ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್‌ನಿಂದ ಪಾರ್ಸೆಲ್ ತಂದ ಪರೋಟದಲ್ಲಿ ಹಾವಿನ ಚರ್ಮ ಪತ್ತೆ

|
Google Oneindia Kannada News

ತಿರುವನಂತಪುರಂ, ಮೇ 07: ಹೋಟೆಲ್‌ನಿಂದ ಎರಡು ಪರೋಟ ಪಾರ್ಸೆಲ್ ತಂದು ಮನೆಯಲ್ಲಿ ಮಗಳೊಂದಿಗೆ ಊಟಕ್ಕೆ ಕುಳಿತ ಮಹಿಳೆಗೆ ಆಘಾತ ಕಾದಿತ್ತು. ತಾವು ತಿನ್ನುತ್ತಿದ್ದ ಪರೋಟದಲ್ಲಿ ಹಾವಿನ ಚರ್ಮ ಮತ್ತು ಅದರ ಹಾವಿನ ಅವಶೇಷಗಳನ್ನು ಕಂಡು ಹೌಹಾರಿದ್ದಾರೆ. ಇಂಥದ್ದೊಂದು ಘಟನೆ ತಿರುವನಂತಪುರಂನ ನೆಡುಮಂಗಾಡ್ ನಗರದಲ್ಲಿ ನಡೆದಿದೆ.

ನೆಡುಮಂಗಾಡ್‌ನ ಹೋಟೆಲ್‌ನಲ್ಲಿ ಆಹಾರ ಪ್ಯಾಕ್ ಮಾಡಿಕೊಂಡು ಮನೆಗೆ ತೆರಳಿದ್ದ ಸ್ಥಳೀಯ ಮಹಿಳೆಯೊಬ್ಬರಿಗೆ ತಾವು ಊಟ ಮಾಡುತ್ತಿದ್ದ ಹೊತ್ತಿಗೆ ಸಮಯ ಪ್ರಜ್ಞೆಯಿಂದ ತಾವು ತಿನ್ನುತ್ತಿದ್ದ ಪರೋಟಾದಲ್ಲಿ ಹಾವಿನ ಚರ್ಮ ಕಾಣಿಸಿಕೊಂಡಿರುವುದನ್ನು ಕಂಡು ಬಳಿಕ ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದಾರೆ. ಇನ್ನು ಆಹಾರ ಸುರಕ್ಷತಾ ಅಧಿಕಾರಿಗಳು ತಾತ್ಕಾಲಿಕವಾಗಿ ಈ ಹೋಟೆಲ್‌ನ್ನು ಮುಚ್ಚಿಸಿದ್ದಾರೆ.

ಚಿಕನ್ ಶವರ್ಮಾ ತಿಂದು 16 ವರ್ಷದ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ ಚಿಕನ್ ಶವರ್ಮಾ ತಿಂದು 16 ವರ್ಷದ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ

ಇನ್ನು ಇದನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಹಾವಿನ ಚರ್ಮದ ಅವಶೇಷಗಳು ಆಹಾರವನ್ನು ಪ್ಯಾಕ್ ಮಾಡಲು ಬಳಸುವ ಪತ್ರಿಕೆಯಲ್ಲಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪರೋಟ ಪಾರ್ಸಲ್ ಖರೀದಿ ಮಾಡಿದ್ದ ಮಹಿಳೆ ಪೊಟ್ಟಣದಲ್ಲಿ ಹಾವಿನ ಚರ್ಮದ ಅವಶೇಷಗಳನ್ನು ಕಂಡುಕೊಂಡಿದ್ದಾರೆ. ಮೇ 5 ರಂದು ಗುರುವಾರ ಚಂದಾಮುಕ್ಕು ಹೋಟೆಲ್‌ನಿಂದ ಪರೋಟಾ ಖರೀದಿಸಿದ್ದರು. ಈ ಘಟನೆ ವರದಿಯಾದ ನಂತರ ಹೋಟೆಲ್‌ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿರುವನಂತಪುರಂನ ಆಹಾರ ಸುರಕ್ಷತೆಯ ಸಹಾಯಕ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.

Customer in Kerala Spots Snake Skin in Food Parcel, Hotel Closed

ಪ್ರಿಯಾ ಎಂಬ ಮಹಿಳೆ ಮತ್ತು ಅವರ ಮಗಳು ತಮ್ಮ ಊಟಕ್ಕೆ ಎರಡು ಪರೋಟಾಗಳನ್ನು ಖರೀದಿಸಿದ್ದರು. ಅದರಲ್ಲಿ ಮಗಳು ಒಂದನ್ನು ತಿಂದರು ಮತ್ತು ತಾಯಿ ಇನ್ನೊಂದು ಪರೋಟಾ ತಿನ್ನುತ್ತಿದ್ದಾಗ ಆಗ ಪಾರ್ಸೆಲ್‌ನಲ್ಲಿ ಹಾವಿನ ಚರ್ಮದ ಒಂದು ಭಾಗ ಪತ್ತೆಯಾಗಿದೆ. ಬಳಕ ಗ್ರಾಹಕ ವೇದಿಕೆಯಿಂದ ಮಹಿಳೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಹೋಟೆಲ್ ಪರಿಶೀಲಿಸಿದ ನಂತರ ಹೋಟೆಲ್ ಅಧಿಕಾರಿಗಳು ಮುಚ್ಚಲು ಆದೇಶಿಸಿದರು.

Customer in Kerala Spots Snake Skin in Food Parcel, Hotel Closed

"ಈ ಘಟನೆ ವರದಿಯ ನಂತರ ನಾವು ತಕ್ಷಣವೇ ಹೋಟೆಲ್‌ನ್ನು ಪರಿಶೀಲಿಸಿದ್ದೇವೆ. ಅಡುಗೆ ಕೋಣೆಗೆ ಸಾಕಷ್ಟು ಬೆಳಕು ಇರಲಿಲ್ಲ ಮತ್ತು ಸ್ಕ್ರ್ಯಾಪ್‌ನ್ನು ಹೊರಗೆ ಎಸೆಯಲಾಗಿದೆ. ತಕ್ಷಣವೇ ಔಟ್ಲೆಟ್ ಮುಚ್ಚಿ ಹೋಟೆಲ್ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಯಿತು. ಆಹಾರದ ಪ್ಯಾಕಿಂಗ್‌ಗೆ ಬಳಸಲಾದ ಪತ್ರಿಕೆಯಲ್ಲಿ ಹಾವು ಸತ್ತ ಚರ್ಮವಿದೆ ಎಂಬುದು ನಮ್ಮ ಪ್ರಾಥಮಿಕ ಸಂಶೋಧನೆಯಿಂದ ಗೊತ್ತಾಗಿದೆ ಎಂದು ನೆಡುಮಂಗಾಡ್ ಸರ್ಕಲ್‌ನ ಆಹಾರ ಸುರಕ್ಷತಾ ಅಧಿಕಾರಿ ಅರ್ಶಿತಾ ಬಶೀರ್ ತಿಳಿಸಿದ್ದಾರೆ.

Customer in Kerala Spots Snake Skin in Food Parcel, Hotel Closed

ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯಲ್ಲೂ ಇಂತಹ ಘಟನೆ ನಡೆದಿದ್ದು 16 ವರ್ಷದ ಬಾಲಕಿಯೊಬ್ಬಳು ವಿಷ ಆಹಾರ ತಿಂದು ಮೃತಪಟ್ಟಿದ್ದಳು. ಕನಿಷ್ಠ 40 ಮಂದಿ ವಿಷಾಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೋಟೆಲ್ ಮಾಲೀಕ ಸೇರಿ ಕಾರ್ಮಿಕರಲ್ಲಿ ಮೂವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವು), 308 ಮತ್ತು 272 (ಕಲಬೆರಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ ಈ ಘಟನೆ ಕುರಿತು ಡಾ.ಎ.ವಿ.ರಾಮದಾಸ್ ಪ್ರಕಾರ ಶಿಗೆಲ್ಲ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾದಿಂದ ಆಹಾರ ವಿಷಪೂರಿತವಾಗಿದೆ ಎಂದು ಗೊತ್ತಾಗಿದೆ.

Recommended Video

ಮುಂಬೈ ಗೆಲುವಿನ ನಂತ್ರ ಹಾರ್ದಿಕ್ ಮತ್ತು ರೋಹಿತ್ ಪತ್ನಿಯ ರಿಯಾಕ್ಷನ್ ಫುಲ್ ವೈರಲ್ | Oneindia Kannada

English summary
A hotel in Nedumangad of Thiruvananthapuram has been temporarily closed by the food safety officials
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X