ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಬಂಧನ ಬಿಟ್ಟು ಖಾನ್‌ಪುರಕ್ಕೆ ಓಡಿಹೋದ ಕೇರಳದ ಸಬ್‌ ಕಲೆಕ್ಟರ್

|
Google Oneindia Kannada News

ಕೊಲ್ಲಂ, ಮಾರ್ಚ್ 27: ಯುವ ಐಎಎಸ್ ಅಧಿಕಾರಿ ಕೇರಳದ ಕೊಲ್ಲಂನ ಸಬ್ ಕಲೆಕ್ಟರ್ ಗೃಹ ಬಂಧನ ಬಿಟ್ಟು ಖಾನ್‌ಪುರಕ್ಕೆ ಓಡಿಹೋಗಿರುವ ಘಟನೆ ನಡೆದಿದೆ.

ಮಾರ್ಚ್ 18 ರಂದು ಸಿಂಗಾಪುರಕ್ಕೆ ತೆರಳಿದ್ದ ಕಲೆಕ್ಟರ್ ಅನೂಪ್ ಮಿಶ್ರಾ ಅವರು, ಲಕ್ನೋ ಗೆ ಭೇಟಿ ನೀಡಿದ್ದರು. ಬಳಿಕ ಕೇರಳಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯನ್ನು 14 ದಿನಗಳ ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Live Updates: ಭಾರತದಲ್ಲಿ ಒಂದೇ ದಿನ ಕೊರೊನಾಗೆ 8 ಮಂದಿ ಸಾವುLive Updates: ಭಾರತದಲ್ಲಿ ಒಂದೇ ದಿನ ಕೊರೊನಾಗೆ 8 ಮಂದಿ ಸಾವು

ಹೋಂ ಕ್ವಾರಂಟೈನ್ ನಲ್ಲಿರುವ ಅಧಿಕಾರಿಯನ್ನು ಪ್ರತಿನಿತ್ಯ ಅಧಿಕಾರಿಗಳು ತಪಾಸಣೆಗೊಳಪಡಿಸುತ್ತಿದ್ದು, ಇದರಂತೆ ಗುರುವಾರ ಅಧಿಕಾರಿಗಳು ತಪಾಸಣೆಗೆಂದು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿ ಮನೆಯಲ್ಲಿಲ್ಲದಿರುವುದು ಕಂಡು ಬಂದಿದೆ.

Home Quarantined Kerala Sub-Collector Flees To Kanpur

ಅಧಿಕಾರಿ ಬೇವಾಬ್ದಾರಿತನದ ವರ್ತನೆ ವಿರುದ್ಧ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ಈ ಕುರಿತು ತನಿಖೆ ನಡೆಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ದೂರವಾಣಿ ಕರೆ ಮಾಡಿದಾಗ ಬೆಂಗಳೂರಿನಲ್ಲಿ ತನ್ನ ಸಹೋದರನೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಅಧಿಕಾರಿಯ ಸಹೋದರ ವೈದ್ಯರಾಗಿದ್ದು, ಗೃಹ ಬಂಧನದಲ್ಲಿರುವಂತೆ ಸೂಚಿಸಿದ ದಿನವೇ ರಾಜ್ಯ ತೊರೆದಿರುವುದಾಗಿ ತಿಳಿಸಿದ್ದಾರೆ.

ಆತನ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ನಂಬಿಲ್ಲ. ಪೊಲೀಸರು ಅವರ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡಿದ್ದು, ಈ ವೇಳೆ ಅವರ ಮೊಬೈಲ್ ಲೋಕೇಷನ್ ಲಕ್ನೋ ತೋರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಅಬ್ದಲ್ ತಿಳಿಸಿದ್ದಾರೆ. ಕೇರಳದಲ್ಲೂ ಈಗಾಗಲೇ 120ಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರಿರುವುದು ಪತ್ತೆಯಾಗಿದೆ.1.20 ಲಕ್ಷ ಮಂದಿಯನ್ನು ಐಸೋಲೇಷನ್‌ನಲ್ಲಿರಿಸಲಾಗಿದೆ.

English summary
A young Indian Administrative Service (IAS) officer in Kerala’s Kollam has been booked for jumping home quarantine and leaving for Uttar Pradesh amid rising cases of Covid-19 in the southern state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X