ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಬಾಂಬ್ ಸಿಡಿಸಿದ ವಿರೋಧ ಪಕ್ಷದ ನಾಯಕ ರಮೇಶ್ !

|
Google Oneindia Kannada News

ಪಾಲಕ್ಕಾಡ್, ಮಾರ್ಚ್ 22: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಾಗ್ದಾಳಿ ಜೋರಾಗಿ ನಡೆದಿದೆ. ಈ ನಡುವೆ ವಿಪಕ್ಷ ನಾಯಕ ರಮೇಶ್ ಚೆನ್ನಿತಲ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಕೇರಳದಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ನಕಲಿ ಮತದಾರರಿದ್ದಾರೆ ಎಂದು ಗುರುತರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಾಕ್ಷಿ ಕೂಡಾ ಇದೆ. ಶೀಘ್ರದಲ್ಲೇ ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದಿದ್ದಾರೆ.

66 ಕ್ಷೇತ್ರಗಳಲ್ಲಿ ಕಂಡು ಬಂದ 2,16,510 ನಕಲಿ ಮತದಾರರ ಮಾಹಿತಿಯನ್ನು ಸಾಕ್ಷಿ ಸಮೇತ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಉಳಿದ ಕ್ಷೇತ್ರಗಳ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕೇರಳದಲ್ಲಿ 42 ಸ್ಥಾನ ಗೆದ್ದರೂ ಬಿಜೆಪಿ ಸರ್ಕಾರ ಸ್ಥಾಪನೆ ಸಾಧ್ಯ!ಕೇರಳದಲ್ಲಿ 42 ಸ್ಥಾನ ಗೆದ್ದರೂ ಬಿಜೆಪಿ ಸರ್ಕಾರ ಸ್ಥಾಪನೆ ಸಾಧ್ಯ!

ಇನ್ನು ಈ ನಕಲಿ ಮತದಾರರ ಹಿಂದೆ ಎಲ್‌ಡಿಎಫ್ ಸರ್ಕಾರದ ಕೈವಾಡವಿದೆ. ವಾಮಮಾರ್ಗ ಹಿಡಿದು ಅಧಿಕಾರ ಉಳಿಸಿಕೊಳ್ಳಲು ಪಿಣರಾಯಿ ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಗುಡುಗಿದ್ದಾರೆ.

Four lakh fake voters in voters list: Chennithala to lodge complaint with EC

ಕೇರಳ ಚುನಾವಣೆಯಲ್ಲಿ ಎಲ್‌ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಒಂದು ಸ್ಥಾನಗಳಿಸಿದರೆ ಹೆಚ್ಚು ಅಬ್ಬಬ್ಬಾ ಎಂದರೆ 2 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಗಳು ತಿಳಿಸಿವೆ. ಕೇರಳದ 140 ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ. ಯಾವುದೇ ಪಕ್ಷವು ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ. 2016ರಲ್ಲಿ ಎಲ್ ಡಿ ಎಫ್ 91, ಯುಡಿಎಫ್ 47, ಕಾಂಗ್ರೆಸ್ 1, ಇತರೆ 1 ಎಂದು ಫಲಿತಾಂಶ ಬಂದಿತ್ತು.

English summary
Opposition leader Ramesh Chennithala on Sunday said that he has solid proof regarding the inclusion of nearly 4 lakh fake voters in the state's voters list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X