ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಣಾಂತಿಕ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕೇರಳದ ವೃದ್ಧ ದಂಪತಿ

|
Google Oneindia Kannada News

ತಿರುವನಂತಪುರಂ, ಮಾರ್ಚ್ 31: ಕೊರೊನಾ ವೈರಸ್‌ಗೆ ತುತ್ತಾಗಿರುವ 60 ವರ್ಷ ಮೇಲ್ಪಟ್ಟವರು ಗುಣಮುಖವಾಗುವುದು ಕಷ್ಟ ಎನ್ನುವ ಆತಂಕದಲ್ಲಿರುವ ಸಂದರ್ಭದಲ್ಲೇ ಕೇರಳದಿಂದ ಶುಭ ಸುದ್ದಿ ಬಂದಿದೆ.

ಮಾರಣಾಂತಿಕ ಕೊರೊನಾಗೆ ಸೆಡ್ಡು ಹೊಡೆದು ವೃದ್ಧ ದಂಪತಿ ಗುಣಮುಖರಾಗಿದ್ದಾರೆ.93 ವರ್ಷದ ಥಾಮಸ್ ಹಾಗೂ 88 ವರ್ಷದ ಪತ್ನಿ ಮೇರಿಯಮ್ಮ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಈಗ ಗುಣಮುಖರಾಗಿ ಹೊರಬಂದಿದ್ದಾರೆ.

ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವುಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು

ಮಾರಣಾಂತಿಕ ಕೊರೊನಾ ವೈರಸ್‌ ಗೆದ್ದು ಬಂದ ದೇಶದ ಮೊದಲ ವೃದ್ಧ ದಂಪತಿ ಇವರಾಗಿದ್ದಾರೆ.

ಈ ವೃದ್ಧ ದಂಪತಿಯಲ್ಲಿ ಓರ್ವ ನರ್ಸ್ ನೋಡಿಕೊಂಡಿದ್ದು, ಸಚಿವರು ನರ್ಸ್ ಬಳಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಇಡೀ ಆರೋಗ್ಯ ಇಲಾಖೆಯೇ ನನ್ನ ಜೊತೆಯಲ್ಲಿದೆ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

ಕೇರಳದಲ್ಲಿ 32 ಹೊಸ ಪ್ರಕರಣಗಳು ಪತ್ತೆ

ಕೇರಳದಲ್ಲಿ 32 ಹೊಸ ಪ್ರಕರಣಗಳು ಪತ್ತೆ

ಕೇರಳದಲ್ಲಿ 32 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 213 ಮಂದಿಗೆ ಚಿಕಿತ್ಸೆ ನಿಡಲಾಗುತ್ತಿದೆ. ಕಾಸರಗೋಡಿನಲ್ಲಿ ಒಂದೇ ದಿನ 17 ಪ್ರಕರಣಗಳು ದೃಢಪಟ್ಟಿವೆ.

ಮಗನಿಂದ ವೃದ್ಧರಿಗೆ ಕಾಯಿಲೆ ಬಂದಿತ್ತು

ಮಗನಿಂದ ವೃದ್ಧರಿಗೆ ಕಾಯಿಲೆ ಬಂದಿತ್ತು

ಈ ವೃದ್ಧ ದಂಪತಿಗೆ ಅವರ ಮಗನಿಂದಲೇ ಕೊರೊನಾ ಸೋಂಕು ಹರಡಿತ್ತು. ಆತ ಇಟಲಿಯಿಂದ ಕೇರಳಕ್ಕೆ ವಾಪಸಾಗಿದ್ದ. ಮಗ, ಸೊಸೆ ಹಾಗೂ ಅವರ ಮಗುವಿಗೂ ಕೊರೊನಾ ಸೋಂಕು ಪಾಸಿಟಿವ್ ಬಂದಿತ್ತು ಎಂದು ತಿಳಿದುಬಂದಿದೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ

ವೃದ್ಧ ದಂಪತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೊಟ್ಟಾಯಂನ ವೈದ್ಯಕೀಯ ಕಾಲೇಜಿಗೆ ಅವರನ್ನು ಕರೆತರುವಾಗ ಅವರು ತೀರಾ ಚಿಂತಾಜನಕ ಪರಿಸ್ಥಿತಿಯಲ್ಲಿದ್ದರು. ಕೊಟ್ಟಾಯಂ ಕಾಲೇಜಿನ ನುರಿತ ತಜ್ಞರು ಅವರಿಗೆ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಎರಡು ವಾರಗಳ ಕಾಲ ಗೃಹಬಂಧನ

ಎರಡು ವಾರಗಳ ಕಾಲ ಗೃಹಬಂಧನ

ದೆಹಲಿಯಿಂದ ಬಂದಿದ್ದ ಅಬ್ರಹಂ ಮಾನ್ಸಿ ಹಾಗೂ ಅವರ ಕುಟುಂಬದ ಮೂವರು ಕೊರೊನಾ ಪಾಸಿಟಿವ್ ಆಗಿದ್ದು, ಎರಡು ವಾರಗಳ ಕಾಲ ಗೃಹಬಂಧನದಲ್ಲಿಡಲಾಗುತ್ತದೆ. ಮಾರ್ಚ್ 6 ರಿಂದ ಐಸೊಲೇಷನ್‌ನಲ್ಲಿಡಲಾಗಿದೆ. ಸೋಮವಾರ ವರದಿ ಬಂದಿದ್ದು, ಕೊರೊನಾ ನೆಗೆಟಿವ್ ಬಂದಿದ್ದು, ಅವರನ್ನ ಮನೆಗೆ ಕಳುಹಿಸಲಾಗಿದೆ. 24 ದಿನಗಳ ಕಾಲ ರೋಗಿಗಳ ಸೇವೆ ಮಾಡಿದ್ದ ವೈದ್ಯರು, ನರ್ಸ್‌ಗಳು ರೋಗಿಗಳನ್ನು ಖುಷಿಯಿಂದ ಬೀಳ್ಕೊಟ್ಟರು.

English summary
Ninety-three-year-old Thomas and his 88-year-old wife Mariyamma, who were undergoing treatment at Kottayam Medical College Hospital for the last three weeks, have recovered completely and went back home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X