• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆ ದೇವಾಲಯದಲ್ಲಿ ಭಾರೀ ಅಪಚಾರ: ಕ್ಷಮೆಯಾಚಿಸಿದ ಪೊಲೀಸ್

|
   Sabarimala Verdict : ಶಬರಿಮಲೈ ದೇವಸ್ಥಾನದ ಇತಿಹಾಸದಲ್ಲೇ ನಡೆದ ಮೊದಲ ಘಟನೆ | Oneindia Kannada

   ತಿರುವನಂತಪುರಂ, ಡಿ 19: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಇದುವರೆಗಿನ ಇತಿಹಾಸದಲ್ಲಿ ಎಂದೂ ನಡೆಯದ ಅಪಚಾರ ನಡೆದಿದ್ದು, ಆದ ಘಟನೆಗೆ ಪೊಲೀಸ್ ಮುಖ್ಯಸ್ಥರು ಭಕ್ತರಲ್ಲಿ ಕ್ಷಮೆಯಾಚಿಸಿದ್ದಾರೆ.

   ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಸಂಬಂಧ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ, ಭಕ್ತರ ಭಾರೀ ಪ್ರತಿಭಟನೆ ಮತ್ತು ವಿರೋಧದ ನಡುವೆ, ಹಲವು ಮಹಿಳೆಯರು ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದ್ದರು.

   ಕೊಚ್ಚಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಬಂಧನ

   ಎರಡು ತಿಂಗಳ ಮಕರವಿಳಕ್ಕು ಋತುವಿನ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ನವೆಂಬರ್ ಹದಿನಾರರಂದು ತೆರೆದಿತ್ತು. ಈ ಹಿಂದೆ, ತೀವ್ರ ಹೋರಾಟದ ನಂತರ ಮುಂಬೈನ ಹಾಜೀ ಆಲಿದರ್ಗಾಗೆ ಪ್ರವೇಶಿಸಿದ್ದ ಭೂಮಾತಾ ಬ್ರಿಗೇಡಿನ ತೃಪ್ತಿ ದೇಸಾಯಿ, ಶಬರಿಮಲೆ ದೇವಾಲಯಕ್ಕೂ ಪ್ರವೇಶಿಸಲು ಆಗಮಿಸಿದ್ದರು.

   ಆದರೆ, ಅಯ್ಯಪ್ಪ ಭಕ್ತರ ಭಾರೀ ಪ್ರತಿಭಟನೆಯಿಂದ ತೃಪ್ತಿ ದೇವಾಲಯ ಪ್ರವೇಶಿಸಲು ಸಾಧ್ಯವಾಗದೇ ವಾಪಸ್ ತೆರಳಿದ್ದರು. ಇದಕ್ಕೂ ಮುನ್ನ ರೆಹನಾ ಫಾತಿಮಾ ಮತ್ತು ಮತ್ತಿಬ್ಬರು ದೇವಾಲಯ ಪ್ರವೇಶಿಸಲು ಸಾಧ್ಯವಾಗದೇ ಹಿಂದಿರುಗಿದ್ದರು.

   ಶಬರಿಮಲೆ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡು 'ಸ್ವಾಮಿಯೇ ಶರಣಂ' ಎಂದ ಭಕ್ತ

   ಈ ಎಲ್ಲಾ ಘಟನೆಗಳ ನಡುವೆ, ಮಂಗಳವಾರ (ಡಿ 18) ನಡೆದ ಎರಡು ವಿದ್ಯಮಾನಗಳು ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದು, ಭಕ್ತರ ಆಕ್ರೋಶದ ನಂತರ ಪೊಲೀಸರು ಕ್ಷಮೆಯಾಚಿಸಿದ ಘಟನೆ ನಡೆದಿದೆ.

   ನಾಲ್ವರು ತೃತೀಯ ಲಿಂಗಿಗಳು

   ನಾಲ್ವರು ತೃತೀಯ ಲಿಂಗಿಗಳು

   ನಾಲ್ವರು ತೃತೀಯ ಲಿಂಗಿಗಳು ಶಬರಿಮಲೆ ದೇವಾಲಯ ಪ್ರವೇಶಿಸಲು ಸೋಮವಾರವೇ ಪಂಪಾ ಬಳಿ ಆಗಮಿಸಿದ್ದರು. ಲಿಂಗದ ಗೊಂದಲದಿಂದ ದೇವಾಲಯ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು. ಕಪ್ಪುಸೀರೆ ಉಟ್ಟುಕೊಂಡು ಬಂದಿದ್ದ ಇವರನ್ನು ದೇವಾಲಯದ ಒಳಗೆ ಪ್ರವೇಶಿಸಲು ಬಿಡಬಾರದೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆಯೊಡ್ದಿದ್ದರು.

   ನಮ್ಮ ಜೀವನ ಸಾರ್ಥಕವಾಯಿತೆಂದು ಧನ್ಯವಾದ

   ನಮ್ಮ ಜೀವನ ಸಾರ್ಥಕವಾಯಿತೆಂದು ಧನ್ಯವಾದ

   ಕೊನೆಗೆ, ಅನನ್ಯ, ತೃಪ್ತಿ, ರೆಂಜುಮೋಳ್ ಹಾಗೂ ಅವಂತಿಕಾ ಎಂಬ ತೃತೀಯ ಲಿಂಗಿಗಳು ಶಬರಿಮಲೆಯ ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತು ಶಬರಿಮಲೆ ಬೆಟ್ಟ ಹತ್ತಿ, ಹದಿನೆಂಟು ಮೆಟ್ಟಲುಗಳ ಮೂಲಕ, ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಅಯ್ಯಪ್ಪನ ದರ್ಶನ ಮಾಡಿದ ಈ ನಾಲ್ವರು, ನಮ್ಮ ಜೀವನ ಸಾರ್ಥಕವಾಯಿತೆಂದು ಧನ್ಯವಾದ ಅರ್ಪಿಸಿದ್ದಾರೆ.

   ಶಬರಿಮಲೆ ಪ್ರವೇಶಿಸುವ ತೃಪ್ತಿ ದೇಸಾಯಿ ಪ್ರಯತ್ನ ವಿಫಲ

   ದೇಗುಲದ ಪ್ರಧಾನ ಅರ್ಚಕರ (ತಂತ್ರಿಗಳು)

   ದೇಗುಲದ ಪ್ರಧಾನ ಅರ್ಚಕರ (ತಂತ್ರಿಗಳು)

   ದೇಗುಲದ ಪ್ರಧಾನ ಅರ್ಚಕರ (ತಂತ್ರಿಗಳು) ಅನುಮತಿಯ ಮೇರೆಗೆ ತೃತೀಯ ಲಿಂಗಿಗಳು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇವರಿಗೆ, ಬಂದೋಬಸ್ತ್ ನೀಡುವ ವೇಳೆ, ಪೊಲೀಸರಿಂದ ಅಪಚಾರ ನಡೆದಿದೆ ಎಂದು ಆ ವೇಳೆ ಭಕ್ತರು ಭಾರೀ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಪೊಲೀಸರು ಬೂಟು, ಲಾಟಿ ಹಾಗೂ ಬೆಲ್ಟ್ ಧರಿಸಿ ಮೇಲು ಸೆತುವೆ ಬಳಿ ತೆರಳುವ ಮೂಲಕ ಆಚಾರ ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

   ಪೊಲೀಸರು ಬೂಟು ಧರಿಸಿರುವುದು ಭಕ್ತರ ಅಸಮಾಧಾನಕ್ಕೆ ಕಾರಣ

   ಪೊಲೀಸರು ಬೂಟು ಧರಿಸಿರುವುದು ಭಕ್ತರ ಅಸಮಾಧಾನಕ್ಕೆ ಕಾರಣ

   ಗರ್ಭಗುಡಿಯ ಅನತಿ ದೂರದವರೆಗೂ ಪೊಲೀಸರು ಬೂಟು ಧರಿಸಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ಭಾವನೆಗಳ ಜೊತೆ ಆಟವಾಡುತ್ತಿದ್ದೀರಾ ಎನ್ನುವ ಕೂಗು, ನಂತರ ಭಾರೀ ಪ್ರತಿಭಟನೆಗೆ ತಿರುಗುತ್ತಿದ್ದಂತೆಯೇ, ಕರ್ತವ್ಯದಲ್ಲಿದ್ದ ವಿಶೇಷ ಪೊಲೀಸ್ ಅಧಿಕಾರಿ ಜಯದೇವನ್, ‘ಪೊಲೀಸರಿಂದ ತಪ್ಪಾಗಿದೆ', ದಯವಿಟ್ಟು ಪ್ರತಿಭಟನೆ ಹಿಂದಕ್ಕೆ ಪಡೆಯಿರಿ ಎಂದು ಕ್ಷಮೆಯಾಚಿಸಿ, ದೇವಾಲಯದ ಆವರಣದಿಂದ ಪೊಲೀಸರನ್ನು ವಾಪಸ್ ಕಳುಹಿಸಿದ್ದಾರೆ.

   ಕೇರಳದಲ್ಲಿ ಕೇಂದ್ರ ಸಚಿವರಿಗೆ ಬೆವರಿಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ

   ಪುಣೆಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತೃಪ್ತಿ ದೇಸಾಯಿ

   ಪುಣೆಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತೃಪ್ತಿ ದೇಸಾಯಿ

   ಈ ಹಿಂದೆ, ಅಯ್ಯಪ್ಪನ ದರ್ಶನಕ್ಕೆ ಪುಣೆಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತೃಪ್ತಿ ದೇಸಾಯಿಗೆ ಅಯ್ಯಪ್ಪ ಭಕ್ತರು ದಿಗ್ಬಂಧನ ಹಾಕಿದ್ದರು. ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಜಮಾಯಿಸಿ, ಏರ್ಪೋರ್ಟ್ ನಲ್ಲೇ ಅಯ್ಯಪ್ಪನ ಭಜನೆಯನ್ನು ಮಾಡಿದ್ದರು. ಕೊನೆಗೆ, ಏರ್ಪೋರ್ಟಿನಿಂದ ಕದಲಲೂ ಆಗದೇ, ತೃಪ್ತಿ ಅವರನ್ನು ಪ್ರಯಾಸದಿಂದ ಪೊಲೀಸರು ವಾವಸ್ ಕಳುಹಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Four transgender devotees, who were earlier stopped from proceeding towards the Lord Ayyappa temple, Tuesday (Dec 18) offered prayers at the hill shrine under a heavy police security cover. During security cover, police staffs violated the temple rules, later police chief alologised.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more