ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹಿಜಾಬ್ ನಿಷೇಧಕ್ಕೆ ಕೇರಳ ರಾಜ್ಯಪಾಲರ ಬೆಂಬಲ

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 11: ಕರ್ನಾಟಕದ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ವಿವಾದದ ಮಧ್ಯೆ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕರ್ನಾಟಕದಲ್ಲಿ ಹಿಜಾಬ್ ನಿಷೇಧಕ್ಕೆ ಬೆಂಬಲ ಸೂಚಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಜಾಬ್‌ ವಿವಾದದ ಮಧ್ಯೆ, "ಇಸ್ಲಾಂ ಧರ್ಮದ ಇತಿಹಾಸವನ್ನು ಗಮನಿಸಿದಾಗ ಮಹಿಳೆಯರು ಮುಸುಕು ಧರಿಸಲು ನಿರಾಕರಿಸಿದ ಹಲವಾರು ನಿದರ್ಶನಗಳಿವೆಮ" ಎಂದು ತಿಳಿಸಿದ್ದಾರೆ.

ನೆರೆಯ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಗದ್ದಲದ ಬಗ್ಗೆ ತಮ್ಮ ನಿಲುವಿಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇತಿಹಾಸವನ್ನು ಉಲ್ಲೇಖ ಮಾಡುವ ಮೂಲಕ ತನ್ನ ನಿಲುವನ್ನು ಹೇಳಿದರು. ಹಾಗೆಯೇ ಪವಿತ್ರ ಪ್ರವಾದಿಯವರ ಸಂಬಂಧಿ ಎಂದು ಹೇಳಲಾದ ಯುವತಿಯ ಕಥೆಯನ್ನು ಕೂಡಾ ವಿವರಿಸಿದ್ದಾರೆ.

 Breaking; ಕಾಲೇಜುಗಳಿಗೆ ನೀಡಿರುವ ರಜೆ ಫೆ.16ರ ತನಕ ವಿಸ್ತರಣೆ Breaking; ಕಾಲೇಜುಗಳಿಗೆ ನೀಡಿರುವ ರಜೆ ಫೆ.16ರ ತನಕ ವಿಸ್ತರಣೆ

"ನಾನು ನಿಮಗೆ ಕೇವಲ ಒಂದು ವಿಚಾರವನ್ನು ಹೇಳುತ್ತೇನೆ.. ಒಬ್ಬ ಚಿಕ್ಕ ಹುಡುಗಿ, ಸ್ವತಃ ಪ್ರವಾದಿಯ ಮನೆಯಲ್ಲಿ ಬೆಳೆದಳು. ಅವಳು ಪವಿತ್ರ ಪ್ರವಾದಿಯ ಹೆಂಡತಿಯ ಸೊಸೆ," ಎಂದು ಹೇಳುವ ಮೂಲಕ ಪವಿತ್ರ ಪ್ರವಾದಿಯವರ ಸಂಬಂಧಿ ಎಂದು ಹೇಳಲಾದ ಯುವತಿಯ ಕಥೆಯನ್ನು ಹೇಳಿದರು.

 ಹಿಜಾಬ್‌ ವಿವಾದ: ರಾಷ್ಟ್ರ ಮಟ್ಟಕ್ಕೆ ಹರಡಬೇಡಿ ಎಂದ ಸುಪ್ರೀಂ ಹಿಜಾಬ್‌ ವಿವಾದ: ರಾಷ್ಟ್ರ ಮಟ್ಟಕ್ಕೆ ಹರಡಬೇಡಿ ಎಂದ ಸುಪ್ರೀಂ

 ಆರಿಫ್ ಮೊಹಮ್ಮದ್ ಖಾನ್ ವಿವರಿಸಿದ ಕಥೆಯಲ್ಲಿ ಏನಾಗುತ್ತದೆ?

ಆರಿಫ್ ಮೊಹಮ್ಮದ್ ಖಾನ್ ವಿವರಿಸಿದ ಕಥೆಯಲ್ಲಿ ಏನಾಗುತ್ತದೆ?

"ನಿಮಗೆ ನಾನು ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಒಬ್ಬ ಚಿಕ್ಕ ಹುಡುಗಿ, ಸ್ವತಃ ಪ್ರವಾದಿಯ ಮನೆಯಲ್ಲಿ ಬೆಳೆದಳು. ಅವಳು ಪವಿತ್ರ ಪ್ರವಾದಿಯ ಹೆಂಡತಿಯ ಸೊಸೆ. ಅವಳು ಗಾದೆಯಂತೆ ಸುಂದರವಾಗಿದ್ದಳು. ಇದನ್ನು ಇತಿಹಾಸ ಹೇಳುತ್ತದೆ. ನೀವು ಕೂಡಾ ಓದಿ," ಎಂದು ಮಾಧ್ಯಮದವರಿಗೆ ಸಲಹೆ ನೀಡಿದ್ದಾರೆ. ಕಥೆಯನ್ನು ಉಲ್ಲೇಖಿಸುತ್ತಾ, ಮಧ್ಯಕಾಲೀನ ಕಾಲದಲ್ಲಿ ಮಹಿಳೆಯ ಪತಿ ಆಗಿನ ಕೂಫಾದ ಗವರ್ನರ್ ಆಗಿದ್ದಾಗ, ಹಿಜಾಬ್ ಧರಿಸದಿದ್ದಕ್ಕಾಗಿ ಮಹಿಳೆಗೆ ಬೈಯ್ದಿದ್ದರು ಎಂದು ತಿಳಿಸಿದ್ದಾರೆ. "ಆ ಸಂದರ್ಭದಲ್ಲಿ ಆಕೆ ದೇವರು ಅವಳನ್ನು ಸುಂದರವಾಗಿ ಮಾಡಿದ್ದಾನೆ ಮತ್ತು ಸರ್ವಶಕ್ತನು ತನ್ನ ಸೌಂದರ್ಯದ ಮುದ್ರೆಯನ್ನು ಅವಳ ಮೇಲೆ ಇರಿಸಿದ್ದಾನೆ ಎಂದು ಅವಳು ಹೇಳಿದ್ದಳು," ಎಂದು ರಾಜ್ಯಪಾಲರು ಹೇಳಿದರು. "ಜನರು ನನ್ನ ಸೌಂದರ್ಯವನ್ನು ನೋಡಬೇಕು ಮತ್ತು ನನ್ನ ಸೌಂದರ್ಯದಲ್ಲಿ ದೇವರ ಅನುಗ್ರಹವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ದೇವರಿಗೆ ಕೃತಜ್ಞರಾಗಿರಿ ಎಂದು ಆಕೆ ಹೇಳಿದ್ದಳು. ಮೊದಲ ತಲೆಮಾರಿನ (ಇಸ್ಲಾಂನ) ಮಹಿಳೆಯರು ಹೀಗೆ ವರ್ತಿತ್ತಿದ್ದರು. ನಾನು ಇಷ್ಟನ್ನು ಮಾತ್ರ ಹೇಳಲು ಬಯಸುತ್ತೇನೆ," ಎಂದರು.

 ನಿಗದಿತ ಶಿಸ್ತನ್ನು ಅನುಸರಿಸಬೇಕು

ನಿಗದಿತ ಶಿಸ್ತನ್ನು ಅನುಸರಿಸಬೇಕು

"ಯಾವುದೇ ಸಂಸ್ಥೆಯಲ್ಲಿ ಡ್ರೆಸ್ ಕೋಡ್‌ಗಳು ಇರುತ್ತದೆ. ನಾವು ಅದರಲ್ಲಿರುವವರು ನಿಗದಿತ ಶಿಸ್ತನ್ನು ಅನುಸರಿಸಬೇಕು ಅಥವಾ ಅಥವಾ ಬೇರೆ ಎಲ್ಲಾದರೂ ಸೇರಬೇಕು," ಎಂದು ಹೇಳುವ ಮೂಲಕ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಿಜಾಬ್‌ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಹಿಂದೆ, ಆಕ್ರಮಣಕಾರರಿಂದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಮುಸುಕು ಆರಂಭ ಮಾಡಲಾಯಿತು. ಆದರೆ ಈಗ ಉತ್ತರ ಭಾರತದ ಮಹಿಳೆಯರು ಅತ್ಯಂತ ಉದ್ದವಾದ ಮುಸುಕುಗಳನ್ನು ಹಾಕಿಕೊಳ್ಳುವುದಿಲ್ಲ ಮತ್ತು ಹಾಗೆ ಮಾಡಲು ಕಡ್ಡಾಯವಾಗಿಲ್ಲ. ಕಾಲ ಬದಲಾದಂತೆ ಪದ್ಧತಿಗಳೂ ಬದಲಾಗುತ್ತವೆ," ಎಂದು ತಿಳಿಸಿದರು.

"ಮುಸುಕು, ತ್ರಿವಳಿ ತಲಾಖ್‌ನಿಂದ ಮಹಿಳೆಯರನ್ನು ಹತ್ತಿಕ್ಕಲಾಗುತ್ತಿದೆ"

"ಹಿಂದಿನ ಸರ್ಕಾರಗಳು ನಿಯಮಗಳು ಮತ್ತು/ಅಥವಾ ಶಿಸ್ತನ್ನು ಉಲ್ಲಂಘಿಸುವ ಜನರ ಮುಂದೆ ತಲೆಬಾಗುತ್ತಿದ್ದವು, ಆದರೆ ಪ್ರಸ್ತುತ ಸರ್ಕಾರವು ತಲೆಬಾಗುತ್ತಿಲ್ಲ," ಎಂದು ಹೇಳಿದ ಅವರು ಈ ಸಂದರ್ಭದಲ್ಲೇ, "ಬದಲಾವಣೆಗೆ ಅರಗಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ," ಎಂದರು. "ಹಿಂದೆ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಭೂಮಿಯ ಕೆಳಗೆ ಸಮಾಧಿ ಮಾಡಲಾಗುತ್ತಿತ್ತು ಮತ್ತು ಈಗ ಮುಸುಕು ಮತ್ತು ತ್ರಿವಳಿ ತಲಾಖ್‌ನಂತಹ ನಿಯಮಗಳ ಅಡಿಯಲ್ಲಿ ಅವರನ್ನು ಹತ್ತಿಕ್ಕಲಾಗಿದೆ ಮತ್ತು ಮರೆಮಾಡಲಾಗಿದೆ," ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Recommended Video

ಲಾಯರ್ ಜಗದೀಶ್ ಮಗನ‌;ಮೇಲೆ ಹಲ್ಲೆ ಮಾಡಿದ್ದು ಯಾರು? ಕೋರ್ಟ್ ಮುಂದೆ ಹೈಡ್ರಾಮಾ | Oneindia Kannada
 ಇದು ಕೆಲವು ರಾಜಕೀಯ ವಿಚಾರ

ಇದು ಕೆಲವು ರಾಜಕೀಯ ವಿಚಾರ

"ಈ ವಸ್ತ್ರ ಸಂಹಿತೆ ಬಗ್ಗೆ ಅರಿವಿರುವಾಗಲೇ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆದಿದ್ದು, ಈಗ ದಿಢೀರ್ ಬಂಡಾಯವೆದ್ದಿದ್ದಾರೆ," ಎಂದು ಹೇಳಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, "ಈ ಹೆಣ್ಣು ಮಕ್ಕಳನ್ನು ರಾಜಕೀಯಕ್ಕಾಗಿ ಬಳಸಲಾಗು‌ತ್ತಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. "ಇದು ಇಸ್ಲಾಮಿನ ಪ್ರಶ್ನೆಯಲ್ಲ; ಇದು ಜನರನ್ನು ವಿಭಜಿಸಲು ಅವಕಾಶಗಳನ್ನು ಬಳಸಲು ಬಯಸುವ ಕೆಲವರ ವಿಚಾರವಾಗಿದೆ. ನಿಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಯಾರು ನಿರಾಕರಿಸುತ್ತಿದ್ದಾರೆ? ಆದರೆ ನೀವು ಸಂಸ್ಥೆಗೆ ಸೇರಿದಾಗ, ಆ ಸಂಸ್ಥೆಗಳ ವಸ್ತ್ರ ಸಂಹಿತೆ ಪಾಲಿಸಲು ಒಪ್ಪಿಕೊಂಡಿದ್ದೀರಿ ಅಲ್ಲವೇ?," ಎಂದು ಪ್ರಶ್ನಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Karnataka Hijab Row: Kerala Governor Arif Mohammad Khan backs ban on hijab in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X