ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಹೋರಾಟಕ್ಕೆ ಕೇರಳದಿಂದ ಸಕತ್ ಐಡಿಯಾ!

|
Google Oneindia Kannada News

ತಿರುವನಂತಪುರಂ, ಜುಲೈ 6: ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಕೊವಿಡ್ 19 ಬಿಟ್ಟು ಬಿಡದಂತೆ ಕಾಡುತ್ತಲೇ ಇದೆ. ವೈರಸ್ ಸೋಂಕು ತಡೆಗಟ್ಟಲು ಹಲವು ಮಾದರಿ ವಿಧಾನಗಳನ್ನು ಪ್ರಯೋಗಿಸಿದ್ದ ಪಿಣರಾಯಿ ವಿಜಯನ್ ಸರ್ಕಾರ, ಈಗ ಹೊಸ ನೀತಿ, ನಿಯಮ ರೂಪಿಸಿದೆ. ಈ ಹೊಸ ಮಾರ್ಗಸೂಚಿಗಳು ಮುಂದಿನ ಒಂದು ವರ್ಷಗಳ ಅವಧಿ ತನಕ ಜಾರಿಯಲ್ಲಿರಲಿದೆ.

ಬಹುಶಃ ಇಷ್ಟು ದೀರ್ಘ ಕಾಲದ ಯೋಜನೆ ಯಾವ ರಾಜ್ಯವೂ ರೂಪಿಸಿಲ್ಲ. ಕೊವಿಡ್ 19 ಸೋಂಕು ಹರಡದಂತೆ ಅನುಸರಿಸಬೇಕಾದ ಸಾಮಾನ್ಯ, ಅಗತ್ಯ ನಿಯಮಾವಳಿಗಳನ್ನು ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗೆ ಅನುಗುಣವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗುಂಪು ಸೇರಿ ಸಭೆ, ಸಮಾರಂಭ ನಡೆಸುವುದಕ್ಕೆ ನಿರ್ಬಂಧ.. ಇವೆ ಮುಂತಾದ ನಿಯಮಗಳನ್ನು ಮುಂದಿನ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.

ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು 6 ಅಡಿಗೆ ಹೆಚ್ಚಿಸಲಾಗಿದೆ. ಕೇರಳದ ಕೊವಿಡ್ 19 ನಿಯಂತ್ರಣ ಮಾರ್ಗಸೂಚಿ ಕುರಿತ FAQs ಇಲ್ಲಿದೆ:

For the next 1 year Kerala will follow these COVID-19 rules

ಕೇರಳದಲ್ಲಿ ಮಾಸ್ಕ್ ಧರಿಸುವ ನಿಯಮ ಇನ್ನೆಷ್ಟು ದಿನ ಇರಲಿದೆ?
-ಒಂದು ವರ್ಷದ ಅವಧಿ

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಲ್ಲಿ ಏನು ಬದಲಾವಣೆ?
-ಕನಿಷ್ಠ 6 ಅಡಿ ಅಂತರ ಇರಬೇಕು, ಇದು ಒಂದು ವರ್ಷ ತನಕ ಜಾರಿ

ಮದುವೆ, ಮುಂತಾದ ಸಮಾರಂಭದಲ್ಲಿ ಎಷ್ಟು ಮಂದಿಗೆ ಅನುಮತಿ?
-ಶುಭ ಸಮಾರಂಭಕ್ಕೆ ಅನುಮತಿ ನೀಡಲಾಗಿದ್ದು, 50 ಮಂದಿ ಮಾತ್ರ ಪಾಲ್ಗೊಳ್ಳಬಹುದು.

ಅಂತ್ಯ ಸಂಸ್ಕಾರದ ವೇಳೆ ಎಷ್ಟು ಮಂದಿ ಪಾಲ್ಗೊಳ್ಳಬಹುದು?
-ಗರಿಷ್ಠ 20 ಮಂದಿಗೆ ಮಾತ್ರ ಅವಕಾಶವಿರಲಿದೆ.

ರಾಜ್ಯಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇರಳರಾಜ್ಯಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇರಳ

ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಭೇಟಿಗೆ ಅವಕಾಶವಿದೆಯೆ?
-ಇದೆ, 10 ಮಂದಿ ಒಮ್ಮೆಗೆ ಭೇಟಿಯಾಗಬಹುದು, ಆದರೆ, ಪೂರ್ವಾನುಮತಿ ಅಗತ್ಯ.

ಅಂತಾರಾಜ್ಯ ಪ್ರಯಾಣಕ್ಕೆ ಪಾಸ್ ಅಗತ್ಯವಿದೆಯೆ?
-ಹೌದು, ಜಾಗ್ರತ ಇ ವೇದಿಕೆ ಆಪ್ ನಲ್ಲಿ ನೋಂದಣಿ ಮಾಡಿಸಿ ಪಡೆದುಕೊಳ್ಳಬಹುದು.

ಕೇರಳದಲ್ಲಿ ಕೊವಿಡ್ 19 ನಿಯಂತ್ರಣ ಮಾರ್ಗಸೂಚಿ ಎಷ್ಟು ಕಾಲ ಇರಲಿದೆ?
-ಒಂದು ವರ್ಷದ ಅವಧಿ.

English summary
In the wake of the ongoing pandemic, Kerala has set norms and restrictions which will be applicable for one full year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X