ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉರಗ ರಕ್ಷಕ ವಾವಾ ಸುರೇಶ್‌ ಕೃತಜ್ಞತೆ ಸಂಕೇತ: ಗ್ರಾಹಕರಿಗೆ ಉಚಿತ ಊಟ ನೀಡುವ ಹೊಟೇಲ್‌

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 15: ನಾಗರಹಾವನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ, ಕೇರಳದ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್‌ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಡುವೆ ಮಲಪ್ಪುರಂನಲ್ಲಿರುವ ಒಂದು ಹೊಟೇಲ್‌ ವಾವಾ ಸುರೇಶ್‌ರಿಗೆ ಕೃತಜ್ಞತೆ ಸಂಕೇತವಾಗಿ ತನ್ನ ಗ್ರಾಹಕರಿಗೆ ಉಚಿತ ಊಟವನ್ನು ನೀಡಿದೆ.

ಯಾವುದೇ ಪ್ರತಿಫಲ ಬಯಸದೆ ಹಾವನ್ನು ರಕ್ಷಣೆ ಮಾಡುವ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್‌ರಿಗೆ ಕೃತಜ್ಞತೆ ಸಲ್ಲಿಸಲು ಉಚಿತ ಆಹಾರವನ್ನು ನೀಡಲಾಯಿತು ಎಂದು ಹೋಟೆಲ್‌ ಮಾಲೀಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉರಗ ರಕ್ಷಕ ವಾವಾ ಸುರೇಶ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಉರಗ ರಕ್ಷಕ ವಾವಾ ಸುರೇಶ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

ಜನವರಿ 31ರಂದು ನಾಗರಹಾವು ರಕ್ಷಣೆ ಮಾಡುವಾಗ ಅದು ಅವರ ಬಲಗಾಲಿಗೆ ಕಚ್ಚಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫೆಬ್ರವರಿ 7ರಂದು ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಯಿಂದ ವಾವಾ ಸುರೇಶ್ ಡಿಸ್ಚಾರ್ಜ್ ಆಗಿದ್ದಾರೆ.

Hotel Offers Free Meal to Customers as a Token of Gratitude to Snake Catcher Vava Suresh

ವಾವಾ ಸುರೇಶ್‌ ಕೃತಜ್ಞತೆ ಸಲ್ಲಿಸಿ ಉಚಿತ ಊಟ

ಕೇರಳದ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್‌ ಚೇತರಿಸಿಕೊಂಡಿದ್ದರಿಂದ ಮಲಪ್ಪುರಂನಲ್ಲಿರುವ ಕುಟುಂಬಶ್ರೀ ಹೋಟೆಲ್ ಗ್ರಾಹಕರಿಗೆ ಉಚಿತ ಆಹಾರವನ್ನು ನೀಡಿದೆ. ವಂಡೂರಿನ ಕೆಫೆ ಕುಟುಂಬಶ್ರೀ ಹೋಟೆಲ್‌ನಲ್ಲಿ ಉಚಿತ ಊಟ ನೀಡಲಾಗಿದೆ. ಗ್ರಾಹಕರು ಊಟವನ್ನು ಮಾಡಿ ಹಣವನ್ನು ಪಾವತಿ ಮಾಡಲು ಮುಂದಾದಾಗ ಉರಗ ರಕ್ಷಕ ವಾವಾ ಸುರೇಶ್‌ ಕೃತಜ್ಞತೆ ಸಂಕೇತವಾಗಿ ಉಚಿತ ಆಹಾರ ನೀಡುವ ವಿಚಾರ ತಿಳಿಸಿದ್ದಾರೆ.

ವಿಡಿಯೋ; ಕೇರಳದ ಉರಗ ರಕ್ಷಕ ವಾವಾ ಸುರೇಶ್‌ಗೆ ಹಾವು ಕಡಿತ; ಸ್ಥಿತಿ ಗಂಭೀರವಿಡಿಯೋ; ಕೇರಳದ ಉರಗ ರಕ್ಷಕ ವಾವಾ ಸುರೇಶ್‌ಗೆ ಹಾವು ಕಡಿತ; ಸ್ಥಿತಿ ಗಂಭೀರ

ಹೊಟೇಲ್‌ ಉಚಿತ ಊಟದಲ್ಲಿ ಏನೇನಿದೆ?

ಕೇರಳದ ಪ್ರಸಿದ್ಧ ಉರಗ ರಕ್ಷಕ ವಾವಾ ಸುರೇಶ್‌ ಕೃತಜ್ಞತೆ ಸಂಕೇತವಾಗಿ ಹೊಟೇಲ್‌ ತನ್ನ ಗ್ರಾಹಕರಿಗೆ ನೀಡಿದ ಉಚಿತ ಊಟದಲ್ಲಿ ಅನ್ನ, ಸಾಂಬಾರ್, ಮೀನಿನ ಸಾರು, ಉಪ್ಪಿನಕಾಯಿ, ಸಾರು, ಚಟ್ನಿ, ಮಸಾಲೆ ಸಾರು, ಹಪ್ಪಳ, ಉಪ್ಪಿನಕಾಯಿ ನೀಡಲಾಗಿದೆ. ಹಾಗೆಯೇ ಪಾಯಸವನ್ನು ಕೂಡಾ ನೀಡಲಾಗಿದೆ.

ಅಂದ ಹಾಗೆ ಈ ಐಡಿಯಾ ಹೊಟೇಲ್ ಮ್ಯಾನೇಜರ್ ಕೆ.ಸಿ.ನಿರ್ಮಲಾ ಅವರದ್ದು ಆಗಿದೆ. ವಾವಾ ಸುರೇಶ್ ಹಾವು ಕಚ್ಚಿ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದಾಗ ಹಲವಾರು ಮಂದಿ ವಾವಾ ಸುರೇಶ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಇನ್ನು ಕೆಲವರು ಹರಕೆಯನ್ನು ಕೂಡಾ ಹೊತ್ತುಕೊಂಡಿದ್ದಾರೆ.

ಈ ನಡುವೆ ಮಲಪ್ಪುರಂನ ವಂಡೂರಿನ ಕೆಫೆ ಕುಟುಂಬಶ್ರೀ ಹೋಟೆಲ್‌ನ ಮ್ಯಾನೇಜರ್ ಕೆ.ಸಿ.ನಿರ್ಮಲಾ ವಾವಾ ಸುರೇಶ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಉಚಿತವಾಗಿ ಊಟ ನೀಡುವುದಾಗಿ ನಿರ್ಧಾರ ಮಾಡಿದ್ದರು. ವಾವಾ ಸುರೇಶ್ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಈ ಬಗ್ಗೆ ಕುಟುಂಬಶ್ರೀ ಹೋಟೆಲ್ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಎಲ್ಲರ ಒಪ್ಪಿಗೆ ಪಡೆದು ಉಚಿತ ಊಟವನ್ನು ನೀಡಲು ಆರಂಭ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆಫೆ ಕುಟುಂಬಶ್ರೀ ಹೋಟೆಲ್‌ನ ಮ್ಯಾನೇಜರ್ ಕೆ.ಸಿ.ನಿರ್ಮಲಾ, "ವಾವಾ ಸುರೇಶ್‌ ಅವರಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ನಾನು ಕೈಗೊಂಡ ನಿರ್ಧಾರ ಇದಾಗಿದೆ. ವಾವಾ ಸುರೇಶ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಈ ಹೋಟೆಲ್‌ನ ಗ್ರಾಹಕರಿಗೆ ಉಚಿತವಾಗಿ ಊಟವನ್ನು ನೀಡುವ ನಿರ್ಧಾರವನ್ನು ಮಾಡಿದ್ದೇನೆ. ವಾವಾ ಸುರೇಶ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಈ ನಿರ್ಧಾರದ ಬಗ್ಗೆ ಕುಟುಂಬಶ್ರೀ ಸಿಬ್ಬಂದಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇತರರಿಗೆ ಸಹಾಯ ಮಾಡಲು ಬಂದಿರುವ ವಾವಾ ಸುರೇಶ್ ಅವರಿಗೆ ಕೃತಜ್ಞತೆ ಸಲ್ಲಿಸಲು ಉಚಿತ ಆಹಾರವನ್ನು ನೀಡಲಾಯಿತು," ಎಂದು ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

IPL 2022 ಆಡಲಿರುವ ಕನ್ನಡಿಗ ಆಟಗಾರರು ಇವರೇ | Oneindia Kannada

English summary
Kerala Hotel offers free meal to customers as a token of gratitude to Famous Snake Catcher Vava Suresh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X