ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಆರಂಭವಾಗುತ್ತಿದೆ ಎದೆ ಹಾಲಿನ ಬ್ಯಾಂಕ್

|
Google Oneindia Kannada News

ತಿರುವನಂತಪುರಂ, ಫೆಬ್ರುವರಿ 02: ಕೇರಳದಲ್ಲಿ ಮೊಟ್ಟ ಮೊದಲ ಎದೆ ಹಾಲಿನ ಬ್ಯಾಂಕ್ ಆರಂಭವಾಗುತ್ತಿದ್ದು, ಇದೇ ಶುಕ್ರವಾರ ಉದ್ಘಾಟನೆಗೆ ಸಿದ್ಧವಾಗಿದೆ. ರಾಜ್ಯದ ಎರ್ನಾಕುಲಂನ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಹಾಲಿನ ಬ್ಯಾಂಕ್ ಉದ್ಘಾಟನೆ ಮಾಡಲಿದ್ದಾರೆ.

ಕೋಚಿನ್ ಗ್ಲೋಬಲ್ ರೋಟರಿ ಕ್ಲಬ್ ಸಹಯೋಗದಲ್ಲಿ ನವಜಾತ ಶಿಶುಗಳಿಗೆ ಹಾಲಿನ ಕೊರತೆ ಉಂಟಾಗದಂತೆ ತಡೆಯಲು ಈ ಬ್ಯಾಂಕ್ ಸ್ಥಾಪಿಸಲಾಗಿದೆ.

ಪುಣೆ ಆಸ್ಪತ್ರೆಯಲ್ಲಿ ಹೈಟೆಕ್ ಮೊಲೆ ಹಾಲು ಬ್ಯಾಂಕ್‌ ಆರಂಭಪುಣೆ ಆಸ್ಪತ್ರೆಯಲ್ಲಿ ಹೈಟೆಕ್ ಮೊಲೆ ಹಾಲು ಬ್ಯಾಂಕ್‌ ಆರಂಭ

ವರ್ಷದಲ್ಲಿ ಆಸ್ಪತ್ರೆಯಲ್ಲಿ ಸುಮಾರು 3600 ಶಿಶುಗಳು ಜನಿಸುತ್ತವೆ. ಅದರಲ್ಲಿ 600ರಿಂದ 1000 ಮಕ್ಕಳು ಹಲವು ಕಾರಣಗಳಿಗೆ ತುರ್ತು ನಿಗಾ ಘಟಕಕ್ಕೆ ದಾಖಲಾಗುತ್ತವೆ. "ಅತಿ ಕಡಿಮೆ ತೂಕವಿರುವ, ಅವಧಿಗೂ ಮುನ್ನ ಜನಿಸಿದ, ಹಲವು ಕಾರಣಗಳಿಂದ ತಾಯಿ ಎದೆಹಾಲಿನಿಂದ ವಂಚಿತವಾದ, ತಾಯಿಯಿಂದ ಬೇರ್ಪಟ್ಟ ಮಕ್ಕಳಿಗೆ ಈ ಬ್ಯಾಂಕ್ ಮೂಲಕ ಎದೆಹಾಲು ಒದಗಿಸಿ ಮಕ್ಕಳಲ್ಲಿ ಸೋಂಕನ್ನು ತಡೆಯುವ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವನ್ನು ಮಾಡಲಾಗುವುದು" ಎಂದು ರೋಟರಿ ಕೋಚಿನ್ ಗ್ಲೋಬಲ್ ಡಾ. ಪೌಲ್ ಪಿ.ಜಿ.ತಿಳಿಸಿದ್ದಾರೆ.

 First Human Milk Bank In Kerala To Open On February 5

ಎದೆಹಾಲಿನ ಬ್ಯಾಂಕ್ ಪರಿಕಲ್ಪನೆಯು 32 ವರ್ಷಗಳ ಹಿಂದೆಯೇ ಭಾರತದಲ್ಲಿ ಪರಿಚಿತವಾಗಿದ್ದರೂ ಇದುವರೆಗೂ ಕೇರಳದಲ್ಲಿ ಸ್ಥಾಪನೆಯಾಗಿರಲಿಲ್ಲ. ಈ ಕುರಿತು ಚಿಂತನೆ ನಡೆಸಿದ ರೋಟರಿ, ರಾಜ್ಯದಲ್ಲಿ ಎರಡು ಹಾಲಿನ ಬ್ಯಾಂಕ್ ರೂಪಿಸುವ ಗುರಿ ಹೊಂದಿತು. ಎರ್ನಾಕುಲಂ ಹಾಗೂ ತ್ರಿಶೂರ್ ನ ಜುಬ್ಲಿ ಮೆಡಿಕಲ್ ಮಿಷನ್ ಆಸ್ಪತ್ರೆಯಲ್ಲಿ ಎದೆಹಾಲಿನ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ.

ಹಾಲಿನ ಸಂಗ್ರಹದ ಕುರಿತು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗಿದೆ. ಹಾಲಿನ ಸಂಗ್ರಹ, ಶೇಖರಣೆ ಹಾಗೂ ಅಗತ್ಯವಿದ್ದ ಮಕ್ಕಳಿಗೆ ನೀಡುವ ಕಾರ್ಯವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗೊಳ್ಳಲಾಗುವುದು. ಸಂಗ್ರಹಿಸಿದ ಹಾಲನ್ನು ಆರು ತಿಂಗಳವರೆಗೂ ಬ್ಯಾಂಕ್ ನಲ್ಲಿ ಇಟ್ಟುಕೊಳ್ಳಬಹುದು ಎಂದು ಪೌಲ್ ಮಾಹಿತಿ ನೀಡಿದ್ದಾರೆ.

ಮೊದಲು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಾದ ಮಕ್ಕಳಿಗೆ ಉಚಿತವಾಗಿ ಹಾಲನ್ನು ನೀಡಲಾಗುವುದು. ಆನಂತರ ಇನ್ನಿತರ ಆಸ್ಪತ್ರೆಗಳಿಗೂ ನೀಡುವ ಕುರಿತು ಯೋಜನೆ ರೂಪಿಸಲಾಗುವುದು. ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರು ಎದೆ ಹಾಲು ನೀಡಬಹುದಾಗಿದ್ದು, ಈ ಕುರಿತು ಎಲ್ಲಾ ಮಾಹಿತಿಯು ಪಾರದರ್ಶಕವಾಗಿ ಲಭ್ಯವಿರಲಿದೆ ಎಂದು ತಿಳಿಸಿದರು.

ಹಾಲಿನ ಬ್ಯಾಂಕ್ ನಲ್ಲಿ ಪಾಶ್ಚರೀಕರಣ ಕೇಂದ್ರ, ರೆಫ್ರಿಜರೇಟರ್, ಡೀಪ್ ಫ್ರೀಜರ್, ಆರ್ ಒ ಪ್ಲಾಂಟ್, ಸ್ಟೆರಿಲೈಜಿಂಗ್ ಹಾಗೂ ಕಂಪ್ಯೂಟರ್ ಒಳಗೊಂಡಿದ್ದು, 35 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ.

English summary
Kerala's first Human Milk Bank (HMB), a state-of-art facility will be opened at the Ernakulam general hospital on Friday by Health Minister KK Shailaja
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X