ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಯುವಕನೊಂದಿಗೆ ಕ್ರಿಶ್ಚಿಯನ್ ಯುವತಿ ಮದುವೆಗೆ ಹೈಕೋರ್ಟ್ ಅನುಮತಿ

|
Google Oneindia Kannada News

ಕೊಚ್ಚಿ, ಏಪ್ರಿಲ್‌ 19: ಯುವತಿಯೊಬ್ಬಳು ತಾನು ಇಷ್ಟಪಡುತ್ತಿದ್ದ ಅನ್ಯ ಧರ್ಮದ ಹುಡುಗನ ಜೊತೆ ಮದುವೆಗೆ ಒಪ್ಪದ ಯುವತಿಯ ತಂದೆ ವಿರುದ್ಧವಾಗಿ ಹೈಕೋರ್ಟ್‌ ಮೆಟ್ಟಿಲು ಏರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯು ತಾನು ತೆಗೆದುಕೊಂಡ ಸ್ವಂತ ನಿರ್ಧಾರವು ಸರಿ ಇದೆ. "ಅವಳು ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದು" ಎಂದು ಕೇರಳ ಹೈಕೋರ್ಟ್‌ ಮಂಗಳವಾರ ಮುಸ್ಲಿಂ ಯುವಕನ ಜೊತೆ ಕ್ರಿಶ್ಚಿಯನ್‌ ಯುವತಿಯ ವಿವಾಹಕ್ಕೆ ಅನುಮತಿ ನೀಡಿದೆ.

ಈ ಮೂಲಕ ಯುವತಿಯು ತಾನು ಇಷ್ಟಪಡುತ್ತಿದ್ದ ಹುಡಗನ್ನು ಕಾನೂನಿನ ಮೂಲಕ ಮದುವೆಯಾಗಿದ್ದಾಳೆ. ಜೊಯಿಸ್ನಾ ಮೇರಿ ಜೋಸೆಫ್ ಎಂಬ ಯುವತಿಯೇ ಅನ್ಯಧರ್ಮದ ಯುವಕನನ್ನು ಇಷ್ಟಪಟ್ಟು ಮದುವೆಯಾಗಿದ್ದಳು. ಇದನ್ನು ವಿರೋಧಿಸಿದ್ದ ಜೊಯಿಸ್ನಾ ಯುವತಿಯ ತಂದೆ ಜೋಸೆಫ್‌ ಅವರು ತನ್ನ ಮಗಳು ಮರಳಿ ಮನೆಗೆ ಮರಳಬೇಕೆಂದು ಬಯಸಿ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ಜೊಯಿಸ್ನಾ ಮುಸ್ಲಿಂ ಯುವಕನ್ನು ಇಷ್ಟಪಟ್ಟಿದ್ದು ಶೆಜಿನ್‌ ತಾನು ಕೇರಳದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (DYFI) ನಾಯಕನಾಗಿದ್ದಾನೆ.

ಏಪ್ರಿಲ್‌ 19 ರಂದು ಅರ್ಜಿಯನ್ನು ಆಲಿಸಿದ ಕೇರಳ ಹೈಕೋರ್ಟ್‌ ಮಂಗಳವಾರ ಇವರಿಬ್ಬರು ಒಟ್ಟಿಗೆ ಇರಲು ಅನುಮತಿ ನೀಡಿತು ಕಳೆದ ಶನಿವಾರ ನ್ಯಾಯಲಯದಿಂದ ಸಮನ್ಸ್‌ ಸ್ವೀಕರಿಸಿದ್ದ ಜೊಯಿಸ್ನಾ, ನ್ಯಾಯಮೂರ್ತಿಗಳಾದ ವಿಜಿ ಅರುಣ್‌ ಮತ್ತು ಸಿಎಸ್‌ ಸುಧಾ ಅವರ ವಿಭಾಗೀಯ ಪೀಠದ ಮುಂದೆ ಹಾಜರಾಗಿದ್ದರು. ನ್ಯಾಯ ಪೀಠವು ನೇರವಾಗಿ ಯುವತಿಯೊಂದಿಗೆ ಮಾತನಾಡಿ ಪ್ರಶ್ನೆ ಕೇಳಿದಾಗ ತನ್ನ ಮೇಲೆ ಯಾವುದೇ ಒತ್ತಡವಿಲ್ಲ ನಾನು ಇಷ್ಟಪಟ್ಟು ಶೇಜಿನ್‌ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಎಂದು ತಿಳಿಸಿದಳು.

High Court Permits Christian Woman to Marry Muslim Youth

ಜೊಯಿಸ್ನಾಳನ್ನು ಅಪಹರಿಸಲಾಗಿದೆ ಮತ್ತು ನನ್ನ ಮಗಳನ್ನು ಶೇಜಿನ್ ಎಲ್ಲಾದರೂ ಕರೆದುಕೊಂಡು ಹೋಗಬಹುದು ಇವರಿಬ್ಬರು ದೇಶವನ್ನು ತೊರೆಯುವ ಸಾಧ್ಯತೆ ಇದೆ ಎಂದು ಜೊಯಿಸ್ನಾ ತಂದೆ ನ್ಯಾಯಲಯದಲ್ಲಿ ಆರೋಪಿಸಿದರು.

ಇನ್ನು ತನ್ನ ಮಗಳು ವಿದೇಶಕ್ಕೆ ಹೊಗುವ ಕುರಿತು ಹೈಕೋರ್ಟ್‌ ಪ್ರತಿಕ್ರಿಯೆ ನೀಡಿತು, ಅದು ಅವಳಿಗೆ ಬಿಟ್ಟಿದ್ದು ಇವರಿಬ್ಬರು ಮದುವೆಯಾಗಿದ್ದಾರೆ ಎಂದರೆ ಅದು ಅವಳ ನಿರ್ಧಾರವೇ ಆಗಿದೆ. ಇವರಿಬ್ಬರು ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದಾಗ ನ್ಯಾಯಾಲಯವು ಮಿತಿಯನ್ನು ಹೊಂದಿದೆ ಜೊಯಿಸ್ನಾಳನ್ನು ಬಲವಂತವಾಗಿ ಅವಳ ನಿರ್ಧಾರವನ್ನು ನಾವು ತಿರಸ್ಕಾರ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.

High Court Permits Christian Woman to Marry Muslim Youth

26 ವರ್ಷದ ಜೊಯಿಸ್ನಾ ಮತ್ತು ಮುಸ್ಲಿಂ ಯುವಕ ಶೆಜಿನ್ ವಿಶೇಷ ಮ್ಯಾರೇಜ್‌ ಆಕ್ಟ್‌ರ ಅಡಿಯಲ್ಲಿ ಮದುವೆಯಾಗಿದ್ದಾರೆ. ಮದುವೆ ಪ್ರಮಾಣ ಪತ್ರಕ್ಕೂ ಅರ್ಜಿ ಸಲ್ಲಿಸಿದ್ದಾರೆ ಜೊಯಿಸ್ನಾ ಮತ್ತು ಶೆಜಿನ್‌ ಮದುವೆಯಾಗಲು ಬಯಸಿದ್ದಾರೆ ಇಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಹಾಗೂ ಜೊಯಿಸ್ನಾ ತನ್ನ ಪೋಷಕರರೊಂದಿಗೆ ಅಥವಾ ಬೇರೆ ರೀತಿಯ ಮಾತುಕತೆಗೂ ಇಷ್ಟಪಡುತ್ತಿಲ್ಲ ಎಂದು ನ್ಯಾಯಲಯವು ಅರ್ಜಿ ಸಲ್ಲಿಸಿದ್ದ ಜೊಯಿಸ್ನಾಳ ತಂದೆಗೆ ಉತ್ತರವನ್ನು ನೀಡಿತು.

ಶೆಜಿನ್ ಮತ್ತು ಜೊಯಿಸ್ನಾ ಏಪ್ರಿಲ್ 12 ರಂದು ಹೂಮಾಲೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮದುವೆಯಾಗಿದ್ದರು ಮತ್ತು ಮದುವೆ ನೋಂದಣಿಗಾಗಿ ಅಂದೇ ಅರ್ಜಿ ಸಲ್ಲಿಸಿದ್ದರು.

Recommended Video

Golden Duck Out ಆದ Virat Kohli ಹಿಂಗ್ಯಾಕೆ ಮಾಡಿದ್ರು? ನೆಟ್ಟಿಗರಿಂದ ಫುಲ್ ತರಾಟೆ | Oneindia Kannada

English summary
Kerala High Court has said that the young woman's own decision on the matter of the High Court's move against the father of a young woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X