ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಕೇರಳ ವಿಧಾನಸಭಾ ಚುನಾವಣೆಗೆ ಹೇಗಿದೆ ಭದ್ರತೆ?

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 05: ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ಏಪ್ರಿಲ್ 6ರಂದು ನಡೆಯಲಿದೆ. 2,74,46,039 ಮತದಾರನ್ನು ಹೊಂದಿರುವ ರಾಜ್ಯದಲ್ಲಿ ಚುನಾವಣೆ ನಡೆಸುವುದಕ್ಕೆ ಆಯೋಗ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಲ್‌ಡಿಎಫ್ ಎರಡನೇ ಬಾರಿ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ. ಕಾಂಗ್ರೆಸ್ ಮತ್ತು ಸಿಪಿಎಂ ನೇತೃತ್ವದ ಸರ್ಕಾರಗಳನ್ನು ಪರ್ಯಾಯವಾಗಿ ಆಯ್ಕೆ ಮಾಡುವ ಅವಕಾಶ ಮತದಾರ ಪ್ರಭುಗಳ ಎದುರಿಗಿದೆ.

ಕೇರಳದಲ್ಲಿ ಕಾಂಗ್ರೆಸ್ ಗೆದ್ದರೆ ಪ್ರತಿತಿಂಗಳು ಗೃಹಿಣಿಯರ ಖಾತೆಗೆ 6000 ರೂ.ಕೇರಳದಲ್ಲಿ ಕಾಂಗ್ರೆಸ್ ಗೆದ್ದರೆ ಪ್ರತಿತಿಂಗಳು ಗೃಹಿಣಿಯರ ಖಾತೆಗೆ 6000 ರೂ.

ಎಲ್‌ಡಿಎಫ್ ಸರ್ಕಾರದ ಆಡಳಿತ ವಿರೋಧಿ ಅಲೆ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಆರೋಪವನ್ನು ಸರ್ಕಾರದ ವಿರುದ್ಧ ಯುಡಿಎಫ್ ಅಸ್ತ್ರವಾಗಿ ಬಳಸಿಕೊಳ್ಳಲು ನೋಡುತ್ತಿದೆ. ರಾಜ್ಯದಲ್ಲಿ ಕೇವಲ ಒಂದು ಸ್ಥಾನವನ್ನು ಪಡೆದಿರುವ ಎನ್‌ಡಿಎ ಮೈತ್ರಿಕೂಟ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ತಂತ್ರ ಹೆಣೆಯುತ್ತಿದೆ.

ಚುನಾವಣಾ ಭದ್ರತೆಗಾಗಿ 59,000ಕ್ಕೂ ಹೆಚ್ಚು ಸಿಬ್ಬಂದಿ

ಚುನಾವಣಾ ಭದ್ರತೆಗಾಗಿ 59,000ಕ್ಕೂ ಹೆಚ್ಚು ಸಿಬ್ಬಂದಿ

ಕೇರಳದಲ್ಲಿ ವಿಧಾನಸಭಾ ಚುನಾವಣಾ ಭದ್ರತೆ ದೃಷ್ಟಿಯಿಂದ 59292 ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದರಲ್ಲಿ 24,788 ವಿಶೇಷ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಈ ಪ್ರದೇಶದ 481 ಪೊಲೀಸ್ ಠಾಣೆಗಳನ್ನು 142 ಚುನಾವಣಾ ಉಪ ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. 4405 ಸಬ್ ಇನ್ಸ್ ಪೆಕ್ಟರ್, 784 ಇನ್ಸ್ ಪೆಕ್ಟರ್, 258 ಡಿವೈಎಸ್ಪಿ ಹಾಗೂ 35504 ಪೊಲೀಸ್ ಪೇದೆ ಮತ್ತು ಮುಖ್ಯ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ.

ಭದ್ರತೆಗೆ 140 ಕಂಪನಿಗಳ ಸಿಬ್ಬಂದಿ ನಿಯೋಜನೆ

ಭದ್ರತೆಗೆ 140 ಕಂಪನಿಗಳ ಸಿಬ್ಬಂದಿ ನಿಯೋಜನೆ

ಸರ್ಕಾರಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಗೆ ಚುನಾವಣಾ ಭದ್ರತೆಗೆ 140 ಖಾಸಗಿ ಕಂಪನಿಗಳ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕೇಂದ್ರ ಪಡೆಗಳಿಗೆ ಸ್ವಯಂಚಾಲಿತ ಬಂದೂಕು ಹೊಂದಿದ್ದು, ಜನಸಮೂಹ ಹಿಂಸಾಚಾರವನ್ನು ಎದುರಿಸಲು ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಈ ಪೈಕಿ ಸಿಐಎಸ್ಎಫ್, ಸಿಆರ್‌ಪಿಎಫ್ ಮತ್ತು ಬಿಎಸ್ಎಫ್ ಸಿಬ್ಬಂದಿಯೂ ಸೇರಿದ್ದಾರೆ.

ಡ್ರೋನ್ ಬಳಸಿ ನಿಯಮ ಉಲ್ಲಂಘಿಸದಂತೆ ಕ್ರಮ

ಡ್ರೋನ್ ಬಳಸಿ ನಿಯಮ ಉಲ್ಲಂಘಿಸದಂತೆ ಕ್ರಮ

ವಿಧಾನಸಭಾ ಚುನಾವಣಾ ನೀತಿ ಸಂಹಿತೆಯ ನಿಯಮಗಳ ಪಾಲನೆ ಮತ್ತು ನಿಯಮ ಉಲ್ಲಂಘನೆಗಳ ಬಗ್ಗೆ ಲಕ್ಷ್ಯ ವಹಿಸಲು ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಡ್ರೋನ್‌ಗಳ ಮೂಲಕ ಸಂಗ್ರಹಿಸಿದ ದೃಶ್ಯಗಳನ್ನು ತಕ್ಷಣದ ಕ್ರಮಕ್ಕಾಗಿ ಗಸ್ತು ಪಕ್ಷಗಳಿಗೆ ಕಳುಹಿಸಲಾಗುತ್ತದೆ.

ಕೇರಳದಲ್ಲಿ ಮತದಾರರ ಸಂಖ್ಯೆ 2,74,46,039

ಕೇರಳದಲ್ಲಿ ಮತದಾರರ ಸಂಖ್ಯೆ 2,74,46,039

ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 2,74,46,039 ಮತದಾರನ್ನು ಹೊಂದಿರುವ ರಾಜ್ಯದಲ್ಲಿ 1.32 ಪುರುಷ, 1.41 ಮಹಿಳಾ ಮತ್ತು 290 ತೃತೀಯ ಲಿಂಗದ ಮತದಾರರಿದ್ದಾರೆ. ಮೇ 2ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಜೊತೆಗೆ ಕೇರಳ ವಿಧಾನಸಭಾ ಚುನಾವಣೆ ಭವಿಷ್ಯ ಹೊರ ಬೀಳಲಿದೆ.

English summary
How Election Commission Prepared For Kerala Assembly Election 2021; Here Read Main Points Of Election Security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X