ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ನಿಪಾ ವೈರಸ್ ರೋಗಿಗಳಿಗೆ ಪ್ರತಿನಿತ್ಯ ಆರ್‌ಟಿ-ಪಿಸಿಆರ್ ಪರೀಕ್ಷೆ!

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 6: ಕೇರಳದ ಕೋಯಿಕ್ಕಾಡ್ ಪ್ರದೇಶದಲ್ಲಿ 12 ವರ್ಷದ ಬಾಲಕ ನಿಪಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ಇಬ್ಬರಲ್ಲಿ ಅದೇ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ರಾಜ್ಯ ಆರೋಗ್ಯ ಇಲಾಖೆಯು ಚಿಕಿತ್ಸೆ ವೈಖರಿ ಮತ್ತು ಶಿಷ್ಟಾಚಾರವನ್ನು ಪ್ರಕಟಿಸಿದೆ.

ನಿಪಾ ವೈರಸ್ ಸೋಂಕಿತ ವ್ಯಕ್ತಿಗಳನ್ನು ಪ್ರತಿನಿತ್ಯ RT-PCR ಪರೀಕ್ಷೆಗೊಳಪಡಿಸುವುದು. ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೆ ಅಥವಾ ಐದು ದಿನಗಳಲ್ಲಿ ಎರಡು ಬಾರಿ ಮೂರು ಮಾದರಿಯಲ್ಲಿ ನಡೆಸಿದ RT-PCR ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ವೈದ್ಯರು ಮತ್ತು ವೈದ್ಯಕೀಯ ಮಂಡಳಿಯ ವಿವೇಚನೆ ಮೇರೆಗೆ ಅಂಥವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ.

ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ನಿಪಾ ವೈರಸ್ ಮತ್ತೊಂದು ರೀತಿ ಆತಂಕವನ್ನು ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ರೋಗದ ನಿಯಂತ್ರಣ ಮತ್ತು ಪತ್ತೆಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳ ಜೊತೆಗೆ ಶಿಷ್ಟಾಚಾರವನ್ನು ಬಿಡುಗಡೆಗಳಿಸಿದೆ. ಕೇರಳ ಸರ್ಕಾರದ ಶಿಷ್ಟಾಚಾರದಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ.

Everyday Nipah virus Patients Must undergo RT-PCR test: Kerala Govt Treatment Protocol is Here

ನಿಪಾ ವೈರಸ್ ರೋಗಿಗಳ ಚಿಕಿತ್ಸೆಯ ಶಿಷ್ಟಾಚಾರ:

* ನಿಫಾ ರೋಗಿಗೆ ನಡೆಸಿದ ಮೊದಲ RT-PCR ವರದಿಯೇ ನೆಗೆಟಿವ್ ಎಂದು ಬಂದರೆ ಮೂರು ದಿನಗಳವರೆಗೂ ಆ ರೋಗಿ ಆರೋಗ್ಯ ಸ್ಥಿತಿ ಮೇಲೆ ನಿಗಾ ವಹಿಸಲಾಗುತ್ತದೆ. ಅದಾಗ್ಯೂ, ಯಾವುದೇ ರೀತಿ ರೋಗದ ಲಕ್ಷಣಗಳು ಕಂಡು ಬಾರದಿದ್ದರೆ, ಅಂಥವರನ್ನು 21 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿರಿಸಿ ಆರೋಗ್ಯ ಪರಿಶೋಧನೆ ಮಾಡಲಾಗುತ್ತದೆ.

* ಒಂದು ವೇಳೆ ವ್ಯಕ್ತಿಯ RT-PCR ವರದಿ ನೆಗೆಟಿವ್ ಎಂದು ಬಂದಿದ್ದು, ಆತನಲ್ಲಿ ಯಾವುದೇ ರೋಗದ ಲಕ್ಷಣಗಳು ಗೋಚರಿಸದಿದ್ದರೆ ಅಂಥವರ ಮೇಲೆ 3 ದಿನಗಳವರೆಗೂ ನಿಗಾ ವಹಿಸಲಾಗುತ್ತದೆ. ಅದಾಗ್ಯೂ ಯಾವುದೇ ಲಕ್ಷಣಗಳು ಗೋಚರಿಸದಿದ್ದರೆ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಗುವುದು.

* ರೋಗಲಕ್ಷಣಗಳು ಮತ್ತು ನೆಗೆಟಿವ್ ಫಲಿತಾಂಶಗಳನ್ನು ಹೊಂದಿರುವ ಇತರ ರೋಗಿಗಳಿದ್ದಾರೆಯೇ ಎಂದು ಕಂಡುಹಿಡಿಯಲು ವಿವರವಾದ ಪರೀಕ್ಷೆ ನಡೆಸಲು ಶಿಷ್ಟಾಚಾರದಲ್ಲಿ ಶಿಫಾರಸು ಮಾಡಲಾಗಿದೆ.

English summary
Everyday Nipah virus Patients Must undergo RT-PCR test: Kerala Govt Treatment Protocol is Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X