ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ತಲಚ್ಚೇರಿಯಲ್ಲಿ ಸಿಪಿಐಎಂ ಕಾರ್ಯಕರ್ತನ ಹತ್ಯೆ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಕಣ್ಣೂರು, ಫೆಬ್ರವರಿ 21: ಕೇರಳದ ಕಣ್ಣೂರಿನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸೋಮವಾರ ನಸುಕಿನ 2 ಗಂಟೆ ಸುಮಾರಿಗೆ ತಲಚ್ಚೇರಿಯ ನ್ಯೂ ಮಾಹೆಯಲ್ಲಿ ಈ ಘಟನೆ ನಡೆದಿದೆ.

ಕೊಲೆಯಾದವರನ್ನು ಪುನ್ನೋಲ್‌ನ ನಿವಾಸಿ ಎಂದು ಗುರುತಿಸಲಾಗಿದೆ. ಮೀನುಗಾರನಾಗಿದ್ದ ಕೊರಂಬಿಲ್ ಹರಿದಾಸ್ ಎಂಬಾತ ಕೊಲೆಯಾದ ವ್ಯಕ್ತಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ "ರಾಜಕೀಯ ಕೊಲೆ"ಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರು ಇದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ಆದರೆ, ಆರೆಸ್ಸೆಸ್ ಅಲ್ಲಗೆಳೆದಿದೆ.

CPIM Worker Hacked to Death, New Mahe in Thalassery

ವರದಿಗಳ ಪ್ರಕಾರ, ಹರಿದಾಸ್ ಅವರು ಸಿಪಿಐಎಂನ ಸಕ್ರಿಯ ಸದಸ್ಯರಾಗಿದ್ದರು ಮತ್ತು ಅವರು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ಅವರ ಮನೆಯ ಮುಂದೆ ದಾಳಿ ಮಾಡಿದ್ದಾರೆ.

ಶಿವಮೊಗ್ಗ: ಹರ್ಷ ಹತ್ಯೆಗೆ ಕಾರಣ ಏನು? ಸಾವಿನ ಮನೆಯಲ್ಲಿ ಸುಳ್ಳಿನ ಮೆರವಣಿಗೆಶಿವಮೊಗ್ಗ: ಹರ್ಷ ಹತ್ಯೆಗೆ ಕಾರಣ ಏನು? ಸಾವಿನ ಮನೆಯಲ್ಲಿ ಸುಳ್ಳಿನ ಮೆರವಣಿಗೆ

ಕೊಲೆ ಆರೋಪದ ಮೇಲೆ ಸಿಪಿಐ(ಎಂ) ನ್ಯೂ ಮಾಹೆ ಮತ್ತು ತಲಚ್ಚೇರಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೇರಳದಲ್ಲಿ ರಾಜಕೀಯ ಪ್ರೇರಿತ ಕೊಲೆಗಳು
2016ರಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿಯ ಕಾರ್ಯಕರ್ತ ವಿನೀಶ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕಣ್ಣೂರು ಜಿಲ್ಲೆ ಇರಿಟ್ಟಿಯ ತಿಲ್ಲಂಗೇರಿ ಸಮೀಪದ ನಿವಾಸಿಯಾಗಿದ್ದ. ಇದಕ್ಕೂ ಮುನ್ನ ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ಹಾಗೂ ರಾಷ್ಟೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ​ನ ಸಕ್ರಿಯ ಕಾರ್ಯಕರ್ತ ಸಿ.ಕೆ ರಾಮಚಂದ್ರನ್ ಅವರನ್ನು ಕಚ್ಚಾ ಬಾಂಬ್ ಎಸೆದು ಕೊಲೆ ಮಾಡಲಾಗಿತ್ತು.

2017ರಲ್ಲಿ ಸಿಪಿಐ(ಎಂ) ಕಾರ್ಯಕರ್ತ ಧನರಾಜ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಆರೆಸ್ಸೆಸ್ -ಬಿಜೆಪಿ ಕಾರ್ಯಕರ್ತ ಚೂರಕ್ಕತ್ತು ಬಿಜು ಅವರನ್ನು ಕಣ್ಣೂರಿನ ಪಯಣ್ಣೂರು ಬಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕಕ್ಕಂಪರ ಮಂಡಲದ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಬಿಜು ಅವರು ಧನರಾಜ್ ಕೊಲೆ ಕೇಸಿನಲ್ಲಿ 12ನೇ ಆರೋಪಿಯಾಗಿದ್ದಾರೆ. ಧನರಾಜ್ ಅವರನ್ನು ಜುಲೈ 2016ರಲ್ಲಿ ಅವರ ಮನೆಯಲ್ಲೇ ಹತ್ಯೆ ಮಾಡಲಾಗಿತ್ತು.

ಕಣ್ಣೂರು ಬಿಜೆಪಿ ಕಾರ್ಯಕರ್ತ ಅಂಡಲ್ಲೂರ್ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿದ್ದರು.

ಸಿಪಿಐಎಂ ಹಾಗೂ ಬಿಜೆಪಿ ನಡುವಿನ ರಾಜಕೀಯ ದ್ವೇಷಕ್ಕೆ 2016-2018ರ ಅವಧಿಯಲ್ಲಿ 12ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು.

English summary
A worker of the Communist Party of India (Marxist) was allegedly hacked to death in Kerala’s Kannur. The incident took place at New Mahe in Thalassery around 2 am on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X