ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಭಾರೀ ಮಳೆ : 4 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

|
Google Oneindia Kannada News

ತಿರುವನಂತಪುರಂ, ಜೂನ್ 2: ನೈರುತ್ಯ ಚಂಡಮಾರುತ ಪ್ರಾರಂಭವಾದ ಒಂದು ದಿನದ ನಂತರ ಮಂಗಳವಾರ ಕೇರಳದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ರಾಜ್ಯ ರಾಜಧಾನಿ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಅಲ್ಲಿನ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಕೇರಳದ ಮೂರು ಉತ್ತರ ಜಿಲ್ಲೆಗಳಾದ ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. 6.4 ಸೆಂ.ಮೀ ನಿಂದ 11.5 ಸೆಂ.ಮೀಟರ್ ವರೆಗೆ ಮಳೆಯಾಗಲಿದ್ದು, 11.5 ಸೆಂ.ಮೀ ನಿಂದ 20.4 ಸೆಂ.ಮೀ.ವರೆಗಿನ ಭಾರಿ ಮಳೆಯಾಗುವ ಎಚ್ಚರಿಕೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ

ಏಳು ಜಿಲ್ಲೆಗಳಿಗೆ ಮಂಗಳವಾರ ಹಳದಿ(ಎಲ್ಲೋ) ಎಚ್ಚರಿಕೆ (ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆ) ನೀಡಲಾಗಿದೆ. ದೇಶದಲ್ಲಿ ನಾಲ್ಕು ತಿಂಗಳ ಸುದೀರ್ಘ ಮಳೆಗಾಲದ ಆರಂಭವನ್ನು ಸೂಚಿಸುವ ನೈರುತ್ಯ ಚಂಡಮಾರುತವು ದಿನಾಂಕವಾದ ಜೂನ್ 1 ರಂದು ಕೇರಳ ಕರಾವಳಿಯನ್ನು ಅಪ್ಪಳಿಸಿದ್ದು, ರಾಜ್ಯದ ಹಲವಾರು ಭಾಗಗಳಲ್ಲಿ ಮಳೆ ಸುರಿದಿದೆ.

Heavy Rains In Several Parts Of Kerala:Orange Alert In 4 Districts

ಮಂಗಳವಾರ ಬೆಳಿಗ್ಗೆ 8.30 ಕ್ಕೆ ಕಳೆದ 24 ಗಂಟೆಗಳಲ್ಲಿ ಕೋಝಿಕೋಡ್ ಜಿಲ್ಲೆಯ ವಟಕರದಲ್ಲಿ 19 ಸೆಂ.ಮೀ ಮಳೆಯಾಗಿದೆ ಎಂದು ಐಎಂಡಿ ಬುಲೆಟಿನ್ ತಿಳಿಸಿದೆ. ಅದರ ನಂತರ ಕಣ್ಣೂರು 12.97 ಸೆಂ. ಮೀ, ತಿರುವನಂತಪುರಂ 11.3 ಸೆಂ.ಮೀ, ತಿರುವನಂತಪುರಂ ವಿಮಾನ ನಿಲ್ದಾಣ 13.1 ಸೆಂ. ಮೀ ಮತ್ತು ಆಲಪ್ಪುಳ 4.4 ಸೆಂ.ಮೀ. ರಾಜ್ಯ ರಾಜಧಾನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ಭಾರಿ ಮಳೆಯಾಗಿದೆ ಮತ್ತು ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪ ಮತ್ತು ಕೇರಳ ಕರಾವಳಿಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

English summary
Heavy rains lashed several parts of kerala on Tuesday, a day after the South West Monsoon set in, while an Orange alert has been sounded for four districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X