ಯಾತ್ರೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ ಮಹತ್ವವೇನು?

How To Book Darshana In Sabarimala Temple

62 ದಿನಗಳ ಕಾಲ ನಡೆಯುವ ವಿಶೇಷ ಪೂಜೆ ಸಮಯದಲ್ಲಿ ಲಕ್ಷಾಂತರ ಭಕ್ತರು ಪ್ರತಿ ವರ್ಷ ಶಬರಿಮಲೆಗೆ ಭೇಟಿ ನೀಡುತ್ತಿದ್ದರು. ಈ ಬಾರಿ 85 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.

ಶಬರಿಮಲೆ ಮಕರ ಜ್ಯೋತಿಯ ಸತ್ಯಾಸತ್ಯತೆ ಏನು? ಶಬರಿಮಲೆ ಮಕರ ಜ್ಯೋತಿಯ ಸತ್ಯಾಸತ್ಯತೆ ಏನು?

ವರ್ಚುವಲ್ ಕ್ಯೂ ಸಿಸ್ಟಂ ಮೂಲಕ ದೇವರ ದರ್ಶನ ಪಡೆಯಲು 1000 ಭಕ್ತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಪ್ರತಿದಿನ 1 ಸಾವಿರ ಭಕ್ತರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶವಿದೆ. ಶನಿವಾರ ಮತ್ತು ಭಾನುವಾರ 2 ಸಾವಿರ ಪ್ರಯಾಣಿಕರು ಭೇಟಿ ಕೊಡಬಹುದು.

ಶಬರಿಮಲೆ ದೇವಾಲಯದ ಬೇಸ್ ಕ್ಯಾಂಪ್ ತಲುಪುವ 24 ಗಂಟೆಗಳ ಮೊದಲು ಕೋವಿಡ್ ನೆಗೆಟಿವ್ ವರದಿಯನ್ನು ಭಕ್ತರು ಹೊಂದಿರಬೇಕು. ಅಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಲು ಬಯಸಿದರೆ ಅದಕ್ಕೆ ಸಹಾಯಕವಾಗಲು ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ದೇವಾಲಯದ ಮೆಟ್ಟಿಲನ್ನು ಹತ್ತುವಾಗ ಮಾತ್ರ ಮಾಸ್ಕ್ ತೆಗೆಯುವುದಕ್ಕೆ ವಿನಾಯಿತಿ ನೀಡಲಾಗಿದೆ. ಆನ್ ಲೈನ್ ಟಿಕೆಟ್ ಬುಕ್ ಮಾಡಲು ಭಕ್ತರು ಇಲ್ಲಿ ಕ್ಲಿಕ್ ಮಾಡಬಹುದು.

English summary
The annual two-month-long pilgrimage to the hill shrine of Lord Ayyappa in Kerala's Sabarimala began on Monday. In the time of COVID temple opens for Mandalakala-Makaravillakku festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X