ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ರಾಜಕೀಯಕ್ಕೆ ಗುಡ್‌ಬೈ ಹೇಳಿದ ಕೇರಳ ಸಚಿವ ಜಯರಾಜನ್

|
Google Oneindia Kannada News

ತಿರುವನಂತಪುರಂ, ಮಾರ್ಚ್ 31: ಕೇರಳ ಸಚಿವ ಇಪಿ ಜಯರಾಜನ್(70) ಚುನಾವಣಾ ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದಾರೆ.

ಸಿಪಿಐ(ಎಂ) ಪಕ್ಷವು ಎರಡು ಬಾರಿ ಶಾಸಕರಾದವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದೆ. ಹಾಗೆಯೇ ಪಕ್ಷವು ಅವರನ್ನು ವಿನಂತಿಸಿದರೂ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಿಲ್ಲ, ಪಕ್ಷವು ನನ್ನ ನಿರ್ಧಾರವನ್ನು ಒಪ್ಪುತ್ತದೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದರು.

ಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟಕೇರಳ ವಿಧಾನಸಭೆ ಚುನಾವಣೆ 2021 ದಿನಾಂಕ ಪ್ರಕಟ

'ನನ್ನ ಆರೋಗ್ಯ ಸರಿ ಇಲ್ಲ, ನನಗೂ ವಯಸ್ಸಾಗಿದೆ, ಚುನಾವಣೆಗಳಲ್ಲಿ ಅಥವಾ ಸಾರ್ವಜನಿಕವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಹಾಗೆಯೇ ನಾನು ಮೂರು ಬಾರಿ ಶಾಸಕನಾಗಿದ್ದೇನೆ' ಎಂದರು.

E P Jayarajan Decides To End Electoral Politics

'ಎರಡು ಅವಧಿ ಪೂರ್ಣಗೊಳಿಸಿದವರು ಸ್ಪರ್ಧಿಸಬಾರದು ಎಂದು ಪಕ್ಷ ನಿರ್ಧರಿಸಿದೆ. ನಮ್ಮ ಅವಧಿ ಮುಗಿದಿದೆ, ವಯಸ್ಸೂ ಆಗಿದೆ, ದಣಿದಿದ್ದೇನೆ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' ಎಂದು ಹೇಳಿದರು.

ಹಾಗೆಯೇ ತಮ್ಮ ನಿಲುವನ್ನು ಪಕ್ಷಕ್ಕೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ, ಹಾಗಾದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನಿಮಗಿಂತ ವಯಸ್ಸಾಗಿದೆ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅವರು, 'ಪಿಣರಾಯಿ ವಿಜಯನ್ ವಿಶೇಷ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿರುವ ಮಹಾನ್ ವ್ಯಕ್ತಿ' ಎಂದರು.

ಕೇರಳದ 14 ಜಿಲ್ಲೆಗಳಲ್ಲಿನ 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲೇ ಚುನಾವಣೆ ನಡೆಯಲಿದೆ. ಮಾರ್ಚ್ 12ರಂದು ಅಧಿಸೂಚನೆ ಪ್ರಕಟ ಮಾರ್ಚ್ 20ರಂದು ನಾಮಪತ್ರ ಪರಿಶೀಲನೆ ಮಾರ್ಚ್ 22ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ.

ಏಪ್ರಿಲ್ 6 ರಂದು ಮತದಾನ ಮೇ 2 ರಂದು ಮತ ಎಣಿಕೆ, ಫಲಿತಾಂಶ ಪ್ರಕಟ, ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. 2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು. ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು. ಅಧಿಕಾರ ಸ್ಥಾಪಿಸಲು ಮ್ಯಾಜಿಕ್ ನಂಬರ್ 71 ದಾಟಬೇಕಾಗುತ್ತದೆ.

English summary
Industries and Sports Minister E.P. Jayarajan said that he has decided to put an end to electoral politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X