ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಭಂಡಾರಕ್ಕೆ ಎರಡೆರಡು ಬಾರಿ ಕನ್ನ: 'ದಕ್ಷ ಅಧಿಕಾರಿಯನ್ನು ನಿಯೋಜಿಸುವ ಯೋಗ್ಯತೆಯಿಲ್ಲವೇ?'

|
Google Oneindia Kannada News

ತಿರುವನಂತಪುರಂ, ಜ 13: ಒಂದು ತಿಂಗಳ ಅವಧಿಯಲ್ಲಿ ಎರಡೆರಡು ಬಾರಿ ಶಬರಿಮಲೆ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಭಂಡಾರಕ್ಕೆ ಕನ್ನ ಹಾಕಿದ ಘಟನೆ ವರದಿಯಾಗಿದೆ. ಕೇರಳ ಉಚ್ಚನ್ಯಾಯಾಲಯ ಸರಕಾರದ ವಿರುದ್ದ ಗರಂ ಆಗಿದೆ.

ಕಳೆದ ಡಿಸೆಂಬರ್ 31ರಂದು ಮಕರವಿಳಕ್ಕು ಪೂಜೆಗಾಗಿ ಶಬರಿಮಲೆ ದೇವಾಲಯವನ್ನು ತೆರೆಯಲಾಗಿತ್ತು. ಜನವರಿ 19 ರಂದು ಮಕರವಿಳಕ್ಕು ಕಾರ್ಯಕ್ರಮದ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ಜನವರಿ ಹದಿನಾಲ್ಕು ಮಕರ ಸಂಕ್ರಾಂತಿಯ ದಿನದಂದು ಮಕರ ಜ್ಯೋತಿ ದರ್ಶನವಾಗುತ್ತದೆ.

ಕೇರಳ: ಮಕರ ಸಂಕ್ರಾಂತಿಗಾಗಿ ಶಬರಿಮಲೆ ದೇಗುಲ ಮತ್ತೆ ಓಪನ್ಕೇರಳ: ಮಕರ ಸಂಕ್ರಾಂತಿಗಾಗಿ ಶಬರಿಮಲೆ ದೇಗುಲ ಮತ್ತೆ ಓಪನ್

ಕೇರಳ ಸರಕಾರಕ್ಕೆ ಭರ್ಜರಿ ಆದಾಯ ತಂದು ಕೊಡುವ ಶಬರಿಮಲೆ ದೇವಸ್ಥಾನವು ಸರಕಾರದ ನಿಯಂತ್ರಣದಲ್ಲಿರುವ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ವ್ಯಾಪ್ತಿಗೆ ಬರುತ್ತದೆ. ಟಿಡಿಬಿಯ ಸಿಬ್ಬಂದಿಯೇ ದೇವಾಲಯದ ಭಂಡಾರಕ್ಕೆ ಕನ್ನ ಹಾಕಿರುವುದು ಸಿಸಿಟಿವಿ ಫೂಟೇಜ್ ನಿಂದ ಪತ್ತೆಯಾಗಿದೆ.

ಈ ಸಂಬಂಧ ತೀವ್ರ ಅಸಮಾಧಾನ ವ್ಯಕ್ತ ಪಡಿಸಿರುವ ಕೇರಳ ಹೈಕೋರ್ಟ್, ದಕ್ಷ ಅಧಿಕಾರಿಯನ್ನು ನಿಯೋಜಿಸುವ ಸಮಯ ಬಂದಿದೆ ಎಂದು ಕೇರಳ ಸರಕಾರಕ್ಕೆ ಸೂಚಿಸಿದೆ. ಒಂದು ಧರ್ಮದ ನಂಬಿಕೆಯನ್ನು ಕಳೆದುಕೊಳ್ಳಬೇಡಿ ಎಂದು ಸರಕಾರಕ್ಕೆ ಚಾಟಿ ಬೀಸಿದೆ. ಏನಿದು ಘಟನೆ?

ಶಬರಿಮಲೆ ಯಾತ್ರಿಕರಿಕೆ ಖುಷಿ ಸುದ್ದಿ: ನಿಯಮ ಸಡಿಲಿಕೆಶಬರಿಮಲೆ ಯಾತ್ರಿಕರಿಕೆ ಖುಷಿ ಸುದ್ದಿ: ನಿಯಮ ಸಡಿಲಿಕೆ

 ಶಬರಿಮಲೆ ದೇವಾಲಯದ ಭಂಡಾರಕ್ಕೆ ದೇವಸ್ವಂ ಬೋರ್ಡಿನ ಸಿಬ್ಬಂದಿ ಕನ್ನ

ಶಬರಿಮಲೆ ದೇವಾಲಯದ ಭಂಡಾರಕ್ಕೆ ದೇವಸ್ವಂ ಬೋರ್ಡಿನ ಸಿಬ್ಬಂದಿ ಕನ್ನ

ಡಿಸೆಂಬರ್ 16, 2021 ಮತ್ತು ಜನವರಿ 8, 2022ರಲ್ಲಿ ಶಬರಿಮಲೆ ದೇವಾಲಯದ ಭಂಡಾರಕ್ಕೆ ದೇವಸ್ವಂ ಬೋರ್ಡಿನ ಸಿಬ್ಬಂದಿ ಕನ್ನ ಹಾಕಿದ್ದ. ಭಂಡಾರಕ್ಕೆ ಕನ್ನ ಹಾಕುತ್ತಿರುವುದು ಸಿಸಿಟಿವಿಯ ಮೂಲಕ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿ, ಆತನ ಮನೆಯಿಂದ 42,470 ಹಣ ಇರುವುದನ್ನು ಪತ್ತೆ ಮಾಡಿದ್ದಾರೆ. ಇದೇ ರೀತಿಯ ಘಟನೆ ಇಪ್ಪತ್ತು ದಿನಗಳ ಅವಧಿಯಲ್ಲಿ ಮತ್ತೆ ನಡೆದಿದೆ.

 ದೇವಾಲಯದ ಭಂಡಾರದ ಸುತ್ತಮುತ್ತ ನಿರಂತರ ಕಾವಲು

ದೇವಾಲಯದ ಭಂಡಾರದ ಸುತ್ತಮುತ್ತ ನಿರಂತರ ಕಾವಲು

ಜನವರಿ 8, 2022ರಲ್ಲಿ ದೇವಸ್ವಂ ಬೋರ್ಡಿನ ಮತ್ತೋರ್ವ ಸಿಬ್ಬಂದಿ ದೇವಾಲಯದ ಹುಂಡಿಯ ಹಣವನ್ನು ಲೆಕ್ಕ ಮಾಡುತ್ತಿದ್ದಂತಹ ಸಂದರ್ಭದಲ್ಲಿ 3,500 ರೂಪಾಯಿ ಜೇಬಿಗೆ ಹಾಕಿಕೊಂಡಿದ್ದು ಪತ್ತೆಯಾಗಿತ್ತು. ಎರಡನೇ ಘಟನೆ ಹೈಕೋರ್ಟ್ ಆದೇಶದ ನಂತರ ನಡೆದದ್ದು ಎನ್ನುವುದು ಗಮನಿಸಬೇಕಾದ ವಿಚಾರ. ದೇವಾಲಯದ ಭಂಡಾರದ ಸುತ್ತಮುತ್ತ ನಿರಂತರ ಕಾವಲು ಇರಬೇಕು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆದಾಗ್ಯೂ, ಈ ಘಟನೆ ನಡೆದಿರುವುದು ಹೈಕೋರ್ಟ್ ಕೆಂಗಣ್ಣಿಗೆ ಕಾರಣವಾಗಿದೆ.

 ಕೇರಳ ಹೈಕೋರ್ಟ್ ಪೀಠದ ಜ.ಅನಿಲ್ ನರೇಂದ್ರನ್ ಮತ್ತು ಜ.ಅನಿಲ್ ಕುಮಾರ್

ಕೇರಳ ಹೈಕೋರ್ಟ್ ಪೀಠದ ಜ.ಅನಿಲ್ ನರೇಂದ್ರನ್ ಮತ್ತು ಜ.ಅನಿಲ್ ಕುಮಾರ್

"ಬೋರ್ಡಿನ ಯಾರೇ ಸಿಬ್ಬಂದಿಯಾಗಿರಲಿ, ಇಂತಹ ಘಟನೆ ನಡೆದರೆ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಶಬರಿಮಲೆಯ ವಿಶೇಷ ಕರ್ತವ್ಯಾಧಿಕಾರಿಯ ಗಮನಕ್ಕೆ ತರಬೇಕು. ಸಿಬ್ಬಂದಿಗೆ ನೀಡಿರುವ ನೊಟೀಸ್ ಕಾಪಿಯ ಪ್ರತಿಯನ್ನು ಪೀಠಕ್ಕೆ ಸಲ್ಲಿಸಬೇಕು. ಘಟನೆಗಳು ಪುನರಾವರ್ತನೆಗೊಳ್ಳುತ್ತಿದ್ದರೂ ದಕ್ಷ ಅಧಿಕಾರಿಯನ್ನು ನಿಯೋಜಿಸುವ ಯೋಗ್ಯತೆ ನಿಮಗಿಲ್ಲವೇ"ಎಂದು ಕೇರಳ ಹೈಕೋರ್ಟ್ ಪೀಠದ ಜ.ಅನಿಲ್ ನರೇಂದ್ರನ್ ಮತ್ತು ಜ.ಅನಿಲ್ ಕುಮಾರ್ ಅವರಿರುವ ಪೀಠ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

 ಭಂಡಾರಕ್ಕೆ ಕನ್ನ ಹಾಕಿರುವ ಇಬ್ಬರ ವಿರುದ್ದ ಎಫ್ಐಆರ್

ಭಂಡಾರಕ್ಕೆ ಕನ್ನ ಹಾಕಿರುವ ಇಬ್ಬರ ವಿರುದ್ದ ಎಫ್ಐಆರ್

"ಭಂಡಾರಕ್ಕೆ ಕನ್ನ ಹಾಕಿರುವ ಇಬ್ಬರ ವಿರುದ್ದ ಎಫ್ಐಆರ್ ದಾಖಲಾಗಿದೆಯಾ, ಅವರಿಬ್ಬರು ನ್ಯಾಯಂಗ ಬಂಧನದಲ್ಲಿ ಇದ್ದಾರಾ" ಎಂದು ಕೋರ್ಟ್ ಸರಕಾರವನ್ನು ಪ್ರಶ್ನಿಸಿದೆ. ದಕ್ಷ ಅಧಿಕಾರಿಯನ್ನು ಅಲ್ಲಿಗೆ ನಿಯೋಜಿಸಿದರೆ ಇಂತಹ ಘಟನೆಗಳು ಮತ್ತೆಮತ್ತೆ ನಡೆಯುವುದಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ ಮತ್ತು ಡಿಸೆಂಬರ್ 21, 2021ರಂದು ನೀಡಿದ ಆದೇಶವನ್ನು ಮತ್ತೆ ಪೀಠ ಪುನರುಚ್ಚಿಸಿದೆ.

ಶಬರಿಮಲೆ ದೇವಾಲಯ ಪ್ರವೇಶಿಸಲು ಲಸಿಕೆ ಪೂರ್ಣ ಕಡ್ಡಾಯ: ದೇವಸ್ಥಾನ ಪ್ರವೇಶಿಸುವವರಿಗೆ 2 ಡೋಸ್ ಲಸಿಕೆ ಕಡ್ಡಾಯ ಜನರು ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ ಪೂರ್ಣ ವ್ಯಾಕ್ಸಿನೇಷನ್ ಪ್ರಮಾಣಪತ್ರ ಅಥವಾ 72 ಗಂಟೆಗಳಿಗಿಂತ ಹಳೆಯದಾದ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

English summary
Currency Theft From Sabarimala Bandara by TDB Employee: Angry Keral High Court. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X