ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ; ಇದೇ ಮೊದಲ ಬಾರಿ ಆಡಳಿತದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಮಾವ-ಅಳಿಯ

|
Google Oneindia Kannada News

ತಿರುವನಂತಪುರಂ, ಮೇ 3: ಕುಟುಂಬ ರಾಜಕಾರಣ ಭಾರತದಲ್ಲಿ ಹೊಸತೇನಲ್ಲ. ಹಲವು ರಾಜಕಾರಣಿಗಳ ಮಕ್ಕಳು, ಮೊಮ್ಮಕ್ಕಳು ಒಂದೇ ಪಕ್ಷದಲ್ಲಿ ಮುಂದುವರೆದುಕೊಂಡು ಹೋಗುವ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಆದರೆ ಇದೇ ಮೊದಲ ಬಾರಿಗೆ ಮಾವ-ಅಳಿಯ ಒಟ್ಟಾಗಿ ಆಡಳಿತದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದೇ ಮೊದಲ ಬಾರಿ ಮಾವ ಹಾಗೂ ಅಳಿಯ ಕೇರಳ ವಿಧಾನಸಭೆಯಲ್ಲಿ ಶೀಘ್ರವೇ ಆಡಳಿತ ಆರಂಭಿಸಲು ಸಜ್ಜಾಗುತ್ತಿದ್ದು, ಹೊಸ ರಾಜಕೀಯ ಅಧ್ಯಾಯ ಬರೆಯಲು ತಯಾರಾಗುತ್ತಿದ್ದಾರೆ. 77 ವರ್ಷದ ಪಿಣರಾಯಿ ವಿಜಯನ್ ಹಾಗೂ ಡೆಮಾಕ್ರೆಟಿಕ್ ಯೂತ್ ಫೆಡರೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಮೊಹಮದ್ ರಿಯಾಸ್ ಅವರೇ ಸದನದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಮಾವ -ಅಳಿಯ.

40 ವರ್ಷಗಳ ಬಳಿಕ ಮತ್ತೆ ಇತಿಹಾಸ ನಿರ್ಮಿಸಿದ ಪಿಣರಾಯಿ ವಿಜಯನ್40 ವರ್ಷಗಳ ಬಳಿಕ ಮತ್ತೆ ಇತಿಹಾಸ ನಿರ್ಮಿಸಿದ ಪಿಣರಾಯಿ ವಿಜಯನ್

ಬೆಂಗಳೂರಿನಲ್ಲಿರುವ ಐಟಿ ಉದ್ಯಮಿ, ವಿಜಯನ್ ಅವರ ಪುತ್ರಿ ವೀಣಾ ಅವರ ಪತಿಯೇ ರಿಯಾಸ್. 2020ರ ಜೂನ್‌ನಲ್ಲ ವೀಣಾ ಹಾಗೂ ರಿಯಾಸ್ ಮದುವೆಯಾಗಿದ್ದರು.

For The First Time Father In Law And Son In Law Presence In Kerala Assembly

ಪಿಣರಾಯಿ ವಿಜಯನ್ ಅವರು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಕಣ್ಣೂರು ಜಿಲ್ಲೆಯ ಧರ್ಮದಂನಲ್ಲಿ ಗೆಲುವು ಸಾಧಿಸಿದ್ದು, 44 ವರ್ಷದ ರಿಯಾಸ್, ಕೋಯಿಕ್ಕೋಡ್‌ನಲ್ಲಿನ ಬೇಪೋರ್‌ನಿಂದ ಆಯ್ಕೆಯಾಗಿದ್ದಾರೆ. ಯುವ ಮುಖಂಡ ರಿಯಾಸ್ ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿಯೂ ಕೋಯಿಕ್ಕೋಡ್‌ನಿಂದ ಸ್ಪರ್ಧಿಸಿದ್ದರು.

Recommended Video

ದೇವರನಾಡಲ್ಲಿ ಪಿಣರಾಯಿ ವಿಜಯನ್ ಗೆ ಒಲಿದ ವಿಜಯಲಕ್ಷ್ಮಿ

ಸಿಎಂ ಪಿಣರಾಯಿ ವಿಜಯನ್ ಅವರು 40 ವರ್ಷದಲ್ಲಿ, ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

English summary
In a first, a father-in-law and son-in-law duo will make their presence felt together in the Kerala Assembly soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X