• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದ ಮಾಜಿ ಸಿಎಂ ಚಾಂಡಿ ವಿರುದ್ಧ ರೇಪ್ ಕೇಸ್, ಎಫ್ಐಆರ್

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 21: ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದ ಆರೋಪಿಯಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಮತ್ತೊಮ್ಮೆ ಭಾರಿ ಹಿನ್ನಡೆ ಉಂಟಾಗಿದೆ.

ಚಾಂಡಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು, ಎಫ್ಐಆರ್ ದಾಖಲಿಸಿದ್ದಾರೆ.

ಸೋಲಾರ್ ಹಗರಣದ ಪ್ರಮುಖ ಆರೋಪಿಯಾಗಿರುವ ಸರಿತಾ ನಾಯರ್ ಅವರು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು.

ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರುಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು

ಇದೇ ಪ್ರಕರಣದ ಮುಂದುವರೆದ ಭಾಗವಾಗಿ, ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರನ್ನು ಸಿಎಂ ಅಧಿಕೃತ ನಿವಾಸ ಕ್ಲಿಫ್ ಹೌಸ್ ನಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ, ಶನಿವಾರದಂದು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಳಿ ಎಫ್ ಐಆರ್ ಪ್ರತಿ ಸಲ್ಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಸೋಲಾರ್ ಫಲಕ ಯೋಜನೆಗೆ ಖಾಸಗಿ ಸಂಸ್ಥೆ ಹೂಡಿಕೆ ಬಗ್ಗೆ ಮಾತುಕತೆಗೆ ತೆರಳಿದ್ದಾಗ, ಡೀಲ್ ಗೆ ಒಪ್ಪಿಗೆ ಸೂಚಿಸಿದ್ದ ಚಾಂಡಿ ಅವರು ಬದಲಿಗೆ ಮಂಚ ಏರಿ ಸುಖ ಕೊಡು ಎಂದು ನನ್ನನ್ನು ಬಲವಂತಪಡಿಸಿದರು ಎಂದು ಸರಿತಾ ಹೇಳಿಕೆ ನೀಡಿದ್ದಾರೆ.

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್

ಮತ್ತೊಬ್ಬ ಆರೋಪಿ ಬಿಜು ರಾಧಾಕೃಷ್ಣನ್ ಅವರು ಈ ಹಿಂದೆ ಕೇರಳ ಆಗಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಮೇಲೆ ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಆರೋಪಿಸಿದ್ದರು.

ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್ ನಾಯರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಪತ್ನಿಯನ್ನು ಕೊಂದ ಆರೋಪದ ಮೇಲೆ ಬಿಜು ಸದ್ಯ ಜೈಲಿನಲ್ಲಿದ್ದಾರೆ.

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಿದೆ.

ಲೈಂಗಿಕ ಕಿರುಕುಳಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿರಲಿಲ್ಲ

ಲೈಂಗಿಕ ಕಿರುಕುಳಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿರಲಿಲ್ಲ

ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ,ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿ ಕೂಡ ನಾಯರ್‌ಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದರು. ಸರಿತಾ ಅವರು ಜಸ್ಟೀಸ್ ಶಿವರಾಜನ್ ಆಯೋಗದ ಎದುರು ಹೇಳಿಕೆ ನೀಡಿದ್ದರು.

ಕಾರ್ಪೊರೇಟ್ ಲಾಬಿಗಾರ್ತಿಯಾಗಿದ್ದ ಸರಿತಾ

ಕಾರ್ಪೊರೇಟ್ ಲಾಬಿಗಾರ್ತಿಯಾಗಿದ್ದ ಸರಿತಾ

ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಉಮ್ಮನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಆರೋಪ ಹೊತ್ತುಕೊಂಡಿದ್ದರು.

ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದಾರೆ ಪೊಲೀಸರು ಈವರೆಗೆ 60,000 ಕ್ಕೂ ಅಧಿಕ ಫೋನ್ ಕರೆಯನ್ನು ಪರೀಕ್ಷಿಸಿದ್ದಾರೆ. ಸರಿತಾ ಬಳಿ ಸುಮಾರು 6 ಫೋನ್ ಗಳಿದ್ದು ಅವುಗಳಲ್ಲಿನ ಕರೆಗಳನ್ನು ತನಿಖೆಗೊಳಪಡಿಸಲಾಗಿದೆ.

ನಾನು ಯಾವುದೇ ರೀತಿ ಆಕೆಗೆ ನೆರವಾಗಿಲ್ಲ: ಚಾಂಡಿ

ನಾನು ಯಾವುದೇ ರೀತಿ ಆಕೆಗೆ ನೆರವಾಗಿಲ್ಲ: ಚಾಂಡಿ

ನಾನು ಯಾವುದೇ ರೀತಿ ಆಕೆಗೆ ನೆರವಾಗಿಲ್ಲ. ಸಮಿತಿ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಲಿದೆ. ‘‘ಸರಿತಾ ಹಾಗೂ ಸಹ ಆರೋಪಿ ಬಿಜು ರಾಧಾಕೃಷ್ಣನ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿರುವುದು ರಾಜ್ಯ ಸರಕಾರದ ನಿಲುವನ್ನು ಸಮರ್ಥಿಸಿದಂತಾಗಿದೆ. ಸಮಿತಿ ಮುಂದೆ ಸಾಮಾನ್ಯ ಆರೋಪಿಯಾಗಿ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದಿದ್ದಾರೆ. ಸಿಎಂ ಪರಿಹಾರ ನಿಧಿಗೆ ಸರಿತಾ ನೀಡಿದ ಚೆಕ್ ಬೌನ್ಸ್ ಆಗಿದೆ ಎಂಬುದು ಬೇರೆ ವಿಷಯ.

English summary
Kerala State Crime Branch police confirmed late on Saturday that they have opened a criminal investigation against former Chief Minister Oommen Chandy on suspicion of having sexually assaulted solar energy investment fraud case accused Sarita Nair at his official residence at Cliff house in hiruvananthapuram in 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X