ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬ್ಯಾಡ್ ಸಿಎಂ' ಎಂದು ಗೂಗಲ್ ನಲ್ಲಿ ಟೈಪ್ ಮಾಡಿದ್ರೆ ಇವ್ರ ಹೆಸರಾ ಬರೋದು!

|
Google Oneindia Kannada News

ಸರ್ಚ್ ಇಂಜಿನ್ ದೈತ್ಯ ಗೂಗಲ್ ಹಲವು ಬಾರಿ ಮುಜುಗರಕ್ಕೀಡಾಗುವ ಸರ್ಚ್ ರಿಸಲ್ಟ್ ಅನ್ನು ನೀಡಿದ ಉದಾಹರಣೆಗಳಿವೆ. ಅದಕ್ಕೆ, ಇನ್ನೊಂದು ಈಗ ಸೇರ್ಪಡೆಯಾಗಿದೆ.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳಾ ಪ್ರವೇಶಾತಿ ವಿಚಾರದಲ್ಲಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಸುದ್ದಿಯಂತೂ ಸಂತೋಷ ತರುವ ವಿಚಾರವಲ್ಲ.

ಬಾಬಾ ಆಮ್ಟೆ ಸೇವೆಯನ್ನು ಸ್ಮರಿಸಿದ ಗೂಗಲ್ ಡೂಡ್ಲ್ಬಾಬಾ ಆಮ್ಟೆ ಸೇವೆಯನ್ನು ಸ್ಮರಿಸಿದ ಗೂಗಲ್ ಡೂಡ್ಲ್

'ಬ್ಯಾಡ್ ಸಿಎಂ' ಎಂದು ಟೈಪ್ ಮಾಡಿದರೆ, ಕೇರಳದ ಸಿಎಂ ಪಿಣರಾಯಿ ಹೆಸರನ್ನು ನಂಬರ್ ಒನ್ ನಲ್ಲಿ ಗೂಗಲ್ ತೋರಿಸುತ್ತಿದೆ. ಇದು, ವಿರೋಧಿಗಳಿಗೆ ಪಿಣರಾಯಿ ವಿರುದ್ದ ಅಣಕವಾಡಲು ಇನ್ನೊಂದು ಅಸ್ತ್ರ ಸಿಕ್ಕಂತಾಗಿದೆ.

Google search result says, Kerala CM Pinarayi Vijayan is the bad CM of India

ಬ್ಯಾಡ್ ಸಿಎಂ ಎಂದು ಟೈಪ್ ಮಾಡಿದಾಗ, ಗೂಗಲ್, ಪಿಣರಾಯಿ ಅವರ ವಿಕಿಪಿಡಿಯಾ ಪೇಜ್ ಅನ್ನು ತೋರಿಸುತ್ತಿದೆ. ಸೋಮವಾರ (ಜ 7) ಒಂದೇ ದಿನ ಇಪ್ಪತ್ತು ಸಾವಿರಕ್ಕೂ ಹೆಚ್ಚು ಬ್ಯಾಡ್ ಸಿಎಂ ಕೀವರ್ಡ್ ಗೂಗಲ್ ನಲ್ಲಿ ದಾಖಲಾಗಿತ್ತು.

ಆದರೆ, ಇದಕ್ಕೆಲ್ಲಾ ಬಲಪಂಥೀಯ ಸಂಘಟನೆಗಳು ಮತ್ತು ಬಿಜೆಪಿ ಕಾರಣ ಎಂದು ಆಡಳಿತಾರೂಢ ಪಕ್ಷದವರು ಮತ್ತು ಪಿಣರಾಯಿ ವಿಜಯನ್ ಬೆಂಬಲಿಗರು ದೂರುತ್ತಿದ್ದಾರೆ.

ಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿ

ಶಬರಿಮಲೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದ ಪಿಣರಾಯಿ ವಿಜಯನ್ ಸರಕಾರ, ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸಲು ಸೂಕ್ತ ಬಂದೋಬಸ್ತ್ ನೀಡುವಲ್ಲಿ ಯಶಸ್ವಿಯಾಗಿದ್ದರು.

English summary
Google searches have time and again embarrassed the most unsuspecting of people and now the search giant's algorithm has made Pinarayi Vijayan its latest victim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X