ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಭಕ್ತರಿಗೆ ಮತ್ತೆ ನಿರಾಸೆ: ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ

|
Google Oneindia Kannada News

ತಿರುವನಂತಪುರಂ, ಜೂನ್ 18: ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ರಾಜ್ಯಗಳಿಗೂ ಆತಂಕ ಕಡಿಮೆಯಾಗಿಲ್ಲ. ಈ ಹಿನ್ನೆಲೆ ಇಂದಿನಿಂದ ಜೂನ್ ಅಂತ್ಯದವರೆಗೂ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶ ನಿರ್ಬಂಧಕ್ಕೆ ಕೇರಳ ಮುಂದಾಗಿದೆ.

Recommended Video

Solar Eclipse June 21 2020 : Sunday darshan timing changed in Kukke Subramanya | Oneindia Kannada

ಈ ಕುರಿತು ಕೇರಳ ದೇವಸ್ವಂ ಮಂಡಳಿ ನಿರ್ಧಾರ ತೆಗೆದುಕೊಂಡಿದ್ದು, ಇಂದಿನಿಂದ ಜೂನ್ ಅಂತ್ಯದವರಿಗೆ ಸಾಮಾನ್ಯ ಭಕ್ತರಿಗೆ ದೇವಸ್ಥಾನ ಪ್ರವೇಶ ರದ್ದು ಮಾಡಿದೆ. ಪ್ರತಿನಿತ್ಯದ ಪೂಜೆ ನಡೆಯಲಿದೆ, ಆದರೆ, ಭಕ್ತರಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'ಕೊರೊನಾ ಹೋರಾಟದಲ್ಲಿ ಕರ್ನಾಟಕ-ಕೇರಳ 'ಮಾದರಿ': ಬಿಎಸ್ವೈ-ಪಿಣರಾಯಿ 'ವಿಕ್ಟರಿ'

ಕೇರಳ ದೇವಸ್ವಂ ಮಂಡಳಿ ಅಡಿಯಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲ ದೇವಸ್ಥಾನಗಳು ಈ ಆದೇಶ ಪಾಲಿಸಬೇಕಾಗಿದೆ. ಇದು ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತ. ಚರ್ಚ್, ಮಸೀದಿ ಅಥವಾ ಇನ್ನಿತರ ಧಾರ್ಮಿಕ ಕೇಂದ್ರಗಳಿಗೆ ಇದು ಅನ್ವಯ ಇಲ್ಲ.

Devotees not allowed in temple from today till the end of June in kerala

ಜೂನ್ 8ನೇ ತಾರೀಕಿನಿಂದ ಕೇಂದ್ರ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿತ್ತು. ಸಮಾಜಿಕ ಅಂತರ ಕಾಪಾಡಿಕೊಂಡು ಭಕ್ತರಿಗೂ ಅವಕಾಶ ಮಾಡಿಕೊಂಡುವಂತೆ ಸೂಚಿಸಿತ್ತು. ಆದರೆ, ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ ಧಾರ್ಮಿಕ ಮಂಡಳಿ ಈ ಮತ್ತೆ ಭಕ್ತರಿಗೆ ಪ್ರವೇಶ ನೀಡದಿರಲು ತೀರ್ಮಾನಿಸಿದೆ.

ಪ್ರಸ್ತುತ ಕೇರಳದಲ್ಲಿ 2698 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ 1324 ಜನರು ಗುಣಮುಖರಾಗಿದ್ದಾರೆ. ಇನ್ನೂ 1352 ಜನರು ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

English summary
The Board has decided to not allow the entry of devotees in temples from today till the end of June, due to a rise in COVID19 cases: Kerala Devaswom Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X